Advertisement

ಏ.1ರಿಂದ 2 ಲಕ್ಷ ನೀಡಿ ಚಿನ್ನ ಖರೀದಿಸಿದರೆ ತೆರಿಗೆ ಕೊಡ್ಬೇಕು

03:45 AM Feb 20, 2017 | |

ನವದೆಹಲಿ: ಇನ್ನು ಮುಂದೆ 2 ಲಕ್ಷ ರೂ. ಮೊತ್ತದ ಚಿನ್ನಾಭರಣವನ್ನು ನಗದು ನೀಡಿ ಖರೀದಿ ಮಾಡಿದರೆ ಶೇ.1ರಷ್ಟು ಮೂಲದಲ್ಲಿಯೇ ತೆರಿಗೆ ಪಾವತಿ (ಟಿಸಿಎಸ್‌) ಮಾಡಬೇಕಾಗುತ್ತದೆ. ಸಂಸತ್‌ನಲ್ಲಿ ಮಂಡಿಸಲಾಗಿರುವ ಹಣಕಾಸು ವಿಧೇಯಕ 2017ರಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. 

Advertisement

ಈವರೆಗೆ ಆದಾಯದಲ್ಲಿಯೇ ತೆರಿಗೆ ಸಂಗ್ರಹವನ್ನು 5 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ವ್ಯವಹಾರಕ್ಕೆ ಅನ್ವಯಿಸಲಾಗುತ್ತಿತ್ತು. ಮಾರ್ಚ್‌ನಲ್ಲಿ ಆರಂಭವಾಗಲಿರುವ ಸಂಸತ್‌ ಅಧಿವೇಶನದ ಎರಡನೇ ಹಂತದಲ್ಲಿ ವಿಧೇಯಕ ಚರ್ಚೆಯಾಗಿ ಅಂಗೀಕಾರವಾಗಲಿದೆ. ಈ ಸಂದರ್ಭದಲ್ಲಿ ಚಿನ್ನಾಭರಣವನ್ನೂ ಕೂಡ ಇತರ ಸಾಮಾನ್ಯ ವಸ್ತುಗಳಂತೆಯೇ ಪರಿಗಣಿಸಲಾಗುತ್ತದೆ. ಪ್ರಸ್ತಾವಿತ ತಿದ್ದುಪಡಿ ಏ.1ರಿಂದ ಜಾರಿಗೆ ಬರಲಿದೆ.  ಫೆ.1ರಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ 3 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ವಹಿವಾಟನ್ನು ನಗದು ಮೂಲಕ ಮಾಡಿದರೆ ದಂಡ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಪ್ಪುಹಣವನ್ನು ದೊಡ್ಡ ಪ್ರಮಾಣದಲ್ಲಿ ವಹಿವಾಟಿನಲ್ಲಿ ತೊಡಗಿಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next