Advertisement

ಹೊಗಳಿಕೆ ಬಿಡಿ, ವಾಸ್ತವ ಮಾಹಿತಿ ನೀಡಿ: ರಾಹುಲ್‌

06:15 AM Apr 05, 2018 | |

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳದಿರುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಕಾರ್ಯೋನ್ಮುಖರಾಗಿದ್ದಾರೆ.

Advertisement

ನಗರದಲ್ಲಿ ಬುಧವಾರ ಪಕ್ಷದ ಬ್ಲಾಕ್‌ ಮಟ್ಟದ ಅಧ್ಯಕ್ಷರೊಂದಿಗೆ ಸಂವಾದ ನಡೆಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಸರಿಸಬೇಕಾದ ತಂತ್ರ ಹಾಗೂ ಮಾರ್ಗಗಳ ಬಗ್ಗೆ ಮಾಹಿತಿ ಪಡೆದರು. ಬ್ಲಾಕ್‌ ಮಟ್ಟದ ಅಧ್ಯಕ್ಷರು ಕ್ಷೇತ್ರದ ಶಾಸಕರನ್ನು ಹೊಗಳಿದಾಗ, ಹೊಗಳುವುದನ್ನು ಬಿಡಿ. ಕ್ಷೇತ್ರದಲ್ಲಿ ಏನೂ ಸಮಸ್ಯೆಗಳಲ್ಲವೆ ಎಂಬುದಾಗಿ ಪ್ರಶ್ನಿಸಿದರು. ಶಾಸಕರ ಮುಂದೆಯೇ ಕ್ಷೇತ್ರದ ಸಮಸ್ಯೆ ಹೇಳಲಾಗದ ಕೆಲವರು ಬರಿ ಸಾಧನೆ ವರ್ಣಿಸಿದರು. ಕೆಲವರು ನೀರಿನ ಸಮಸ್ಯೆ ಬಗ್ಗೆ ತಿಳಿಸಿದರು. ಸುಮಾರು 16 ಮಂದಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಜೊತೆ ಅವರು ಸಂವಾದ ನಡೆಸಿದರು.

ಬಳಿಕ, ವರ್ತಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಮೂಲಾಗ್ರ ಬದಲಾವಣೆ ತಂದು ಅತ್ಯಂತ ಸರಳೀಕೃತ ಜಿಎಸ್‌ಟಿ ಜಾರಿಗೊಳಿಸಲಾಗುವುದು ಎಂದರು. ನಂತರ, ಬಾಪೂಜಿ ಅತಿಥಿ ಗೃಹದಲ್ಲಿ ಅಸಂಘಟಿತ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ನಂತರ, ಹೊಳಲ್ಕೆರೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿ, ದಲಿತರ ರಕ್ಷಣೆಗಿದ್ದ ಜಾತಿ ನಿಂದನೆ (ಅಟ್ರಾಸಿಟಿ) ಕಾಯ್ದೆಯನ್ನು ದುರ್ಬಲಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ನಡೆಸಿದ್ದಾರೆ. ಧರ್ಮ, ಜಾತಿ, ಭಾಷೆ ಹೆಸರಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಾ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ರಾಹುಲ್‌ ಗಾಂಧಿ, ಮಧ್ಯೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು. ನಂತರ, ತುಮಕೂರಿಗೆ ಅವರು ಪ್ರಯಾಣ ಬೆಳೆಸಿದರು.

ತುಮಕೂರಲ್ಲೂ ಭರ್ಜರಿ ರೋಡ್‌ ಶೋ: ಬುಧವಾರ ತುಮಕೂರು ನಗರಕ್ಕೆ ಆಗಮಿಸಿದ ರಾಹುಲ್‌ ಗಾಂಧಿ, ಭರ್ಜರಿ ರೋಡ್‌ ಶೋ ನಡೆಸಿದರು.

Advertisement

ಮೊದಲಿಗೆ ಕ್ಯಾತ್ಸಂದ್ರದಲ್ಲಿ ಜನರೊಂದಿಗೆ ಸಂವಾದ ನಡೆಸಿ, ಅಲ್ಲಿಂದ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ
ಬಂದ ರಾಹುಲ್‌ಗೆ ಅಭಿಮಾನಿಗಳು ಪುಷ್ಪಮಾಲೆ ಹಾಕಿ, ಹೂ ಮಳೆ ಸುರಿಸುವ ಮೂಲಕ ಭವ್ಯ ಸ್ವಾಗತ ಕೋರಿದರು. ಬಳಿಕ, ಕುಣಿಗಲ್‌ ರಸ್ತೆಯ ಮೂಲಕ ಗೂಳೂರು,ನಾಗವಲ್ಲಿ, ಹೆಬ್ಬೂರುಗಳಲ್ಲಿ ರೋಡ್‌ ಶೋ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಸಚಿರಾದ ಡಿ.ಕೆ.ಶಿವಕುಮಾರ್‌, ಟಿ.ಬಿ.
ಜಯಚಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next