Advertisement

ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ನೀಡಿ

07:26 PM Oct 09, 2020 | Suhan S |

ಬಾಳೆಹೊನ್ನೂರು: ಭದ್ರಾ ನದಿ ಪ್ರವಾಹದಿಂದ ಬಂಡಿಮಠದಲ್ಲಿ ಮನೆ ಕಳೆದುಕೊಂಡಿರುವಕುಟುಂಬದವರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿರಾಜೇಗೌಡ ಅವರಿಗೆ ನಿರಾಶ್ರಿತರು ಮನವಿ ಮಾಡಿದರು.

Advertisement

ಬಂಡಿಮಠದ ಬಾಲಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ನಿವೇಶನನೀಡುವ ಬಗ್ಗೆ ಚರ್ಚಿಸಲು ಉಪ ವಿಭಾಗಾಧಿಕಾರಿಗಳು ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತ್ವರಿತವಾಗಿ ಕಾಮಗಾರಿ ಮಾಡಿಸಬೇಕು. ಭದ್ರಾನದಿಗೆ ನೂತನ ಸೇತುವೆ ನಿರ್ಮಾಣ ಸಂಬಂಧ ಕೆಲವು ಕುಟುಂಬಗಳ ಮನೆ ತೆರವುಗೊಳಿಸಬೇಕಾಗುತ್ತದೆ. ಈ ಹಿಂದೆ ನಿರಾಶ್ರಿತರಿಗೆ ನಿವೇಶನಗಳನ್ನು ನೀಡಲಾಗಿತ್ತು. ಕೆಲವರು ಮಾರಾಟ ಮಾಡಿ ಅದೇ ಸ್ಥಳದಲ್ಲಿದ್ದಾರೆ.ಒಂದು ಕುಟುಂಬಕ್ಕೆ ಎಷ್ಟು ಬಾರಿ ನಿವೇಶನ ನೀಡಬಹುದೆಂದು ಶಾಸಕರಲ್ಲಿ ಪ್ರಶ್ನಿಸಿದರು ಕೆಲವರಿಗೆ ಪರಿಹಾರದ ಹಣ ಬಂದಿದ್ದು ಮನೆ ಕಟ್ಟುತ್ತಿದ್ದಾರೆ. ಪುನಃ ಇವರಿಗೆ ಸೇತುವೆ ನಿರ್ಮಾಣ ಸಂಬಂಧ ಮನೆ ತೆರವುಗೊಳಿಸಿ ಪರಿಹಾರ ಕೊಡಬೇಕಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕರು, ನೂತನ ಸೇತುವೆ ನಿರ್ಮಾಣದ ಬಗ್ಗೆ ಸ್ಥಳ ಪರೀಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ನನ್ನ ಗಮನಕ್ಕೆ ತಾರದೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ ಎಷ್ಟು ಮನೆಗಳು ತೆರವುಗೊಳಿಸಬೇಕು ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಮನೆ ತೆರವುಗೊಳಿಸಿದವರಿಗೆ ಬದಲಿ ನಿವೇಶನ ನೀಡುವ ಬಗ್ಗೆ ಸ್ಥಳ ಗುರುತಿಸದೆ ಸಭೆ ಕರೆದಿರುವುದು ಸರಿಯಲ್ಲ. ನಿವೇಶನ ಜಾಗ ಗುರುತಿಸಿದ ಮೇಲೆ ನಿರಾಶ್ರಿತರೊಂದಿಗೆ ಸಭೆ ನಡಸಿ ಚರ್ಚಿಸೋಣ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್‌ ಮಾತನಾಡಿ, ನ್ಯಾಯಯುತವಾಗಿ ಪರಿಹಾರ ನೀಡಬೇಕಾಗಿದ್ದು ಸರ್ಕಾರದ ಜವಾಬ್ದಾರಿ ಆಗಿದೆ. ಬದಲಿ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜಿಪಂ ಸದಸ್ಯೆ ಚಂದ್ರಮ್ಮ, ತಾಪಂ ಉಪಾದ್ಯಕ್ಷ ಮಂಜು ಹೊಳೆಬಾಗಿಲು, ತಾಪಂ ಸದಸ್ಯರಾದ ಟಿ.ಎಂ. ನಾಗೇಶ್‌, ರವಿ, ಬಿ. ಕಣಬೂರು ಗ್ರಾಪಂ ಮಾಜಿ ಅದ್ಯಕ್ಷ ಮಹಮ್ಮದ್‌ ಹನೀಫ್‌, ಬನ್ನೂರು ಗ್ರಾಪಂ ಮಾಜಿ ಸದಸ್ಯ ಗೋವಿಂದ ರಾಜು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next