Advertisement

ಟೊಮೆಟೋ ವಹಿವಾಟಿಗೆ ಹೆಚ್ಚುವರಿ ಭೂಮಿ ನೀಡಿ

04:58 PM May 06, 2021 | Team Udayavani |

ಕೋಲಾರ: ಟೊಮೆಟೋ ಸುಗ್ಗಿ ಪ್ರಾರಂಭಆಗುತ್ತಿರುವುದರಿಂದ ಕೋಲಾರ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಗೆ ಹೆಚ್ಚುವರಿ ಜಮೀನನ್ನುಮಂಜೂರು ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಡಾ.ಸೆಲ್ವಮಣಿಗೆ ಮಾಜಿ ಸಚಿವ ಆರ್‌.ವರ್ತೂರುಪ್ರಕಾಶ್‌ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅವರು, ದೇಶದಲ್ಲೇ2ನೇ ಅತಿ ದೊಡ್ಡ ಪ್ರಮುಖ ಟೊಮೆಟೋಮಾರುಕಟ್ಟೆ ಕೋಲಾರದ್ದಾಗಿದ್ದು, ಇಲ್ಲಿನಪ್ರಾಂಗಣದ ವಿಸ್ತೀರ್ಣ ಕೇವಲ 18 ಎಕರೆ 31ಗುಂಟೆ ಇದ್ದು, ಸ್ಥಳಾವಕಾಶ ಕೊರತೆ ಇದೆ. ಈತಾಲೂಕಿನ ರೈತರಲ್ಲದೆ, ಚಿಕ್ಕಬಳ್ಳಾಪುರ,ತುಮಕೂರು, ಬೆಂಗಳೂರು ಗ್ರಾಮಾಂತರ,ಚಿತ್ರದುರ್ಗದಿಂದ ಟೊಮೊಟೋ ಬರುತ್ತದೆ. ಇಲ್ಲಿನಟೊಮೊಟೋ ಹೊರ ದೇಶಕ್ಕೂ ರಫ್ತು ಆಗುತ್ತದೆಎಂದು ಹೇಳಿದರು.

Advertisement

4000 ಜನರ ಸೇರುತ್ತಾರೆ: ಸುಗ್ಗಿ ಸಮಯದಲ್ಲಿದಿನವಹಿ 30 ಸಾವಿರ ಕ್ವಿಂಟಲ್‌ಗ‌ಳಿಗೂ ಹೆಚ್ಚುಟೊಮೊಟೋ ಮಾರುಕಟ್ಟೆ ಪ್ರಾಂಗಣಕ್ಕೆ ಬರುತ್ತದೆ.ರೈತರು ಟೊಮೊಟೋ ಶೇಖರಿಸಲು ಸ್ಥಳವಿಲ್ಲದೆರಸ್ತೆಯಲ್ಲಿ ಹಾಕಿಕೊಳ್ಳುತ್ತಾರೆ. ವರ್ಷಪೂರ್ತಿಟೊಮೊಟೋ ಆವಕವಿರುತ್ತದೆ. ಜೂನ್‌ನಿಂದ ಡಿಸೆಂಬರ್‌ ತಿಂಗಳವರೆಗೂ ಟೊಮೊಟೋ ಸುಗ್ಗಿಕಾಲ ಆಗಿರುತ್ತದೆ. ರೈತರು, ಖರೀದಿದಾರರು,ಹಮಾಲರು, ವಾಹನ ಚಾಲಕರು, ಕ್ಲೀನರ್‌ಗಳು,ಸಾರ್ವಜನಿಕರು ಹೀಗೆ ಹಗಲು ರಾತ್ರಿ 4000 ಜನರಓಡಾಟ ಇರುತ್ತದೆ. ಇದರಿಂದ ಪ್ರಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ ಮತ್ತು ವಾಹನ ದಟ್ಟಣೆಇರುತ್ತದೆ ಎಂದು ತಿಳಿಸಿದರು.

ಮಂಜೂರಾತಿ ನಿರೀಕ್ಷೆ: ಕೋಲಾರ ತಾಲೂಕುವಕ್ಕಲೇರಿ ಹೋಬಳಿ ಚೆಲುವನಹಳ್ಳಿ ಗ್ರಾಮದಸರ್ವೇ ನಂ. 74ರಲ್ಲಿ 30.04 ಎಕರೆ ಮಂಗಸಂದ್ರಗ್ರಾಮದ ಸರ್ವೆ ನಂ.90ರಲ್ಲಿ 29.30 ಎಕರೆಜಮೀನನ್ನು ಮಂಜೂರಾತಿ ಪಡೆಯಲುಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದು,ಈ ಗ್ರಾಮಗಳ ಸರ್ವೇ ನಂ. ಅರಣ್ಯ ಇಲಾಖೆಹಾಗೂ ಕೆರೆ ಅಂಗಳ ಪ್ರದೇಶವಾಗಿದೆ.

ಆದರಿಂದಜಮೀನು ಮಂಜೂರಾಗಿಲ್ಲ. ಪ್ರಸ್ತುತಕಪರಸಿದ್ಧನಹಳ್ಳಿ ಗ್ರಾಮದ ಸರ್ವೇ ನಂ.8ರಲ್ಲಿನ33.12 ಎಕರೆ ಜಮೀನು ಹಾಗೂ ಮಡೇರಹಳ್ಳಿಗ್ರಾಮದ ಸರ್ವೇ ನಂ.35ರಲ್ಲಿನ 50 ಎಕರೆಜಮೀನನ್ನು ಮಾರುಕಟ್ಟೆ ಸಮಿತಿಗೆ ಮಂಜೂರುಮಾಡಲು ಈಗಾಗಲೇ ಡೀಸಿಗೆ ಪ್ರಸ್ತಾವನೆಸಲ್ಲಿಸಿದ್ದು, ಮಂಜೂರಾತಿ ನಿರೀಕ್ಷಿಸ ಲಾಗಿದೆ ಎಂದುಹೇಳಿದರು.ಈ ಬಾರಿ ಕೆ.ಸಿ. ವ್ಯಾಲಿ ನೀರು ಕೆರೆಗೆಬಂದಿರುವುದರಿಂದ ರೈತರು ಹೆಚ್ಚಿನ ಟೊಮೊಟೋ ಬೆಳೆದಿದ್ದಾರೆ.

ಇದರಿಂದ ಆವಕ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತದೆ ಹಾಗೂ ಕೋವಿಡ್‌-19 2ನೇ ಅಲೆ ಇರುವುದರಿಂದ ಇದನ್ನು ನಿಯಂತ್ರಿಸುವ ಸಲುವಾಗಿ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕಧಾರಣೆ ಆಗಲು ಅನುಕೂಲವಾಗುವಂತೆರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಯಾವುದಾದೂ ಸೂಕ್ತ ಸರ್ಕಾರಿ ಜಮೀನನನ್ನು ಮಂಜೂರುಮಾಡಿಕೊಡಲು ಸೂಕ್ತ ಕ್ರಮ ವಹಿಸುವಂತೆ ಕೋರಲಾಗಿದೆ ಎಂದರು.ನಿಯೋಗದಲ್ಲಿ ಎಪಿಎಂಸಿ ಸದಸ್ಯರಾದ ವಿ.ಅಪ್ಪಯ್ಯಪ್ಪ, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ ಪ್ರಸಾದ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next