Advertisement
ಕೇಂದ್ರದ ತಂಡದ ಜತೆ ಸಮಾಲೋಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಪರಿಸ್ಥಿತಿ, ಬೆಳೆ ಹಾನಿಯ ಅಂದಾಜು, ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.
Related Articles
Advertisement
ಕಡಲಕೊರೆತ ಹಾನಿ: ಹೆಚ್ಚಿನ ನೆರವು ಅಗತ್ಯರಾಜ್ಯ 330 ಕಿ.ಮೀ. ಕರಾವಳಿ ಪ್ರದೇಶವನ್ನು ಹೊಂದಿದ್ದು, ಸಮುದ್ರ ಕೊರೆತ ತಡೆಗಟ್ಟಲು ಹಲವು ಸೂಕ್ಷ್ಮ ಪ್ರದೇಶಗಳಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಗಳನ್ನು ಕೈಗೊಳ್ಳಲಾಗಿದೆ. ಆದರೆ ಹೊಸ ಜಾಗಗಳಲ್ಲಿ ಕಡಲಕೊರೆತ ಉಂಟಾಗಿದ್ದು ಸಾಕಷ್ಟು ಹಾನಿ ಉಂಟಾಗಿದೆ. ರಾಜ್ಯದ ಸಂಪೂರ್ಣ ಕರಾವಳಿ ಪ್ರದೇಶದ ರಕ್ಷಣೆಗೆ ಕೇಂದ್ರದ ನೆರವಿನ ಅಗತ್ಯವಿದೆ ಎಂದು ಬೊಮ್ಮಾಯಿ ಪ್ರತಿಪಾದಿಸಿದರು. ಮಳೆ ಹಾನಿ ಪರಿಶೀಲನೆ: ದ.ಕ. ಜಿಲ್ಲೆಗೆ ತಂಡ ಆಗಮನ
ಮಂಗಳೂರು: ಮಳೆ ಹಾನಿ ಪರಿಶೀಲಿ ಸಲು ಕೇಂದ್ರ ತಂಡ ಬುಧವಾರ ಜಿಲ್ಲೆಗೆ ಆಗಮಿಸಿದೆ. ಐಎಎಸ್ ಶ್ರೇಣಿಯ ಮೂವರು ಕೇಂದ್ರ ಸರಕಾರದ ಅಧಿಕಾರಿಗಳು ಹಾಗೂ ರಾಜ್ಯದಿಂದ ಓರ್ವ ಅಧಿಕಾರಿಯನ್ನು ಕೇಂದ್ರ ತಂಡ ಒಳಗೊಂಡಿದೆ. ಕೇಂದ್ರ ತಂಡ ಕೊಡಗಿನಿಂದ ಬುಧವಾರ ಸಂಜೆಯ ವೇಳೆಗೆ ಜಿಲ್ಲೆಗೆ ಆಗಮಿಸಿತು. ಸುಳ್ಯತಾಲೂಕಿನ ಹರಿಹರ ಪಲ್ಲತಡ್ಕ, ಕೊಲ್ಲಮೊಗರು,ಕಲ್ಮಕಾರು ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಮಳೆಯಿಂದ ಆಗಿರುವ ಹಾನಿಯ ಮಾಹಿತಿಯನ್ನು ಜಿಲ್ಲಾಡಳಿತದಿಂದ ಪಡೆದುಕೊಂಡಿತು. ದ.ಕ.ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಚಿತ್ರಣದ ಮೂಲಕ ಸಂಭವಿಸಿರುವ ನಷ್ಟಗಳ ಬಗ್ಗೆ ತಂಡಕ್ಕೆ ವಿವರಿಸಿದರು. ಕೇಂದ್ರ ತಂಡ ಗುರುವಾರವೂ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಲಿದೆ.