Advertisement

ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ: ವಿಶ್ವನಾಥ

09:03 PM Sep 01, 2022 | Team Udayavani |

ಕವಿತಾಳ: ಗ್ರಾಹಕರೊಂದಿಗೆ ಸೌಜನ್ಯದ ವರ್ತನೆ ಮತ್ತು ಅವರ ಸಮಸ್ಯೆಗೆ ಸ್ಪಂದಿಸುವ ಮನೋಭಾವ ಸಿಬ್ಬಂದಿ ಬೆಳೆಸಿಕೊಳ್ಳಬೇಕು. ಆರ್ಥಿಕ ವ್ಯವಹಾರದ ಜತೆಗೆ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಕವಿತಾಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ್‌ ತೋರಣದಿನ್ನಿ ಹೇಳಿದರು.

Advertisement

ಸಂಘದ 21ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಶಿಸ್ತು, ಸಮಯ ಪ್ರಜ್ಞೆ ಮತ್ತು ಉತ್ತಮ ನಡವಳಿಕೆ ಸಂಘದ ಏಳ್ಗೆಗೆ ಕಾರಣವಾಗುತ್ತದೆ. ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಪರಿಸರ ಕಾಪಾಡದಿದ್ದರೆ ಎದುರಾಗಬಹುದಾದ ಆಪತ್ತುಗಳ ಗಮನಲ್ಲಿಟ್ಟುಕೊಂಡು ಸಹಕಾರ ಸಂಘದ ಲಾಭಾಂಶದಲ್ಲಿ ಶೇ.1ರಷ್ಟು ಸಸಿ ನೆಡಲು ಮತ್ತು ಪರಿಸರ ಕಾಪಾಡಲು ಬಳಸುವ ಉದ್ದೇಶ ಹೊಂದಲಾಗಿದೆ ಎಂದರು.

ಅಡಮಾನ ಸಾಲದಿಂದ ರೈತರಿಗೆ ಹೆಚ್ಚಿನ ಲಾಭವಾಗಿದ್ದು, ಭತ್ತದ ದರ ಏರಿಕೆಯಿಂದ ರೈತರು ಹೆಚ್ಚಿನ ಲಾಭ ಪಡೆದಿದ್ದಾರೆ. ಹೀಗಾಗಿ ಸಂಘ ಪರೋಕ್ಷವಾಗಿ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆರ್‌ಬಿಐ ನಿರ್ದೇಶನದಂತೆ ಠೇವಣಿದಾರರಿಗೆ ಯಾವುದೇ ಕ್ಷಣದಲ್ಲೂ ಹಣ ಮರು ಪಾವತಿಗೆ ತೊಂದರೆಯಾಗದಂತೆ ಮರು ಪಾವತಿ ಮಾಡಲು ಸಂಘ ವ್ಯವಸ್ಥೆ ಹೊಂದಿದೆ. ಉತ್ತಮ ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ, ಸಾಮಾಜಿಕ ಕಾರ್ಯಗಳಲ್ಲಿ ಸಂಘ ತೊಡಗಿಸಿಕೊಂಡಿದೆ. 6 ಲಕ್ಷ ಬಂಡವಾಳದೊದಿಗೆ ಆರಂಭವಾದ ಸಂಘ ಪ್ರಸ್ತುತ ವರ್ಷ 1.2 ಕೋಟಿ ನಿವ್ವಳ ಲಾಭ ಪಡೆದಿದೆ. ಶೇರುದಾರರಿಗೆ ಶೇ.15 ಡಿವಿಡೆಂಡ್‌ ನೀಡಲಾಗುತ್ತಿದೆ ಎಂದರು.

ಈ ವೇಳೆ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಇಟಗಿ, ನಿರ್ದೇಶಕರಾದ ಪ್ರದೀಪಕುಮಾರ್‌, ಸೂರ್ಯಕಾಂತಗೌಡ ಗೂಗೆಬಾಳ, ಸಿಇಒ ಶ್ರೀನಿವಾಸ ಕುಲಕರ್ಣಿ, ವ್ಯವಸ್ಥಾಪಕ ಶಿವನಗೌಡ ವಟಗಲ್‌, ಬಸವರಾಜ, ರಮೇಶ, ಹನುಮೇಶ ಬಸಾಪುರ, ಸಿದ್ರಾಮೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next