Advertisement

ಜಾಧವ್‌ ವಿರುದ್ಧದ ಆರೋಪಪಟ್ಟಿ ಕೊಡಿ: ಪಾಕ್‌ಗೆ ಭಾರತ ಆಗ್ರಹ

03:50 AM Apr 15, 2017 | |

ಇಸ್ಲಾಮಾಬಾದ್‌/ನವದೆಹಲಿ: ಗೂಢಚರ್ರೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೊಳಗಾದ ವಾಯುಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿರುದ್ಧ ಹೊರಿಸಲಾದ ಆರೋಪಗಳ ಪಟ್ಟಿಯನ್ನು ಹಾಗೂ ತೀರ್ಪಿನ ಪ್ರತಿಯನ್ನು ಕೊಡಿ ಎಂದು ಪಾಕ್‌ಗೆ ಭಾರತ ಕೇಳಿದೆ. ಇದರೊಂದಿಗೆ ಜಾಧವ್‌ ಅವರನ್ನು ಭೇಟಿ ಮಾಡಲು ರಾಯಭಾರಿಗೆ ಅವಕಾಶ ಮಾಡಿಕೊಡುವಂತೆ 14ನೇ ಬಾರಿಗೆ ಕೇಳಿಕೊಂಡಿದ್ದು, ಪಾಕ್‌ ಸರ್ಕಾರ ಅದಕ್ಕೆ ಸ್ಪಷ್ಟ ನಿರಾಕರಣೆ ನೀಡಿದೆ. 

Advertisement

ಜಾಧವ್‌ ವಿಚಾರದಲ್ಲಿ ಪಾಕ್‌ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಅವರನ್ನು ಶುಕ್ರವಾರ ಭೇಟಿಯಾದ ಭಾರತೀಯ ರಾಯಭಾರಿ ಗೌತಮ್‌ ಬಂಬಾÌಲೆ ಅವರು, ಜಾಧವ್‌ ಸಂಪರ್ಕಕ್ಕೆ ಅನುವು ಮಾಡಲು ಒತ್ತಡ ಹೇರಿದ್ದಾರೆ. ಜಾಧವ್‌ ವಿರುದ್ಧದ ಆರೋಪ ಪಟ್ಟಿಯ ಪ್ರಮಾಣೀಕೃತ ಪ್ರತಿ ಮತ್ತು ಜಾಧವ್‌ ವಿರುದ್ಧ ಮರಣದಂಡನೆ ವಿಧಿಸಲಾದ ಕೋರ್ಟ್‌ ತೀರ್ಪಿನ ಪ್ರತಿಯನ್ನು ನೀಡುವಂತೆ ಆಗ್ರಹಿಸಲಾಗಿದೆ ಎಂದು ಗೌತಮ್‌ ಹೇಳಿದ್ದಾರೆ. ಜೊತೆಗೆ ರಾಯಭಾರಿ ಭೇಟಿಗೆ 14ನೇ ಬಾರಿಗೆ ಕೇಳಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಗೌತಮ್‌ ಅವರ ಯತ್ನ ಫ‌ಲಕಾಣಲಿಲ್ಲ.

ಇನ್ನು ಜಾಧವ್‌ ವಿಚಾರದಲ್ಲಿ ಭಾರತ ರಾಜತಾಂತ್ರಿಕ ಯತ್ನಗಳನ್ನು ಮುಂದುವರೆಸುವುದಲ್ಲದೇ, ಗಲ್ಲು ಶಿಕ್ಷೆ ಕುರಿತ ಆದೇಶದ ವಿರುದ್ಧ ಜಾಧವ್‌ ಕುಟುಂಬದಿಂದಲೂ ಮೇಲ್ಮನವಿ ಸಲ್ಲಿಸುವ ಬಗ್ಗೆ ಭಾರತ ಆಲೋಚಿಸುತ್ತಿದೆ. 

ವಕಾಲತ್ತು ವಹಿಸದಂತೆ ಆದೇಶ: ಗಲ್ಲುಶಿಕ್ಷೆಗೊಳಗಾದ ಜಾಧವ್‌ ವಿರುದ್ಧ ವೃತ್ತಿನಿರತ ವಕೀಲರು ವಕಾಲತ್ತು ನಡೆಸದಂತೆ ಲಾಹೋರ್‌ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಆದೇಶಿಸಿದೆ. ಅಲ್ಲದೇ ಒಂದು ವೇಳೆ ವಕಾಲತ್ತು ನಡೆಸಿದಲ್ಲಿ ಅವರ ಸದಸ್ಯತ್ವ ರದ್ದುಗೊಳಿಸಲು ಅದು ಒಮ್ಮತದ ತೀರ್ಮಾನ ಕೈಗೊಂಡಿದೆ. ಜೊತೆಗೆ ಜಾಧವ್‌ ವಿಚಾರದಲ್ಲಿ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯಬಾರದು ಎಂದು ಅದು ಸರ್ಕಾರಕ್ಕೆ ಹೇಳಿದೆ.

ಜಾಧವ್‌ ಬದುಕಿದ್ದಾರೆಯೇ ಎಂದು ಪಾಕ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ: ಜಾಧವ್‌ ಅವರು ಬದುಕಿರುವ ಬಗ್ಗೆ ಖಚಿತ ಪಡಿಸಲು ಪಾಕ್‌ ಕೋರ್ಟ್‌ ಮೆಟ್ಟಿಲೇರುವಂತೆ ನಿವೃತ್ತ ಮೇ.ಜ.ಜಿ.ಡಿ.ಭಕ್ಷಿ ಅವರು ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಸರ್ಕಾರ ಜಾಧವ್‌ ಪರವಾಗಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಸಲ್ಲಿಸಬೇಕು. ಜಾಧವ್‌ ಅವರನ್ನು ಪಾಕ್‌ ವಿಪರೀತ ಚಿತ್ರಹಿಂಸೆ ಕೊಟ್ಟು ಮೊದಲೇ ಕೊಂದಿರಬಹುದು. ಈಗ ಅದು ಗಲ್ಲುಶಿಕ್ಷೆಯ ನಾಟಕವಾಡುತ್ತಿರಬಹುದು ಎಂದು ಶಂಕಿಸಿದ್ದಾರೆ.

Advertisement

ಅಮೆರಿಕದಲ್ಲಿ ಪ್ರತಿಭಟನೆ: ಜಾಧವ್‌ ಅವರಿಗೆ ಪಾಕಿಸ್ತಾನ ಗಲ್ಲುಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಈಗ ಅಮೆರಿದಲ್ಲೂ ಪ್ರತಿಭಟನೆ ನಡೆದಿದೆ. ಅಮೆರಿಕನ್‌ ಫ್ರೆಂಡ್ಸ್‌ ಆಫ್ ಬಲೂಚಿಸ್ತಾನ್‌ (ಎಎಫ್ಬಿ) ಹೆಸರಿನ ಬಲೂಚಿಸ್ತಾನ ಪರ ಸಂಘಟನೆ ಮೋಂಬತ್ತಿ ಬೆಳಕಿನ ಪ್ರತಿಭಟನೆಯನ್ನು ವಾಷಿಂಗ್ಟನ್‌ನಲ್ಲಿ ನಡೆಸಿದೆ. ಈ ಪ್ರತಿಭಟನೆಯಲ್ಲಿ ಬಲೂಚಿಗಳು, ಭಾರತೀಯರು, ಆಫ‌^ನ್ನರು ಮತ್ತು ಯಹೂದಿ ಸಮುದಾಯದವರು ಭಾಗಿಯಾಗಿದ್ದರು. ಅಲ್ಲದೇ ಪಾಕ್‌ ಜಾಧವ್‌ ಅವರನ್ನು ಗಲ್ಲಿಗೇರಿಸುವುದನ್ನು ಅಂತಾರಾಷ್ಟ್ರೀಯ ಸಮುದಾಯ ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಪಾಕಿಸ್ತಾನ ಮಾಡಿರುವ ಆರೋಪಗಳೇನು? 
ಗಲ್ಲುಶಿಕ್ಷೆಗೊಳಗಾದ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿರುದ್ಧ ಪಾಕಿಸ್ತಾನ ಅಧಿಕೃತ 
ಆರೋಪ ಪಟ್ಟಿಯನ್ನು ಭಾರತಕ್ಕೆ ನೀಡದಿದ್ದರೂ, ಕೆಲವೊಂದು ಆರೋಪ ಗಳನ್ನು ಅದು ಹೇಳಿದೆ. ಈ ಸಂಬಂಧ ಶುಕ್ರವಾರ ಪಾಕ್‌ ವಿದೇಶಾಂಗ ನೀತಿ ಮುಖ್ಯಸ್ಥ ಸರ್ತಾಜ್‌ ಅಜೀಜ್‌ ಅವರು, ಪತ್ರಿಕಾಗೋಷ್ಠಿಯಲ್ಲಿ ಜಾಧವ್‌ ವಿರುದ್ಧದ ಆರೋಪಗಳನ್ನು ಹೇಳಿದ್ದಾರೆ. ಆದರೆ ಜಾಧವ್‌ ಅವರ ಭಾಗೀದಾರಿಕೆ ಯನ್ನು ಹೇಳುವ ಕುರಿತ ಸಾಕ್ಷ್ಯಗಳನ್ನು ಅವರು ನೀಡಲಿಲ್ಲ. 

ಬಲೂಚಿಸ್ತಾನ ಪ್ರಾಂತ್ಯದ ಗÌದಾರ್‌ ಮತ್ತು ತುರ್ಬಾತ್‌ನಲ್ಲಿ ಸುಧಾರಿತ ಸ್ಫೋಟಕ ಮತ್ತು ಗ್ರೆನೇಡ್‌ ದಾಳಿಯ ನಿರ್ದೇಶನ ಮತ್ತು ಪ್ರಾಯೋಜಕತ್ವ.
ಧಿl    ಜಿವಾನಿ ಬಂದರಿನಲ್ಲಿ ನಾಗರಿಕ ದೋಣಿಗಳು ಮತ್ತು ರಾಡಾರ್‌ ಸ್ಟೇಷನ್‌ ಮೇಲೆ ದಾಳಿಗೆ ನಿರ್ದೇಶನ. 
ಧಿl    ಹವಾಲಾ/ಹುಂಡಿಗಳ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಘಟನೆಗಳಿಗೆ ಹಣ. ವಿಶೇಷವಾಗಿ ಬಲೂಚಿಸ್ತಾನದಲ್ಲಿ  ದೇಶದ ವಿರುದ್ಧ ಚಟುವಟಿಕೆ ನಡೆಸಲು ಯುವಕರಿಗೆ ಪ್ರೇರಣೆ. 

ಬಲೂಚಿಸ್ತಾನದ ಸಿಬಿ ಮತ್ತು ಸುಯಿ ಪ್ರದೇಶದಲ್ಲಿ ಗ್ಯಾಸ್‌ ಪೈಪ್‌ಲೈನ್‌, ಎಲೆಕ್ಟ್ರಿಕ್‌ ಮಾರ್ಗ ನ್ಪೋಟಕ್ಕೆ ಸ್ಫೋಟಕಗಳ ಪ್ರಾಯೋಜಕತ್ವ 

2015ರಲ್ಲಿ ಕ್ವೆಟ್ಟಾದಲ್ಲಿ ನಡೆದ ದಾಳಿಗೆ ಸುಧಾರಿತ ಸ್ಫೋಟಕದ ಪ್ರಾಯೋಜಕತ್ವ. ಇದರಲ್ಲಿ ಅಪಾರ ಜನ ಮೃತಪಟ್ಟು ಆಸ್ತಿಪಾಸ್ತಿ ಹಾನಿಯಾಗಿತ್ತು. 

ಕ್ವೆಟ್ಟಾದ ಹಜರಾಸ್‌ ಮತ್ತು ಶಿಯಾ ಝೈರಿನ್‌ ಯಾತ್ರಾ ಸ್ಥಳದಲ್ಲಿ ದಾಳಿಗೆ ಪ್ರಾಯೋಜಕತ್ವ. 

ಪಾಕ್‌ನ ಗ್ವಾದಾರ್‌, ತುರ್ಬಾತ್‌, ಪುಂಜ್‌ಗುರ್‌, ಪಾಸ್ನಿ, ಜಿವಾನಿಯಲ್ಲಿ 2014-15ರ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಡೆಗಳು, ನಿರ್ಮಾಣ ಕಾಮಗಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸಲು ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು. ಇಲ್ಲಿ ನಡೆದ ದಾಳಿಗಳಲ್ಲಿ ಹಲವಾರು ನಾಗರಿಕರು ಮತ್ತು ಸೈನಿಕರು ಮೃತಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next