Advertisement

ವಾಸ್ತು ಪ್ರಕಾರ ಬಿಡಿಎ ನಿವೇಶನ ನೀಡಿ!

11:24 AM Oct 04, 2020 | Suhan S |

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಭೂಮಿ ಸಿಗುವುದೇ ಅಪರೂಪ. ಇದಕ್ಕಾಗಿ ವರ್ಷಗಟ್ಟಲೆ ಕಾಯುವ ಸ್ಥಿತಿ ಇದೆ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದಹಂಚಿಕೆಯಾದ ನೂರಾರು ನಿವೇಶನಗಳನ್ನು ಜನ ತಮಗೆ ಬೇಡ ಎಂದು ವಾಪಸ್‌ ನೀಡುತ್ತಿದ್ದಾರೆ. ಈ ಪೈಕಿ ಬಹುತೇಕರು ನೀಡುತ್ತಿರುವ ಕಾರಣ- ವಾಸ್ತು ದೋಷ!

Advertisement

ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸುಮಾರು 22 ಸಾವಿರ ನಿವೇಶನಗಳಿವೆ. ಇದರಲ್ಲಿ ತಲಾ ಐದು ಸಾವಿರದಂತೆ ಎರಡು ಹಂತಗಳಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದ್ದು, ಇದುವರೆಗೆ 9,970 ನಿವೇಶನಗಳ ಹಂಚಿಕೆ ಕಾರ್ಯಪೂರ್ಣಗೊಂಡಿದೆ. ಅದರಲ್ಲಿ ಶೇ. 10ರಷ್ಟು ಅಂದರೆ 930 ಮಧ್ಯಂತರ ನಿವೇಶನಗಳನ್ನು ಫ‌ಲಾನುಭವಿಗಳು “ತಮ್ಮ ಇಚ್ಛೆಗೆ ತಕ್ಕಂತೆ ಸೈಟ್‌ ಸಿಕ್ಕಿಲ್ಲ. ಹಾಗಾಗಿ, ಈ ಸೈಟ್‌ ಬೇಡ’ ಎಂದು ಹಿಂತಿರುಗಿಸಿದ್ದಾರೆ.

“ಫ‌ಲಾನುಭವಿಗಳು ಹೀಗೆ ಹಿಂತಿರುಗಿಸಲು ಅಧಿಕೃತವಾಗಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಆದರೆ ನಾವಾಗಿಯೇ ವಿಚಾರಿಸಿದಾಗ, ಅವರಿಂದಬರುವಉತ್ತರವಾಸ್ತು ಸರಿಇಲ್ಲ.ಆದ್ದರಿಂದ ಬದಲಿ ಸೈಟ್‌ ಹಂಚಿಕೆ ಮಾಡಿ. ಬೇಕಿದ್ದರೆ ಅಲ್ಲಿಯವರೆಗೂ ಕಾಯಲು ನಾವು ತಯಾರಿದ್ದೇವೆ’ ಎಂಬ ಉತ್ತರ ಬರುತ್ತಿದೆ. ಇನ್ನು ಹಲವರು ಹತ್ತಿರದಲ್ಲಿ ಸ್ಮಶಾನಇದೆ,ಆರ್ಥಿಕ ಸಮಸ್ಯೆ ಮತ್ತಿತರ ಕಾರಣಗಳನ್ನು ನೀಡುತ್ತಾರೆ. ಆದರೆ, ಒಟ್ಟಾರೆ 930 ಜನರಲ್ಲಿ ಬಹುತೇಕರಿಗೆ ವಾಸ್ತುದೋಷವೇ ಅಡ್ಡಿಆಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಡಿಎ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಮಾರ್ಗಸೂಚಿ ದರದ ಅನ್ವಯ ಚದರಡಿಗೆ 2,500 ರೂ. ಇದೆ. 30×40 ಚದರಡಿ ಎಂದು ಲೆಕ್ಕಹಾಕಿದರೂ 930 ನಿವೇಶನಗಳಿಗೆ ಸುಮಾರು 300-350 ಕೋಟಿ ರೂ. ಆಗುತ್ತದೆ. ಮುಂದಿನ ದಿನಗಳಲ್ಲಾದರೂ ಇವುಗಳು ಮಾರಾಟ ಆಗುತ್ತವೆ. ಹೆಚ್ಚು ಹಣವೂ ಬರಬಹುದು. ಕೆಲ ಫ‌ಲಾನುಭವಿಗಳಿಗೆ ವಾಸ್ತು ಸರಿಇಲ್ಲದಿದ್ದರೂ, ಇನ್ನು ಹಲವರಿಗೆ ಸರಿ ಬರಬಹುದು. ಆದೆ, ಈಗ ಸರ್ಕಾರಕ್ಕೆ ಹಣಕಾಸಿನ ತುರ್ತು ಇರುವ ಕಾರಣ ಶೀಘ್ರ ಹಂಚಿಕೆ ಆಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅಧಿಕಾರಿಗಳು, “ಇದೇ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಇನ್ನೂ ಆರು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿದೆ. ಆಗ, ವಾಪಸ್‌ ನೀಡಿದ ಈ 930 ನಿವೇಶನಗಳನ್ನೂ ಸೇರಿಸಲಾಗುವುದು’ ಎಂದೂ ಹೇಳಿದರು.

 ಅಧಿಕಾರಿಗಳಿಗೆ ವಾಸ್ತು ತೊಡಕು :  ಹಿಂದೆ ಸೈಟ್‌ಗಳಿಗಾಗಿ ಜನ ಹತ್ತಾರು ವರ್ಷ ಕಾದು ಕುಳಿತ ಉದಾಹರಣೆಗಳಿವೆ. ಹಂಚಿಕೆಯಾದ ನಂತರ ವಾಪಸ್‌ ಮಾಡಿದವರ ಸಂಖ್ಯೆ ತುಂಬಾ ವಿರಳ. ಅದಕ್ಕೆ ಕೆರೆಪಕ್ಕದಲ್ಲಿಬಫ‌ರ್‌ಝೋನ್‌ನಂತಹಸಕಾರಣಗಳೂ ಇರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ವಾಸ್ತು ಹಾವಳಿ ಹೆಚ್ಚಾಗಿದೆ. “ನಮಗೆ ಉತ್ತರ-ದಕ್ಷಿಣದಲ್ಲಿ ಬೇಕಿತ್ತು. ಪೂರ್ವ-ಪಶ್ಚಿಮದಲ್ಲಿನ ನಿವೇಶನ ದೊರಕಿದೆ’ “ನನ್ನ ಹೆಸರು, ರಾಶಿ ಮತ್ತು ಸೈಟ್‌ ಹಂಚಿಕೆಯಾದ ದಿಕ್ಕು ಒಂದಕ್ಕೊಂದು ಪೂರಕವಾಗಿಲ್ಲ’ ಎನ್ನುವುದು ಸೇರಿ ದಂತೆಹಲವುಕಾರಣನೀಡಿವಾಪಸ್‌ಮಾಡುತ್ತಿದ್ದಾರೆ. ಇವೆಲ್ಲವೂ ಮಧ್ಯಂತರ ನಿವೇಶನಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

ಹೊಸ ತಲೆನೋವು :  ವಾಸ್ತುದೋಷ ಸಮಸ್ಯೆ ಬಿಡಿಎಗೆ ತಲೆನೋವಾಗಿ ಪರಿಣಮಿಸಿದೆ. ಹೀಗೆ ಹಿಂತಿರುಗಿಸಿದ ನಿವೇಶನಗಳನ್ನು ಹೈಕೋರ್ಟ್‌ ಆದೇಶದಂತೆ ಸದ್ಯಕ್ಕೆ ಹರಾಜು  ಮಾಡುವಂತಿಲ್ಲ. ಅತ್ತ ಕೋವಿಡ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರ ಒತ್ತಡ ಹಾಕುತ್ತಿದೆ. ಇದು ಕಗ್ಗಂಟಾಗಿದ್ದು, ಪ್ರಾಧಿಕಾರವು ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಿದೆ.

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next