Advertisement

ಕನ್ನಡ ನುಡಿ ಸೇವೆಗೆ ಅವಕಾಶ ನೀಡಿ: ನಿರಗುಡಿ

07:29 PM Apr 18, 2021 | Team Udayavani |

ಅಫಜಲಪುರ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದ್ದು,ತಾಲೂಕಿನ ಕಸಾಪ ಮತದಾರರು ಸೇವೆ ಸಲ್ಲಿಸಲುಅವಕಾಶ ಮಾಡಿಕೊಡಬೇಕು ಎಂದು ಕಸಾಪಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರೊ| ಬಿ.ಎಚ್‌.ನಿರಗುಡಿ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಸಾಪಮತದಾರರಲ್ಲಿ ಮತಯಾಚಿಸಿ ಮಾತನಾಡಿದಅವರು, ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆಸಾಕಷ್ಟು ಕೆಲಸ ಮಾಡಿದ ಅನುಭವವಿದೆ.

Advertisement

ಹೀಗಾಗಿಕಸಾಪ ಜಿಲ್ಲಾ ಅಧ್ಯಕ್ಷನಾಗಿ ಆಯ್ಕೆ ಮಾಡಿದರೆ ಸಾಹಿತ್ಯಕ್ಷೇತ್ರದಲ್ಲಿ ಹಿರಿಯ ಸಾಹಿತ್ಯ ಆಸಕ್ತರ ಸಲಹೆ-ಸೂಚನೆತೆಗೆದುಕೊಂಡು ಪ್ರಾಮಾಣಿಕವಾಗಿ ಕನ್ನಡನಾಡು-ನುಡಿ ಸೇವೆ ಮಾಡುತ್ತೇನೆ ಎಂದರು.

ನನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ,ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.ಬೇರೊಬ್ಬರಿಗೆ ಅವಕಾಶ ಮಾಡಿಕೊಟ್ಟು, ಅವರಗೆಲುವಿಗೆ ಶ್ರಮಿಸುವೆ. ಹೀಗಾಗಿ ತಾಲೂಕಿನಮತದಾರರು ತಮ್ಮ ಅಮೂಲ್ಯ ಮತ ನೀಡಿಆಯ್ಕೆಮಾಡಬೇಕು ಎಂದು ಕೋರಿದರು.

ಕಸಾಪ ಮಾಜಿ ಗೌರವ ಕಾರ್ಯದರ್ಶಿ ಅಬ್ಟಾಸಲಿನದಾಫ್‌, ಬಿ.ಎಂ. ರಾವ್‌, ಡಾ| ಸಂಗಣ್ಣ ಎಂ. ಸಿಂಗೆಮಾತನಾಡಿ, ಪ್ರೊ| ಬಿ.ಎಚ್‌. ನಿರಗುಡಿ ಜಿಲ್ಲೆಯಲ್ಲಿಸಾಹಿತ್ಯ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಮಾಡುತ್ತಿದ್ದಾರೆ. ಅಲ್ಲದೇ ಹೊಸ ತಲೆಮಾರಿನಸಾಹಿತಿಗಳಿಗೆ ಸಾಹಿತ್ಯದ ಅಭಿರುಚಿ ಹೆಚ್ಚಿಸಲುಪೂರಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಇವರುಆಯ್ಕೆಯಾದರೆ ಜಿಲ್ಲೆ ಸೇರಿದಂತೆ ತಾಲೂಕು,ಹೋಬಳಿ ಮಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳುನಿರಂತರವಾಗಿ ನಡೆಯುತ್ತವೆ ಎಂದು ವಿಶ್ವಾಸವ್ಯಕ್ತಪಡಿಸಿದರು.ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿದ್ದರಾಮರಾಜಮಾನೆ, ಹಿರಿಯ ಸಾಹಿತಿಗಳಾದ ಸಿದ್ದರಾಮಹೊನ್ಕಲ್‌, ಸಿ.ಎಸ್‌. ಮಾಲಿಪಾಟೀಲ, ಯುವಬರಹಗಾರರಾದ ಬಸವರಾಜ ನಿಂಬರ್ಗಿ, ಬಾಪುಗೌಡಬಿರಾದಾರ, ಚಂದ್ರು ಜಮಶೆಟ್ಟಿ ಮಾತನಾಡಿದರು.

Advertisement

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದತಾಲೂಧ್ಯಕ್ಷ ಗಾಂ ಧಿ ದಫೇದಾರ, ಡಾ| ನಾಗಪ್ಪಗೋಗಿ, ಜಿ.ಎಸ್‌. ಮಾಲಿಪಾಟೀಲ, ಶರಣಗೌಡಪಾಟೀಲ ಪಾಳಾ, ಹೈದರ್‌ ಚೌದ್ರಿ, ಮೈಬೂಬಜಮಾದಾರ, ಪ್ರಭಾವತಿ ಮೇತ್ರಿ, ಗೌತಮ ಸಕ್ಕರಗಿ,ಸಿದ್ದು ಶಿವಣಗಿ, ಶಿವಾನಂದ ಪೂಜಾರಿ, ಶಿವಶರಣಬಡದಾಳ, ಕೆ. ನಾರಾಯಣ ರಾಜಶೇಖರ ಪಾಟೀಲಕೊಳ್ಳುರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next