ಸಜ್ಜಾಗುತ್ತಿದ್ದು, ಆ ನಿಟ್ಟಿನಲ್ಲಿ ಕ್ಯಾಂಟೀನ್‌ಗಳಲ್ಲಿನ ಸ್ವತ್ಛತೆ, ಊಟ ವಿತರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಕೇಟರಿಂಗ್ ಸಿಬ್ಬಂದಿಗೆ ಗುರುವಾರ ತರಬೇತಿ ನೀಡಲಾಯಿತು. ಇದೇ ವೇಳೆ ಪಾಲಿಕೆಯಿಂದ ಅಭಿವೃದ್ಧಿಪಡಿಸಲಾ ಗಿರುವ ಇಂದಿರಾ ಕ್ಯಾಂಟೀನ್ ಆ್ಯಪ್ ಬಳಕೆ ಕುರಿತು ವಲಯ ಜಂಟಿ ಆಯುಕ್ತರಿಗೆ ತರಬೇತಿ ನೀಡಲಾಗಿದೆ. ತಮ್ಮ ವಲಯದಲ್ಲಿನ ವಿವಿಧ ವಾರ್ಡ್‌ಗಳಲ್ಲಿನ ಅಡುಗೆ
ಮನೆಯಿಂದ ಕ್ಯಾಂಟೀನ್‌ಗಳಿಗೆ ಊಟ ರವಾನೆ ಸೇರಿದಂತೆ ಆ್ಯಪ್ ಬಳಕೆ ಕುರಿತು ಅವರಿಗೆ ಮಾಹಿತಿ ನೀಡಲಾಗಿದೆ. ಜತೆಗೆ ಕ್ಯಾಂಟೀನ್‌ಗಳಿಗೆ ಹೆಚ್ಚಿನ ಊಟದ ಅವಶ್ಯಕತೆಯಿದ್ದರೆ ಜಂಟಿ ಆಯುಕ್ತರು ಹೆಚ್ಚಿನ ಆಹಾರಕ್ಕಾಗಿ ಮನವಿ ಮಾಡುವುದು ಅಥವಾ ಆಹಾರ ಪ್ರಮಾಣ ಕಡಿಮೆ ಮಾಡುವುದು ಹೇಗೆ ಎಂಬ ಕುರಿತು ತರಬೇತಿಯಲ್ಲಿ ತಿಳಿಸಿಕೊಡಲಾಗಿದೆ. “ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕರಿಗೆ ನಗುಮೊಗದಿಂದ ಆಹಾರ ವಿತರಿಸಿ” ಎಂದು ಪಾಲಿಕೆಯ ವಿಶೇಷ ಆಯುಕ್ತ ಮನೋಜ್ ರಾಜನ್ ಅವರು ಸಿಬ್ಬಂದಿಗೆ ಸೂಚಿಸಿದ್ದಾರೆ. ಮಲ್ಲೇಶ್ವರ ಐಪಿಪಿ ಸೆಂಟರ್‌ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಕೇಟರಿಂಗ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ಗೆ ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚಾಗಿ ಬರುತ್ತಾರೆ. ಅವರಿಗೆ ಆಹಾರ
ಪೂರೈಸುವುದು ಒಂದು ಉತ್ತಮ ಕಾರ್ಯವೆಂದು ಭಾವಿಸಿ. ನಗುಮುಖದಿಂದ ಅವರಿಗೆ ಆಹಾರ ವಿತರಿಸಿ,’ ಎಂದು ತಿಳಿಸಿದರು.
ಕ್ಯಾಂಟೀನ್‌ಗೆ ಬರುವಂತಹ ಗ್ರಾಹಕರಿಗೆ ಬಿಸಿಯೂಟವನ್ನು ಪೂರೈಸಬೇಕು ಮತ್ತು ಕ್ಯಾಂಟೀನ್‌ನ್ನು ಸದಾ ಸ್ವತ್ಛವಾಗಿರಿಸಿಕೊಳ್ಳಬೇಕು. ಇದರೊಂದಿಗೆ ಅಧಿಕಾರಿಗಳು ಸಿಬ್ಬಂದಿ ಶುಚಿಯಾದ ವಸ್ತ್ರಗಳು ಹಾಗೂ ಆಹಾರ ಪೂರೈಕೆ ಮಾಡುವ ವೇಳೆ ಗ್ಲೌಸ್‌ಗಳನ್ನು
ಹಾಕಿಕೊಳ್ಳಬೇಕು. ಒಂದೊಮ್ಮೆ ಸಿಬ್ಬಂದಿ ಅವುಗಳನ್ನು ಉಲ್ಲಂ ಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಇಂದಿರಾ ಆ್ಯಪ್ ವಿಶೇಷತೆಗಳು:ಇಂದಿರಾ ಕ್ಯಾಂಟೀನ್ ಆ್ಯಪ್ ಮೂಲಕ ಸಾರ್ವಜನಿಕರು ತಾವಿರುವ ಜಾಗದ ಸುತ್ತಮುತ್ತಲಿನಲ್ಲಿರುವ ಐದು ಕ್ಯಾಂಟೀನ್‌ಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರೊಂದಿಗೆ ಆ ದಿನದ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ “ಮೆನು” ಮಾಹಿತಿ ದೊರೆಯಲಿದೆ. ಇದರೊಂದಿಗೆ ಸಾರ್ವಜನಿಕರು ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಊಟ ಮಾಡಿದ ನಂತರಕ್ಯಾಂಟೀನ್ನಲ್ಲಿನ ಆಹಾರದ ಗುಣಮಟ್ಟ ಹಾಗೂ ಸ್ವತ್ಛತೆ ಸೇರಿ ಯಾವುದೇ ಲೋಪಗಳಿದ್ದರೂ ಆ್ಯಪ್ ಮೂಲಕವೇ ದೂರು
ನೀಡಬಹುದಾಗಿದೆ. ಅದಕ್ಕೆ ಅನುಗುಣವಾಗಿ ಪಾಲಿಕೆಯ ಅಧಿಕಾರಿಗಳು ಕ್ಯಾಂಟೀನ್‌ನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ.