Advertisement

ಗೀತಾಂಜಲಿ ಜೆಮ್ಸ್‌ ಉಪಾಧ್ಯಕ್ಷ ವಿಪುಲ್‌ ಚೈತಾಲಿಯಾ CBI ವಶಕ್ಕೆ

04:24 PM Mar 06, 2018 | udayavani editorial |

ಹೊಸದಿಲ್ಲಿ : 12,636 ಕೋಟಿ ರೂ.ಗಳ ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಇಂದು ಗೀತಾಂಜಲಿ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ವಿಪುಲ್‌ ಚೈತಾಲಿಯಾ ಅವರನ್ನು ವಶಕ್ಕೆ ತೆಗೆದುಕೊಂಡಿತು.

Advertisement

ಚೈತಾಲಿಯಾ ಅವರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ಸಿಬಿಐ ಕಾರ್ಯಾಲಯಕ್ಕೆ ಪ್ರಶ್ನಿಸುವುದಕ್ಕಾಗಿ ತರಲಾಯಿತು. ಆದರೆ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಚೈತಾಲಿಯಾ ಅವರ ಪಾತ್ರದ ಬಗ್ಗೆ ಸಿಬಿಐ ಯಾವುದೇ ಮಾಹಿತಿ ನೀಡಲಿಲ್ಲ. 

ಗೀತಾಂಜಲಿ ಜೆಮ್ಸ್‌ ಪ್ರಮೋಟರ್‌ ಮೆಹುಲ್‌ ಚೋಕ್ಸಿ ಮತ್ತು ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 12,636 ಕೋಟಿ ರೂ.ಗಳನ್ನು ವಂಚಿಸಿರುವುದಾಗಿ ಆರೋಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next