Advertisement

ಸರ್ಕಾರಿ ಶಾಲೆಯಲ್ಲಿ ಗಣಕ ಶಿಕ್ಷಣ ಆದ್ಯತೆಯಾಗಿಸಿ

04:55 PM Oct 08, 2021 | Team Udayavani |

ಕೋಲಾರ: ಸ್ಪರ್ಧಾತ್ಮಕ ಪ್ರಪಂಚದಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸರ್ಕಾರಿ ಶಾಲಾ ಮಕ್ಕಳಿಗೂ ಗಣಕಯಂತ್ರ ಶಿಕ್ಷಣ ಇಂದಿನ ಆದ್ಯತೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌ ತಿಳಿಸಿದರು.

Advertisement

ನಗರದ ಕಠಾರಿಪಾಳ್ಯದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಪರಿಶಿಷ್ಟ ಜಾತಿ ವಿಶೇಷ ಯೋಜನೆ, ಪರಿಶಿಷ್ಟ ವರ್ಗಗಳ ಉಪಯೋಜನೆ, ಶಿಕ್ಷಕರ, ವಿದ್ಯಾರ್ಥಿ ಕಲ್ಯಾಣನಿ ಧಿ ಯೋಜನೆಗಳಡಿ ಸರ್ಕಾರಿಪ್ರೌಢಶಾಲೆಗಳಿಗೆ ನೀಡಿರುವ ಗಣಕಯಂತ್ರಗಳ ಬಳಕೆ, ಪ್ರಯೋಗಾಲಯ ಉಪಯೋಗದ ಕುರಿತ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರಿ ಶಾಲೆಗಳು ಸಜ್ಜಾಗಬೇಕಾಗಿದೆ ಎಂದ ಅವರು, ಶಾಲೆಗಳ ಇಂದಿನ ಮಕ್ಕಳ ದಾಖಲಾತಿ ಸೇರಿ ಎಲ್ಲವೂ ಆನ್‌ಲೈನ್‌ಮಯವಾಗಿದೆ. ಸರ್ಕಾರಿ ಪ್ರೌಢಶಾಲೆಗಳಿಗೆ ಈಗಾಗಲೇ ತಲಾ 10 ಸುಧಾರಿತ ಗಣಕ ಯಂತ್ರ ಒದಗಿಸಲಾಗಿದೆ, ಅದಕ್ಕಾಗಿ ಕೊಠಡಿಸಜ್ಜುಗೊಳಿಸಲಾಗಿದೆ. ಶಿಕ್ಷಕರಿಗೆ ಟಾಲ್ಪ್ ತರಬೇತಿ ಮೂಲಕ ಕಂಪ್ಯೂಟರ್‌ ಜ್ಞಾನ ನೀಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿಯತ್ತ ಸಾಗಿರಿ: ಮಕ್ಕಳಿಗಾಗಿ ನೀಡಿರುವ ಕಂಪ್ಯೂಟರ್‌ಗಳ ಬಳಕೆಯಾಗಬೇಕು, ಅವುಗಳನ್ನು ಸುಸ್ಥಿತಿಯಲ್ಲಿಟ್ಟು, ಮಕ್ಕಳಿಗೆ ಗಣಕ ಶಿಕ್ಷಣ ನೀಡಿ ಎಂದು ಕಿವಿ ಮಾತು ಹೇಳಿದ ಡಿಡಿಪಿಐ ಅವರು, ಸರ್ಕಾರಿ ಶಾಲೆಗಳು ಸಮುದಾಯದ ಸಹಭಾಗಿತ್ವ ಪಡೆದು ಮತ್ತಷ್ಟು ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.

ಗಣಕಯಂತ್ರ ಕಲಿಕೆ ಇಂದು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಜೀವನಧಾರದ ಶಿಕ್ಷಣವಾಗಿದೆ. ಸರ್ಕಾರವೂ ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡುತ್ತಿದ್ದು, ಎಲ್ಲಾ ಇಲಾಖೆ, ಕಚೇರಿಗಳ ಕಾರ್ಯವೂ ಆನ್‌ಲೈನ್‌ಗೆ ಬದಲಾಗುತ್ತಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ;- ಎಚ್ ಡಿಕೆಗೆ ಅಧಿಕಾರ ಹಚ್ಚಿಕೊಂಡಾಗ ಆರ್ ಎಸ್ಎಸ್ ಅಂತ ಗೊತ್ತಿರಲಿಲ್ವಾ?: ನಾರಾಯಣ ಸ್ವಾಮಿ

ಎಜುಕೇಷನಲ್‌ ಚಾನೆಲ್‌: ರಾಜ್ಯ ಶಿಕ್ಷಣ, ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯಿಂದ ಈಗಾಗಲೇ ಎಜುಕೇಷನಲ್‌ ಚಾನೆಲ್‌ ಆರಂಭಿಸುವ ಚಿಂತನೆ ನಡೆದಿದ್ದು, ಅದಕ್ಕಾಗಿ ಸ್ಟುಡಿಯೋ ನಿರ್ಮಾಣಕಾರ್ಯವೂ ಪ್ರಗತಿಯಲ್ಲಿದೆ. ಕೋವಿಡ್‌ ಸಂದರ್ಭದಲ್ಲಿ ಆದ ಕಲಿಕಾ ಹಿನ್ನಡೆಯನ್ನು ಈಗ ಸರಿದೂಗಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ, ಅದನ್ನು ಸಮರ್ಥವಾಗಿ ನಿರ್ವಹಿಸಿ ಎಂದ ಅವರು, 8 ಮತ್ತು 9ನೇ ತರಗತಿಗೆ ಬಾರದೇ ಇಂದು ಮಕ್ಕಳು ನೇರವಾಗಿ 10ನೇ ಭೌತಿಕ ತರಗತಿಗಳಿಗೆ ಬರುತ್ತಿದ್ದಾರೆ ಎಂದು ವಿವರಿಸಿದರು.

ನಿರಂತರ ಕಲಿಕೆ ಅಗತ್ಯ: ಕೋಲಾರ ಜಿಲ್ಲಾ ಶಿಕ್ಷಣ ಸಂಶೋಧನಾ ಸಂಸ್ಥೆ ಡಯಟ್‌ ಅನ್ನು ಸಹಾ ಮುಂದಿನ ದಿನಗಳಲ್ಲಿ ಶಿಕ್ಷಕರ ಕಲಿಕಾ ದೇವಾಲಯದ ಮಾದರಿ ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ಶಿಕ್ಷಕರಿಗೆ ಸ್ಪರ್ಧಾತ್ಮಕ ಸವಾಲುಗಳಿಗೆ ತಕ್ಕಂತೆ ನಿರಂತರ ಕಲಿಕೆ ಇಂದು ಅಗತ್ಯವಿದೆ ಎಂದು ಹೇಳಿದರು. ನವೋದಯ ಶಾಲೆಗಾಗಿ ಡಯಟ್‌ ಕಟ್ಟಡದ ಸ್ವಲ್ಪ ಭಾಗ ನೀಡಿದ್ದು, ಅವರು ಸ್ವಂತ ಕಟ್ಟಡ ನಿರ್ಮಿಸಿ ಅಲ್ಲಿಗೆ ಸ್ಥಳಾಂತರವಾಗಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರ ತರಬೇತಿಗೆ ಪೂರಕ ವಾತಾವರಣ, ಸುಂದರ ಉದ್ಯಾನ ನಿರ್ಮಿಸುವ ಉದ್ದೇಶವಿದೆ ಎಂದು ವಿವರಿಸಿದರು.

ಗಣಕ ಕೊಠಡಿಯ ಭದ್ರತೆಗೆ ಕ್ರಮವಹಿಸಿ: ಡಯಟ್‌ ಹಿರಿಯ ಉಪನ್ಯಾಸಕಿ ಉಮಾ ಸೋಮಶೇಖರ್‌, ಸರ್ಕಾರ ನೀಡಿರುವ ಕಂಪ್ಯೂಟರ್‌ಗಳು ಸದ್ಬಳಕೆಯಾಗಬೇಕು ಮತ್ತು ಅದರ ಸುರಕ್ಷತೆಯೂ ಅಷ್ಟೇ ಮುಖ್ಯ. ಮಕ್ಕಳಿಗೆ ಕಂಪ್ಯೂಟರ್‌ ಬಳಕೆ, ಕಲಿಕೆಗೆ ಅವಕಾಶ ನೀಡಿರುವ ಕುರಿತು ನಿರಂತರವಾಗಿ ಲಾಗ್‌ ಪುಸ್ತಕದ ದಾಖಲೆ ನಿರ್ವಹಿಸಿರಬೇಕು ಎಂದು ತಿಳಿಸಿ, ಮಕ್ಕಳಲ್ಲಿ ಮೊದಲು ಗಣಕಯಂತ್ರ ಬಳಕೆಯ ಕುರಿತು ಅರಿವು ನೀಡಬೇಕು ಎಂದು ತಿಳಿಸಿದರು.

ಚಲನ ವಲನ ಪುಸ್ತಕ ನಿರ್ವಹಿಸಿ: ಗಣಕ ಯಂತ್ರಗಳ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಕೊಠಡಿಗೆ ಗ್ರಿಲ್‌ ಡೋರ್‌, ಕಿಟಕಿ ಅಳವಡಿಸಿದ್ದೀರಿ, ಜತೆಗೆ ಶಿಕ್ಷಕರು ಪ್ರತಿತರಗತಿ ನಡೆಸುವ ಮುನ್ನಾ ಕಂಪ್ಯೂಟರ್‌ ರೂಂನ ಕೀ ಪಡೆಯಲು ನಂತರ ಹಿಂದಿರುಗಿಸಿರುವ ಕುರಿತು ಬೀಗದ ಕೀ-ಚಲನವಲನ ಪುಸ್ತಕ ನಿರ್ವಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಗಣಕಯಂತ್ರ ಪ್ರಯೋಗಾಲಯಬಳಕೆ, ನಿರ್ವಹಣೆ ಕುರಿತಂತೆ ಮಕ್ಕಳ ಕಲಿಕೆಗೆ

ಪೂರಕವಾಗುವಂತೆ ಸಿದ್ಧಗೊಳಿಸುವ ಕುರಿತು ಅರಿವು ಮೂಡಿಸಿದ ಅವರು, ನೀಡಿರುವ ಗಣಕಯಂತ್ರದಲ್ಲಿಮಕ್ಕಳಿಗೆ ಅಗತ್ಯವಾದ 8,9,10ನೇ ತರಗತಿಗಳ ಪಾಠಗಳು ಇದ್ದು, ಅವುಗಳನ್ನು ಮಕ್ಕಳ ನೋಡಿಕಲಿಕೆಯನ್ನು ಆಕರ್ಷಣೀಯವಾಗಿಸಿ ಎಂದರು. ಜಿಲ್ಲಾದ್ಯಂತ ಪರಿಶಿಷ್ಟ ಜಾತಿ, ವರ್ಗಗಳಉಪಯೋಜನೆ, ಶಿಕ್ಷಕರ, ವಿದ್ಯಾರ್ಥಿ ಕಲ್ಯಾಣನಿ ಧಿಯೋಜನೆಯಡಿ ಕಂಪ್ಯೂಟರ್‌ ಪಡೆದುಕೊಂಡಿರುವ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next