Advertisement

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

06:47 PM Oct 20, 2021 | Team Udayavani |

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಮುಖ್ಯಸ್ಥೆ, ಭಾರತೀಯ ಮೂಲದ ಗೀತಾ ಗೋಪಿನಾಥ್‌ ಅವರು ಮುಂಬರುವ ಜನವರಿಯಲ್ಲಿ ಐಎಂಎಫ್ ತೊರೆಯಲಿದ್ದು, ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ವಾಪಸಾಗಲಿದ್ದಾರೆ.

Advertisement

ಹಾರ್ವರ್ಡ್‌ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ ವೃತ್ತಿ ಹೊಂದಿರುವ ಅವರು ಸಾರ್ವಜನಿಕ ಸೇವೆಯ ರಜೆಯ ಮೇಲೆ ಐಎಂಎಫ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನವರಿಗೆ ಅವರ ಐಎಂಎಫ್ ಅಧಿಕಾರಾವಧಿ 3 ವರ್ಷ ಪೂರೈಸಲಿದ್ದು, ಮತ್ತೆ ವಿಶ್ವವಿದ್ಯಾಲಯದ ವೃತ್ತಿಗೆ ಮರಳುವುದಾಗಿ ಅವರು ಹೇಳಿಕೊಂಡಿದ್ದಾರೆ.

ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ರಿಸ್ಟಲಿನಾ ಜಾರ್ಜಿವಾ ಅವರು ಗೀತಾ ಗೋಪಿನಾಥನ್‌ ಅವರ ಕೆಲಸವನ್ನು ಶ್ಲಾ ಸಿದ್ದಾರೆ. ಈ ಉನ್ನತ ಹುದ್ದೆಯನ್ನು ನಿರ್ವಹಿಸಿದ ಮೊದಲನೇ ಮಹಿಳೆ ಅವರು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next