ಉತ್ತರ ಕರ್ನಾಟಕದ ಬಹುತೇಕ ತಿಂಡಿ -ತಿನಿಸು ಹಾಗೂ ಚಾಟ್ಸ್‌ಗಳಲ್ಲಿ ಮಿರ್ಚಿ ಬಜ್ಜಿ, ಸುಸಲ, ಮಂಡಕ್ಕಿ ಚುರುಮುರಿಯ ಜತೆಗೆ ಹೆಚ್ಚು ಗಮನಸೆಳೆಯುವುದು ಎಂದರೆ ಗಿರ್ಮಿಟ್. ಇದು ಬಹುತೇಕರಿಗೆ ಅಚ್ಚುಮೆಚ್ಚಿನ ಚಾಟ್ಸ್. ಕೆಲವೇ ಕೆಲವು ನಿಮಿಷಗಳಲ್ಲಿ ವೇಗವಾಗಿ ತಯಾರಿಸಬಹುದಾದರಿಂದ ಹೆಚ್ಚಿನರು ಇದನ್ನು ಇಷ್ಟಪಡುತ್ತಾರೆ.
ಇನ್ನು ಈ ಮಳೆಗಾಲದಲ್ಲಿ ಜನರು ಸಂಜೆ ಆದರೆ ಸಾಕು, ಮೊದಲು ಗಿರ್ಮಿಟ್ ರುಚಿ ನೋಡೇ ನೋಡುತ್ತಾರೆ. ಆದರೆ ಇಷ್ಟು ಅಚ್ಚುಮೆಚ್ಚಾಗಿರುವ ಈ ಚಾಟ್ಸ್ ಈಗ ಬಹುತೇಕ ಮಹಾನಗರಗಳಲ್ಲಿ ತಿಂಡಿಪೋತರ ಬೆಸ್ಟ್ ತಿನಿಸುಗಳ ಪಟ್ಟಿಯಲ್ಲಿದೆ. ಹಾಗದರೆ, ಇದನ್ನು ಮಾಡವುದಾದರೆ ಹೇಗೆ, ಇದರ ರುಚಿ ರಹಸ್ಯ ತಿಳಿಯುವುದು ಈಗಿನ ಕುತೂಹಲ.
ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳೆಂದರೆ ಮಂಡಕ್ಕಿ- ಒಂದೂವರೆ ಬೌಲ್, ಎಣ್ಣೆ 3 ಚಮಚ, ಶೇಂಗಾ- 4 ಚಮಚ, ಸಾಸಿವೆ-1 ಚಮಚ, ಜೀರಿಗೆ-ಅರ್ಧ ಚಮಚ, ಅರಿಶಿನ- 1 ಚಮಚ, ಹಸಿ ಮೆಣಸಿನ ಪೇಸ್ಟ್- 1 ಚಮಚ, ಈರುಳ್ಳಿ- ಅರ್ಧ ಚಮಚ, ಸಕ್ಕರೆ-ಅರ್ಧ ಚಮಚ, ನಿಂಬೆ ರಸ-2ಚಮಚ, ಕೊತ್ತಂಬರಿ ಸೊಪ್ಪು- 2 ಚಮಚ, ಹುರಿಗಡಲೆ- ಒಂದೂವರೆ ಚಮಚ.
ಗಿರ್ಮಿಟ್ ಮಾಡುವ ವಿಧಾನವು ಸುಲಭವಾಗಿದ್ದು ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದಾದ ಚಾಟ್. ಈರುಳ್ಳಿಯನ್ನು ತೆಳ್ಳಗೆ ಹಚ್ಚಿಕೊಳ್ಳಿ. ಬಾಣಲೆಯಲ್ಲಿ ಕಡ್ಲೆಪುರಿಯನ್ನು ಬಿಸಿ ಮಾಡಬೇಕು. ಅನಂತರ ಬಾಣಲೆಯಲ್ಲಿ ಸಾಸಿವೆ, ಕಡ್ಲೇಕಾಯಿ, ಸಾಸಿವೆ, ಜೀರಿಗೆ, ಅರಿಶಿನ, ಕರಿಬೇವು, ಹಸಿ ಮೆಣಸಿನ ಪೇಸ್ಟ್ ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಹಚ್ಚಿದ ಈರುಳ್ಳಿ ಹಾಕಬೇಕು. ಅನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ನಿಂಬೆರಸ ಸೇರಿಸಿ ಮಿಕ್ಸ್ ಮಾಡಬೇಕು. ಈ ಮಿಶ್ರಣಕ್ಕೆ ಮಂಡಕ್ಕಿ ಸೇರಿಸಿ, ಕಲಸಿಕೊಳ್ಳಬೇಕು. ಅನಂತರ ರುಚಿ ರುಚಿಯಾದ ಗಿರ್ಮಿಟ್ ಸವಿಯಲು ಸಿದ್ಧ. ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಹುರಿಗಡಲೆ ಪುಡಿ ಸೇರಿಸಿದರೆ ಸವಿಯಲು ಇನ್ನೂ ಉತ್ತಮ.
ಶಿವಮಲ್ಲಯ್ಯ