Advertisement

Geethanjali Silks ಉಡುಪಿ ಪುರುಷರ ಬಟ್ಟೆಗಳ ವಿಶಾಲ ವಿಭಾಗ ಉದ್ಘಾಟನೆ

04:37 PM Oct 09, 2024 | Team Udayavani |

ಉಡುಪಿ: ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್‌ಕೆ ಸಹೋದರರು ಇದೀಗ ನಗರದ ಗೀತಾಂಜಲಿ ಶಾಪರ್‌ ಸಿಟಿಯಲ್ಲಿರುವ ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನ ಒಂದನೇ ಮಹಡಿಯಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ಪ್ರತ್ಯೇಕ ವಿಭಾಗವನ್ನು “ಗ್ರಾಹಕರೇ ದೇವರು’ ಪರಿಕಲ್ಪನೆಯಡಿ ಬುಧವಾರ ಗ್ರಾಹಕರಿಂದಲೇ ಉದ್ಘಾಟನೆ ನೆರವೇರಿಸಲಾಯಿತು.

Advertisement

ಶ್ಯಾಮಿಲಿ ಚಾರಿಟೆಬಲ್‌ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಮಾತನಾಡಿ, ಸಣ್ಣ ಮಳಿಗೆಯ ಮೂಲಕ ಸತತ ಪರಿಶ್ರಮ, ಶ್ರದ್ಧೆಯಿಂದ ದುಡಿಯುತ್ತಾ ಬಂದಿರುವ ಆರ್‌.ಕೆ. ಸಹೋದರರು ಪ್ರಸ್ತುತ ಜಿಲ್ಲೆಯಲ್ಲಿಯೇ ಬೃಹತ್‌ ವಸ್ತ್ರ ವೈವಿಧ್ಯಗಳ ಮಳಿಗೆಯನ್ನು ತೆರೆಯುವ ಸಾಧನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ, ಗುಣಮಟ್ಟದ ವಸ್ತ್ರ ವಿನ್ಯಾಸಗಳನ್ನು ನೀಡಿದಾಗ ವ್ಯಾಪಾರ ಅಭಿವೃದ್ಧಿ ಹೊಂದುತ್ತದೆ ಎನ್ನುವುದಕ್ಕೆ ಈ ಸಂಸ್ಥೆ ಸಾಕ್ಷಿಯಾಗಿದೆ ಎಂದು ಶುಭ ಹಾರೈಸಿದರು.

ಮಾಂಡವಿ ಬಿಲ್ಡರ್ ಆ್ಯಂಡ್‌ ಡೆವಲಪರ್ನ ಪ್ರವರ್ತಕ ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌ ಅವರು, ನಾಲ್ಕು ದಶಕಗಳ ಹಿಂದೆ ಗುಣಮಟ್ಟದ ವಸ್ತ್ರಗಳ ಖರೀದಿಗೆ ದೂರದ ಪಟ್ಟಣಗಳಿಗೆ ತೆರಳಬೇಕಿತ್ತು. ಆದರೆ ಪ್ರಸ್ತುತ ಉಡುಪಿಯ ಗೀತಾಂಜಲಿ ಸಿಲ್ಕ್$Õನಲ್ಲಿ ಎಲ್ಲ ಬಗೆಯ ಉಡುಗೆ-ತೊಡುಗೆಗಳು ಲಭ್ಯವಿವೆ ಎಂದರು.

ಶಾಸಕ ಯಶ್‌ಪಾಲ್‌ ಎ. ಸುವರ್ಣ, ಪ್ರಮುಖರಾದ ಡಾ| ಕಟ್ಟೆ ರವಿರಾಜ್‌ ಆಚಾರ್ಯ, ಶ್ರೀಶ ನಾಯಕ್‌ ಪೆರ್ಣಂಕಿಲ, ಅಂಡಾರು ದೇವಿಪ್ರಸಾದ್‌ ಶೆಟ್ಟಿ, ಮಹಮ್ಮದ್‌ ಮೌಲಾ, ಹಫೀಝ್ ರೆಹಮಾನ್‌, ನಾರಾಯಣ ಸರಳಾಯ, ಮೊಹಮ್ಮದ್‌ ಮೌಲಾ ಮೊದಲಾದವರು ಶುಭ ಹಾರೈಸಿದರು.

ಗ್ರಾಹಕ ಪ್ರಮುಖರಾದ ಪುರುಷೋತ್ತಮ್‌ ಪಿ. ಶೆಟ್ಟಿ, ಶಕುಂತಲಾ ಮಣಿಪಾಲ, ಧನರಾಜ್‌, ಅಮಿತಾ ವಾಸು ರಾಜಸ್ಥಾನ, ಮಾಲತಿ ತೀರ್ಥಹಳ್ಳಿ, ಕಿಶನ್‌ ಪ್ರಭು ಪಳ್ಳಿ, ಪ್ರದೀಪ್‌ ನಾಯಕ್‌ ನೀರೆ, ಪ್ರಶಾಂತ್‌ ಅಂಬಲಪಾಡಿ, ಇಬ್ರಾಹಿಂ ಉಚ್ಚಿಲ, ನಾರಾಯಣ ಶೆಣೈ, ಕೃಷ್ಣಮೂರ್ತಿ, ಸತ್ಯಾನಂದ ನಾಯಕ್‌, ಉಪೇಂದ್ರ ಶೆಣೈ ಮಣಿಪಾಲ, ರಘುರಾಮ ಪ್ರಭು ಎಣ್ಣೆಹೊಳೆ, ಜಯರಾಮ ಕಾರ್ಕಳ, ಪ್ರಕಾಶ್‌ ಪ್ರಭು, ರತ್ನಾಕರ ಪೆರ್ಡೂರು, ಆಸಿಫ್, ನಿತ್ಯಾನಂದ ನಾಯಕ್‌, ಸಂಸ್ಥೆಯ ಪಾಲುದಾರರಾದ ಲಕ್ಷ ¾ಣ್‌ ನಾಯಕ್‌, ರಮೇಶ್‌ ನಾಯಕ್‌, ಹರೀಶ್‌ ನಾಯಕ್‌ ಮತ್ತು ಪಾಲುದಾರರ ಕುಟುಂಬಸ್ಥರು, ಸಿಬಂದಿ, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.

Advertisement

ಪಾಲುದಾರರಾದ ಸಂತೋಷ್‌ ವಾಳ್ಳೆ ಸ್ವಾಗತಿಸಿ, ರಾಮಕೃಷ್ಣ ನಾಯಕ್‌ ವಂದಿಸಿದರು. ನಿಖೀತಾ ಎರ್ಲಪಾಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next