Advertisement

ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಿ

09:38 PM Sep 13, 2019 | Lakshmi GovindaRaju |

ಕೊಳ್ಳೇಗಾಲ: ಗುಡ್ಡಗಾಡು ಮತ್ತು ಹಿಂದುಳಿದ ಜಿಲ್ಲೆಯಲ್ಲಿ ಶೈಕ್ಷಣಿಕ ಸ್ಥಾನದಲ್ಲಿ ಮೊದಲನೇ ಸ್ಥಾನ ದೊರೆತಿರುವುದರ ಹಿಂದೆ ಶಿಕ್ಷಕರ ಪರಿಶ್ರಮ ಇದೆ ಎಂದು ಹನೂರು ಶಾಸಕ ಆರ್‌.ನರೇಂದ್ರ ಹೇಳಿದರು.

Advertisement

ಪಟ್ಟಣದ ನ್ಯಾಷನಲ್‌ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕವಾಗಿ ಮಕ್ಕಳನ್ನು ಮುಂದೆ ತರುವಲ್ಲಿ ಶಿಕ್ಷಕರ ಪರಿಶ್ರಮವಿದೆ. ಶೈಕ್ಷಣಿಕವಾಗಿ ಮತ್ತು ಕ್ರೀಡೆಯಲ್ಲೂ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೇಶದ ಸಮಗ್ರ ಬೆಳವಣಿಗೆ ಶಿಕ್ಷಕರ ಮೇಲೆ ಇದೆ ಎಂದರು.

ಸಮಸ್ಯೆಗಳ ನಿವಾರಣೆಗೆ ಪಯತ್ನ: ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಲು ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ. ಶಿಕ್ಷಕರ ಸಮೂಹ ಸೇರಿ ಶಕ್ತಿ ಕೇಂದ್ರವಾಗಲಿದೆ. ಶಿಕ್ಷಕರ ಹೊರೆ ಕಡಿತ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಸಂಬಂಧಿಸಿದ ಸಚಿವರ ಗಮನ ಸೆಳೆದು ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುವುದಾಗಿ ಹೇಳಿದರು.

ಸಮಾಜಕ್ಕೆ ಮಾರ್ಗದರ್ಶನ ನೀಡಿ: ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದು, ಕೂಡಲೇ ಶಿಕ್ಷಣ ಸಚಿವರು ಗಮನ ಹರಿಸಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದ ಶಾಸಕರು ನಿವೃತ್ತಿ ಹೊಂದಿದ ಶಿಕ್ಷಕರು ಮನೆಯಲ್ಲಿ ಕಾಲಹರಣ ಮಾಡದೆ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.

Advertisement

ನಿವೃತ್ತ ಶಿಕ್ಷಕರಿಗೆ ಸನ್ಮಾನ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌.ಮಹೇಶ್‌ ನಿವೃತ್ತಿ ಹೊಂದಿದ ಶಿಕ್ಷ ಕ ರಾದ ಗುರುಸಿದ್ದಮ್ಮ, ಚಂದ್ರಕಾಂತ, ಮಂಚಯ್ಯ, ನಾಗರತ್ನಮ್ಮ, ತೇರೆಸಾ, ಸುನೀತ, ಖುರ್ಷಿದ್‌ ಬಾನು, ಮುದ್ದನಾರಿ, ನಾಗಮ್ಮ, ಪ್ರಭಾಕರ್‌, ರಮೇಶ್‌, ಸಿದ್ದಪ್ಪಶೆಟ್ಟಿ, ವಿಜಯ ಕುಮಾರ್‌, ರಾಜೇಶ್ವರಿರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉತ್ತಮ ಶಿಕ್ಷಕರಿಗೆ ಸನ್ಮಾನ: ತಾಲೂಕಿನ ವಿವಿಧ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಾದ ಸರಳಾ, ಪಾರ್ವತಿ, ರಾಜಶೇಖರ್‌, ಭಾಗ್ಯಮ್ಮ, ಮಂಜುಳಾ, ಪಾರ್ವತಿ, ಗೋಪಾಲಸ್ವಾಮಿ, ವಸಂತಕುಮಾರಿ, ಸುಂದರ್‌, ನಾಜೀರಾ ಬೇಗಂ, ಪ್ರೌಢಶಾಲೆಯ ಶಿಕ್ಷಕರಾದ ದೇವರಾಜು, ಮುರುಗ, ಧನಲಕ್ಷ್ಮೀ, ಮಹದೇವಸ್ವಾಮಿ, ಸಲ್ಮಾ ಸಿದ್ದಿಕಿ, ಮಂಜುಳಾ, ಸಾಮುವೇಲ್‌, ಬಸವರಾಜು, ಗೀತಾ ಮತ್ತು ಉತ್ತಮ ಪ್ರೌಢಶಾಲೆಗಳಾದ ಟಗರಪುರ, ವಸಂತಕುಮಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಲಿಕಲಿ ಶಿಕ್ಷಕರಿಗೆ ಸನ್ಮಾನ: ನಲಿಕಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದ ಗುಂಡೇಗಾಲ, ಕೆಂಪನಪಾಳ್ಯ, ಗೊಬ್ಬಳಿಪುರ ಶಾಲೆಯ ಮುಖ್ಯ ಶಿಕ್ಷಕರಿಗೆ ಸರ್ಕಾರದಿಂದ ಬಂದಿದ್ದ 5 ಸಾವಿರ ನಗದನ್ನು ನೀಡಿ ಗೌರವಿಸಲಾಯಿತು.

ಶಾಸಕ ಎನ್‌.ಮಹೇಶ್‌ ಮಾತನಾಡಿ, 1848ರಲ್ಲಿ ಜ್ಯೋತಿ ಬಾಪುಲೆರವರು ಶಿಕ್ಷಣವನ್ನು ಜಾರಿಗೆ ತಂದರು. ಅವರ ಪತ್ನಿ ಸಾವಿತ್ರಿ ಬಾಪುಲೆ ಸರ್ವರಿಗೂ ಶಿಕ್ಷಣ ಕೊಟ್ಟರು. ಸಾವಿತ್ರಿ ಬಾಪುಲೆ ಶಿಕ್ಷಣದ ಮಹಾಕ್ರಾಂತಿಯಲ್ಲಿ ತೊಡಗಿದ್ದನ್ನು ತಡೆಗಟ್ಟಲು ಅವರಿಗೆ ಹಲವಾರು ರೀತಿಯ ಅಡೆತಡೆಗಳನ್ನು ಒಡ್ಡಿದ್ದರು. ಇದ್ಯಾವುದಕ್ಕೂ ಅಂಜದ ಅವರು ಸರ್ವರಿಗೂ ಶಿಕ್ಷಣ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಎಂದರು.

ಜ್ಯೋತಿ ಬಾಪುಲೆ ಮತ್ತು ಅವರ ಪತ್ನಿ ಬಾಪುಲೆ ನಡೆದುಬಂದ ಪರಿಶ್ರಮದಿಂದ ಸಾಕ್ಷರತೆಯ ಪ್ರಮಾಣ ಶೇ.74ರಷ್ಟು ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಪಾಕಿಸ್ತಾನದಲ್ಲಿ ಮಲಾಲ ಯೂಸುಫ್ ಮಹಿಳೆಯರಿಗೂ ಶಿಕ್ಷಣ ಕೊಡಿಸುವ ಕ್ರಾಂತಿಯನ್ನು ಹುಟ್ಟು ಹಾಕಿದರು. ಅವರಿಗೆ ನೋಬೆಲ್‌ ಪಾರಿತೋಷಕ ಲಭ್ಯವಾಯಿತು ಎಂದು ಮಹಾತ್ಮರ ಕೊಡುಗೆಯ ಬಗ್ಗೆ ಹೇಳಿದರು.

ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ರಾಜೇಂದ್ರ, ಜಿಪಂ ಸದಸ್ಯ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್‌, ಡಿವೈಎಸ್ಪಿ ನವೀನ್‌ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ನಗರಸಭಾ ಸದಸ್ಯರಾದ ಕವಿತಾ, ಮನೋಹರ್‌, ರಾಮಕೃಷ್ಣ, ನಾಸೀರ್‌ ಷರೀಫ್, ಜಯಮೇರಿ, ತಾಪಂ ಸದಸ್ಯ ಸುರೇಶ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಬುಕಾನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಮಹದೇವಕುಮಾರ್‌, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಉಮಾಶಂಕರ, ಬಿಇಒ ಚಂದ್ರಪಾಟೀಲ್‌, ಬಿಆರ್‌ಸಿ ಮಂಜುಳಾ, ಅಕ್ಷರ ದಾಸೋಹ ಸಹಾಯಕ ರಂಗಸ್ವಾಮಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next