Advertisement
ನಿಮ್ಮ ದೇಹದ ಗಾತ್ರ ಮೀಡಿಯಂ ಆಗಿದ್ದರೆ ಲಾರ್ಜ್ ಸೈಜ್‌ನ ಹೂಡಿ ತೊಡುವುದು. ಲಾರ್ಜ್ ಆಗಿದ್ದರೆ ಎಕ್ಸ್ ಎಲ್ ಸೈಜ್‌ನ ಹೂಡಿ ತೊಡುವುದು. ಹೂಡಿ ಅಷ್ಟೇ ಅಲ್ಲ, ಅಂಗಿ, ಟಿ ಶರ್ಟ್, ಕ್ರಾಪ್ ಟಾಪ್, ಟ್ಯಾಂಕ್ ಟಾಪ್, ಮತ್ತಿತರ ಬಗೆಯ ಮೇಲುಡುಪು ತೊಡಬಹುದು, ಸಡಿಲವಾದ ಬ್ಯಾಗೀ ಪಾಂಟ್ಸ್, ಪಲಾಝೋ, ಹೈ ವೇಸ್ಟ್ ಡೆನಿಮ್ ಅಥವಾ ಫ್ಲೇರ್ಡ್ ಪಾಂಟ್ಸ್‌ನೊಂದಿಗೆ. ಈ ಗೆಟ್ ಅಪ್ ನೊಂದಿಗೆ ಮ್ಯಾಚ್ ಆಗುವ ಸ್ನೀಕರ್ಷ್, ಶೂಸ್ ಅಥವಾ ಬೂಟ್ಸ್ ಹಾಗೂ ಸನ್ ಗ್ಲಾಸ್ ತೊಟ್ಟರಾಯಿತು. ತೊಟ್ಟ ಅಂಗಿ- ಪ್ಯಾಂಟ್ ಅಥವಾ ಸ್ಕರ್ಟ್ ಜೊತೆ ಜಾಕೆಟ್ ಬಳಸುವು ದಾದರೆ ಅದನ್ನು ತೊಡಬೇಕಿಲ್ಲ. ಹಾಗೇ ಸುಮ್ಮನೆ ಭುಜಗಳ ಮೇಲೆ ಹಾಕಿಕೊಂಡರೆ ಆಯಿತು. ಇದೂ ಒಂದು ಸ್ಟೈಲೇ! ಇದರಲ್ಲಿ ಕಂಡು ಬರುವ ಇನ್ನೊಂದು ಪ್ರಕಾರ ಏನೆಂದರೆ, ಸ್ಲೀವ್ ಲೆಸ್ ಡ್ರೆಸ್. ಅಂದರೆ, ತೋಳುಗಳು ಇಲ್ಲದ ಡ್ರೆಸ್ ಜೊತೆ ಟಿ ಶರ್ಟ್ ತೊಡುವುದು!
Related Articles
Advertisement
ಈ ಲುಕ್ ಇಷ್ಟೊಂದು ಮೆಚ್ಚುಗೆ ಪಡೆಯಲು ಕಾರಣವೇ ಈ ಕೋವಿಡ್ 19! ಲಾಕ್ ಡೌನ್ ಮತ್ತು ವರ್ಕ್ ಫ್ರಮ್ ಹೋಂ ಕಾರಣದಿಂದ ಜನರು ಮನೆ ಉಡುಗೆಯಲ್ಲೇ ಕೆಲಸ ಮಾಡುತ್ತ, ಅವುಗಳಲ್ಲಿ ಆರಾಮ ಮತ್ತು ಸ್ಟೈಲ್ ಎರಡನ್ನೂ ಕಂಡುಕೊಂಡರು! ಹಾಗಾಗಿ ಅವುಗಳನ್ನೇ ಈಗ ಹೊರಗಡೆಯೂ ಹಾಕಿಕೊಂಡು ಓಡಾಡುತ್ತಿದ್ದಾರೆ. ಸಿನಿಮಾ ತಾರೆಯರು, ರೂಪದರ್ಶಿಯರು, ಕ್ರೀಡಾಪಟುಗಳು ಸೇರಿದಂತೆ ಸೆಲೆಬ್ರೆಟಿಗಳು ಸ್ಟ್ರೀಟ್ ಸ್ಟೈಲ್ ಲುಕ್ ನಲ್ಲಿ ಫೋಟೋ ಕ್ಲಿಕ್ಕಿಸಿಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಈ ಲುಕ್ ಟ್ರೆಂಡ್ ಆಗುವಂತೆ ಮಾಡಿದ್ದಾರೆ. ನೀವೂ ಸ್ಟ್ರೀಟ್ ಸ್ಟೈಲ್ ಲುಕ್ ಟ್ರೆ„ ಮಾಡಿ. ಜೊತೆಗೆ ಮ್ಯಾಚಿಂಗ್ ಮಾಸ್ಕ್ ಕೂಡ ತೊಟ್ಟುಕೊಳ್ಳಿ. ಆಗ ಆರಾಮ, ಸ್ಟೈಲ್ ಮತ್ತು ಸುರಕ್ಷೆ, ಎಲ್ಲವೂ ಇದ್ದಂತೆ ಆಗುತ್ತದೆ!
– ಅದಿತಿಮಾನಸ ಟಿ ಎಸ್