Advertisement

ಸ್ಥಳೀಯ ವಸ್ತುಗಳಿಗೆ ಬ್ರ್ಯಾಂಡ್‌ ಸ್ವರೂಪ ಕೊಡಿ

11:48 PM Dec 14, 2021 | Team Udayavani |

ವಾರಾಣಸಿ: ಸ್ಥಳೀಯವಾಗಿ ಉತ್ಪಾದನೆಗೊಂಡ ವಸ್ತುಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಬೇಕು ಹಾಗೂ ಅವುಗಳದ್ದೇ ಆಗಿರುವ ಒಂದು ಬ್ರ್ಯಾಂಡ್‌ ಸೃಷ್ಟಿಯಾಗುವಂಥ ವಾತಾವಾರಣ ನಿರ್ಮಾಣವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ವಾರಾಣಸಿಯಲ್ಲಿ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಉತ್ತಮ ರೀತಿಯ ಆಡಳಿತ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಜತೆಗೆ ಪಕ್ಷದ ಕಾರ್ಯಕರ್ತರ ಜತೆಗೆ ನಿಕಟ ಸಂಪರ್ಕದಲ್ಲಿ ಇರಬೇಕು ಎಂದು ಸೂಚನೆ ನೀಡಿದ್ದಾರೆ.

ಕರ್ನಾಟಕ, ಉತ್ತರ ಪ್ರದೇಶ, ಉತ್ತರಾಖಂಡ, ಅಸ್ಸಾಂ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಣಿಪುರ, ತ್ರಿಪುರಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಸಿಗಬೇಕು. ಅವುಗಳಿಗೇ ಆಗಿರುವಂಥ ಬ್ರ್ಯಾಂಡ್‌ ಸೃಷ್ಟಿಯಾಗುವಂತೆ ಇರಬೇಕು. ಈ ಮೂಲಕ ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಮಾರುಕಟ್ಟೆ ಸೃಷ್ಟಿಯಾಗಬೇಕು. ಈ ನಿಟ್ಟಿನ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ:ಪ್ರವಾಹ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ

ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ನಡೆದ ಸಮ್ಮೇಳನದಲ್ಲಿ ಆಡಳಿತ ವ್ಯವಸ್ಥೆ ಜನರಿಗೆ ಇರುವಂತೆ ಆಗಬೇಕು. ಜತೆಗೆ ನಿರ್ಧಾರಗಳು ಪಾರದರ್ಶಕವಾಗಿ ಇರಬೇಕು ಮತ್ತು ತ್ವರಿತವಾಗಿ ಜಾರಿಯಾಗುವಂತೆ ಇರಬೇಕು ಎಂದಿದ್ದಾರೆ. ವ್ಯವಸ್ಥೆಯ ಕೊನೆಯ ವ್ಯಕ್ತಿಯ ವರೆಗೆ ಸರಕಾರಗಳು ಕೈಗೊಂಡ ನಿರ್ಧಾರಗಳು ಜಾರಿಯಾಗಿ, ಉಪಯೋಗವಾಗುವಂಥ ಸ್ಥಿತಿ ನಿರ್ಮಾಣವಾಗಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

Advertisement

ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬರುವಂತೆಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಆದೇಶಿಸಿದ್ದಾರೆ. ಮುಖ್ಯಮಂತ್ರಿಗಳು ಅರಿಕೆ ಮಾಡಿಕೊಂಡ ಹಲವು ಸಮಸ್ಯೆಗಳನ್ನು ಪ್ರಧಾನಿ ತಾಳ್ಮೆಯಿಂದ ಆಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next