Advertisement

ವಿಶೇಷ ಸ್ಥಾನಮಾನ ಕೊಡಿ, ಸಿಕ್ಖ್ ತೀವ್ರವಾದಿಗಳಿಂದ ಒತ್ತಾಯ

11:15 AM Feb 28, 2018 | Team Udayavani |

ಹೊಸದಿಲ್ಲಿ:  ಸಿಕ್ಖ್ ಸಮುದಾಯದ ತೀವ್ರವಾದಿಗಳ ಗುಂಪೊಂದು ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ಗೆ ಕ್ರೈಸ್ತ ಸಮುದಾಯದ ಪರಮೋಚ್ಚ ಧರ್ಮಗುರು ಪೋಪ್‌ ಇರುವ ಸ್ಥಳ ವ್ಯಾಟಿಕನ್‌ ಸಿಟಿಗೆ ಸಮಾನವಾದ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿ ಸಿದೆ. ಇದರ ಜತೆಗೆ ಸಮುದಾಯದ ಪವಿತ್ರ ಕ್ಷೇತ್ರಗಳಾಗಿರುವ ಅಕಾಲ್‌ ತಖ್‌¤, ಹರ್ಮಂದರ್‌ ಸಾಹಿಬ್‌ಗೂ ಅದೇ ಮಾದರಿಯ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದೆ.

Advertisement

1984ರಲ್ಲಿ ನಡೆಸಲಾಗಿದ್ದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಕ್ಷಮೆ ಯಾಚಿಸಬೇಕು ಮತ್ತು ಬ್ಲೂ ಸ್ಟಾರ್‌ ಕಾರ್ಯಾಚರಣೆ ಮತ್ತು ಎಲ್ಲ ರೀತಿಯ ಸಿಕ್ಖ್ ವಿರೋಧಿ ದಂಗೆಗಳ ಬಗ್ಗೆ ಮುಕ್ತ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಜತೆ ನಡೆಸಲಾಗಿರುವ ರಹಸ್ಯ ಮಾತುಕತೆ ವೇಳೆ ಬೇಡಿಕೆ ಮುಂದಿಡಲಾಗಿದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್‌ ಕಿಂಗ್‌ಡಮ್‌ಗೆ ಭೇಟಿ ನೀಡು ವುದಕ್ಕಿಂತ ಮೊದಲು ಅನೌಪಚಾರಿಕವಾಗಿ ಮಾತುಕತೆಗೆ ಚಾಲನೆ ನೀಡಲಾಗಿತ್ತು. ಭೇಟಿಯ ಬಳಿಕ ಅಧಿಕೃತವಾಗಿ ಮಾತುಕತೆಗೆ ಚಾಲನೆ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ಸಿಕ್ಖ್ ಸಮುದಾಯದ 20 ಮಂದಿ ಹೋರಾಟಗಾರರಿಗೆ ಭಾರತ ಪ್ರವೇಶಕ್ಕೆ ಇರುವ ನಿಷೇಧ ಹಿಂಪಡೆಯಬೇಕು ಮತ್ತು ಭಾರತದ ಕಾರಾಗೃಹದಲ್ಲಿರುವ 20 ಮಂದಿಯನ್ನು ಬಿಡುಗಡೆ ಮಾಡಬೇಕು ಎಂಬ ಪೂರ್ವಷರತ್ತು ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next