Advertisement

ವಿಕೃತ ಕಾಮಿಗೆ ಕಠಿಣ ಶಿಕ್ಷೆ  ನೀಡಿ

05:21 PM Apr 21, 2018 | Team Udayavani |

ಬನಹಟ್ಟಿ: ಬನಹಟ್ಟಿಯಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಮೌಲಾಸಾಬ ಬೂದಿಹಾಳನ್ನು ಈಗಾಗಲೇ ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದು, ಇಂತಹ ವಿಕೃತ ಕಾಮಿಗೆ ಮರಣ ದಂಡನೆ ವಿಧಿ ಸಬೇಕು ಎಂದು ಹಿಂದು ಸಂಘಟನೆಗಳು ಒತ್ತಾಯಿಸಿದವು.

Advertisement

ಶುಕ್ರವಾರ ನಗರದ ಈಶ್ವರಲಿಂಗ ಮೈದಾನದಲ್ಲಿ ಹಿಂದು ಸಂಘಟನೆಗಳ ಹಲವಾರು ಪದಾಧಿಕಾರಿಗಳು ಸೇರಿ ಸರ್ಕಾರಕ್ಕೆ ಮನವಿ ಮೂಲಕ ಒತ್ತಾಯಿಸಿದರು. ಇದೇ ಸಂದರ್ಭ ನಂದು ಗಾಯಕವಾಡ ಮಾತನಾಡಿ, ಅಪರಾಧಿ
ಎಷ್ಟೇ ಪ್ರಭಾವಿಯಾಗಿರಲಿ, ಯಾವುದೇ ಸಮುದಾಯಕ್ಕೆ ಸೇರಿದವರಾಗಿರಲಿ ತಕ್ಷಣವೇ ಕಠಿಣ ಶಿಕ್ಷೆಗೆ ಗುರಿಪಡಿಸಿ ನೊಂದ ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದರು.

ಇದೇ ಸಂದರ್ಭ ರಾಜ್ಯ ನೇಕಾರ ಸಂಘಟನೆ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ಮಾತನಾಡಿ, ಈ ಮೊದಲು ಜಮ್ಮು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಇಂತಹ ಘಟನೆಗಳನ್ನು ಕೇಳುತ್ತಿದ್ದೆವು. ಈಗ ನಮ್ಮ ನೇಕಾರ ಕುಟುಂಬದಲ್ಲಿ ನಡೆದಿದ್ದನ್ನು ಕೇಳಿ ತೀವ್ರ ವಿಷಾದವಾಗುತ್ತಿದೆ. ಇಂತಹ ಕಾಮುಕ ವ್ಯಕ್ತಿಗಳನ್ನು ಸಮಾಜದಿಂದ ದೂರವಿಡಬೇಕು. ಅಲ್ಲದೆ ತಕ್ಕ ಶಿಕ್ಷೆ ವಿಧಿಸಿದ್ದಲ್ಲಿ ಮಾತ್ರ ಇಂತಹ ಘಟನೆಗಳು ಮರುಕಳಿಸಲು ಸಾಧ್ಯವಿಲ್ಲ. ಒಟ್ಟಾರೆ ಸರ್ಕಾರ ಕಾನೂನು ಬದಲಿಸುವ ಮೂಲಕ ಅತ್ಯಾಚಾರ ನಡೆಸುವ ವ್ಯಕ್ತಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದರು.

 ಭಗತ್‌ ಸಿಂಗ್‌ ಯುವಕ ಸಂಘ, ಶ್ರೀರಾಮ ಸೇನೆ, ಶಿವಾಜಿ ಮಹಾರಾಜ ಯುವಕ ಸಂಘ, ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌, ಸ್ವಾಮಿ ವಿವೇಕಾನಂದ ಯುವಕ ಸಂಘ, ಧರ್ಮ ಜಾಗರಣ ವೇದಿಕೆ, ನೇಕಾರ ಸಮುದಾಯ, ರೈತ ಸಂಘ, ಜನ ಜಾಗೃತಿ ವೇದಿಕೆ, ಯುವ ಚೇತನ ವೇದಿಕೆ, ಸಂಕಲ್ಪ ಯೂತ್‌ ಫೌಂಡೇಶನ್‌, ದಲಿತ ಸಂಘಟನಾ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಬಸವರಾಜ ಗಾಯಕವಾಡ, ಬಸವರಾಜ ಮನ್ಮಿ, ಮಂಜು ಹಾವಿನಾಳ, ಚನ್ನು ಮಾಲಾಪುರ, ರಾಜೇಂದ್ರ ಮಿರ್ಜಿ, ರವಿ ಕೊರ್ತಿ, ಮಿಲನ್‌ ರಾಮಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

■ಇಳಕಲ್ಲ: ನಗರದ ಎಸ್‌.ಆರ್‌. ಕಂಠಿ ವೃತ್ತದಲ್ಲಿ ರಬಕವಿ-ಬನಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಕುರಿತು ಶುಕ್ರವಾರ ಇಲ್ಲಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

Advertisement

ಏ.18ರಂದು ರಬಕವಿ-ಬನಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಗರಸಭೆ ಮಾಜಿ ಅಧ್ಯಕ್ಷ ಮಹಿಬೂಬಸಾಬ ಬೂದಿಹಾಳ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದು ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಯಾಗಿದ್ದು, ಈ ಘಟನೆಯನ್ನು ಖಂಡಿಸಿ, ಅಪರಾಧಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂದು ಇಳಕಲ್ಲ ನಗರ ಘಟಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ವಿಜಯ ಗೌಡರ ತಹಶೀಲ್ದಾರ್‌ ಮೂಲಕ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಪ್ರಮುಖರಾದ ಅನಿಲ್‌ ಗುರುಬಸಣ್ಣವರ, ವಿನಾಯಕ ಮಲಾರಖಾನ, ಮಂಜು ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next