Advertisement

ಉತ್ತರ ಕರ್ನಾಟಕ ಮಂಡಕ್ಕಿ ಗಿರ್ಮಿಟ್ ಈ ತರ ಮಾಡಿ ನೋಡಿ…ಏನಂತೀರಿ…

05:47 PM Feb 17, 2023 | ಶ್ರೀರಾಮ್ ನಾಯಕ್ |

ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದು ಮಂಡಕ್ಕಿ ಗಿರ್ಮಿಟ್. ಇದನ್ನು ಮುಂಜಾನೆಯ ಉಪಹಾರವಾಗಿ ಅಥವಾ ಸಾಯಂಕಾಲದ ತಿಂಡಿಯನ್ನಾಗಿಯೂ ಸವಿಯಬಹುದು.

Advertisement

ಈ ಪಾಕವಿಧಾನವು ಅತ್ಯಂತ ಸರಳ ಹಾಗೂ ಸುಲಭ ರೀತಿಯಲ್ಲಿ ತಯಾರಿಸಬಹುದು.

ಸಂಜೆ ಸಮಯದಲ್ಲಿ ಟೀ, ಕಾಫಿ ಜೊತೆ ಏನಾದ್ರೂ ತಿನ್ನಬೇಕು ಅನಿಸ್ತಿದಿಯಾ? ಹಾಗಾದ್ರೆ ಇದು ಅತ್ಯುತ್ತಮವಾದ ಆಯ್ಕೆ. ನೀವು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ, ನಿಮ್ಮವರಿಗೆ ಸವಿಯಲು ನೀಡಿ.

ಬೇಕಾಗುವ ಸಾಮಗ್ರಿಗಳು
ಮಂಡಕ್ಕಿ 2 ಕಪ್, ಈರುಳ್ಳಿ – 2, ಟೊಮೇಟೊ – 1, ಹುರಿಗಡಲೆ ಪುಡಿ – 2 ಚಮಚ, ಜೀರಿಗೆ – 2 ಚಮಚ, ಬೆಲ್ಲ  2 ಚಮಚ, ಸಾಸಿವೆ – 1 ಚಮಚ, ಹುಣಸೆ ರಸ –4 ಚಮಚ, ಹಸಿ ಮೆಣಸಿನಕಾಯಿ – 3, ಅರಿಶಿನ ಪುಡಿ – 1/4 ಚಮಚ, ಎಣ್ಣೆ – 2 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವು-ಸ್ವಲ್ಪ, ತುರಿದ ಕ್ಯಾರೆಟ್- ಸ್ವಲ್ಪ, ಸೇವ್- ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:
-ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
-ನಂತರ ಸಣ್ಣಗೆ ಹಚ್ಚಿದ ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
– ತದನಂತರ ಅರಿಶಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷ ಫ್ರೈ ಮಾಡಿ.
– ಸ್ವಲ್ಪ ಹುಣಸೆ ರಸ ಮತ್ತು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ .
-ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಮಾಡಿಟ್ಟ ಗಿರ್ಮಿಟ್ ಮಸಾಲ, ಸಣ್ಣಗೆ ಕತ್ತರಿಸಿದ ಟೊಮೆಟೊ, ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಹಾಕಿ ಮಿಕ್ಸ್ ಮಾಡಿ.
-ಕೊನೆಯದಾಗಿ ಮೇಲ್ಗಡೆ ಸ್ವಲ್ಪ ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಸೇವ್ ಉದುರಿಸಿ ಮೆಣಸಿನಕಾಯಿ ಬಜ್ಜಿ ಜೊತೆಗೆ ಸವಿಯಿರಿ.

Advertisement

-ಶ್ರೀರಾಮ್ ಜಿ . ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next