Advertisement

ಎಲೆಕ್ಟ್ರಿಕ್‌ ವಾಹನ ನೀತಿ ಕೈಬಿಟ್ಟ ಕೇಂದ್ರ

06:25 AM Feb 17, 2018 | Team Udayavani |

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್‌ ವಾಹನ(ಇವಿ) ನೀತಿ ಜಾರಿಗೊಳಿಸುವ ಮಹತ್ತರ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿತ್ತು. ಆದರೆ ಈ ನೀತಿಯನ್ನು ಈಗ ಸರ್ಕಾರ ಹಿಂಪಡೆದಿದೆ.

Advertisement

ಸರ್ಕಾರದ ಈ ಕ್ರಮದಿಂದ ಎಲೆಕ್ಟ್ರಿಕ್‌ ಕಾರು ತಯಾರು ಮಾಡಲು ಇನ್ನೂ ಸಿದಟಛಿರಿರದಿದ್ದ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು ನಿಟ್ಟುಸಿರು ಬಿಟ್ಟಂತಾಗಿದೆ.

ಸದ್ಯ ದೇಶಕ್ಕೆ ಎಲೆಕ್ಟ್ರಿಕ್‌ ವಾಹನ ನೀತಿಯ ಅಗತ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಗುರುವಾರ
ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

2030ರ ಒಳಗೆ ದೇಶದಲ್ಲಿ ಕೇವಲ ಎಲೆಕ್ಟ್ರಿಕ್‌ ವಾಹನಗಳು ಮಾತ್ರ ಸಂಚರಿಸಬೇಕು ಎಂಬ ಯೋಜನೆಯನ್ನು ಸರ್ಕಾರ ಹೊಂದಿತ್ತು.ಪ್ರತಿದಿನ ಮಾರುಕಟ್ಟೆಗೆ ಹೊಸ ತಂತ್ರಜ್ಞಾನ ಕಾಲಿಡುತ್ತದೆ. ತಂತ್ರ ಜ್ಞಾನ ಸರ್ಕಾರದ ನೀತಿ, ನಿಯಮ ಗಳಿಗಿಂತ ಮುಂದಿರುತ್ತದೆ.

ತಂತ್ರಜ್ಞಾನ ಬೆಳೆದಂತೆ ದೇಶದಲ್ಲಿ ಬದಲಾವಣೆಗಳೂ ತನ್ನಿಂತಾನೇ ಆಗುತ್ತವೆ. ಹಾಗಾಗಿ ಎಲೆಕ್ಟ್ರಿಕ್‌ ವಾಹನಗಳೂ ಕೂಡ ದೇಶದಲ್ಲಿ ಕ್ರಮೇಣ ಚಲಾವಣೆಗೆ ಬರುತ್ತವೆ. ಅದಕ್ಕೋಸ್ಕರ ನೀತಿ ರೂಪಿಸುವ ಅಗತ್ಯವಿಲ್ಲ ಎಂದು ಮನವರಿಕೆಯಾದ ಕಾರಣ ಸರ್ಕಾರ ಈ ನಿಯಮವನ್ನು ಹಿಂಪಡೆದಿದೆ ಎಂದು ಗಡ್ಕರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next