Advertisement

ಪುರಸಭೆ ಆಡಳಿತ ನಡೆಸಿದ ವಿದ್ಯಾರ್ಥಿನಿಯರು

05:56 PM Mar 10, 2021 | Team Udayavani |

ಚಿಕ್ಕೋಡಿ: ನಗರದ 23 ವಾರ್ಡಗಳಲ್ಲಿನಕಸವಿಲೇವಾರಿ ಸಮಸ್ಯೆ. ತಿಂಗಳಿಗೊಮ್ಮೆ ಗಟಾರು ಸ್ವತ್ಛತೆ. ಹಂದಿಗಳ ಕಾಟಕ್ಕೆ ಜನ ಕಂಗಾಲು. ಖಾಸಗಿ ಜಾಗದಲ್ಲಿ ಕಸದ ರಾಶಿಕುರಿತು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಅಧಿ ಕಾರಿಗಳಿಗೆ ಬಿಸಿ ಮುಟ್ಟಿಸಿ ವಿದ್ಯಾರ್ಥಿನಿಯರು ಅಧಿಕಾರದ ಗತ್ತು ತೋರಿಸಿದರು.

Advertisement

ಹೌದು..ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದಒಂದು ದಿನದ ಪುರಸಭೆ ಅಧಿ ಕಾರದನಿರ್ವಹಣೆಯಲ್ಲಿ ನಗರದ ಎಲ್ಲ ವಾರ್ಡಗಳ ಸದಸ್ಯರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ದೃಶ್ಯವಿದು.

ಅಧ್ಯಕ್ಷರಾಗಿ ಆಯ್ಕೆಯಾದ ವಿದ್ಯಾರ್ಥಿನಿ ಶ್ರೀಪ್ರಿಯಾ ಕುಲಕರ್ಣಿ ನಗರದ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಮುತುರ್ವಜಿವಹಿಸಬೇಕು. ನಗರದಲ್ಲಿ ಮೂಲಭೂತಸೌಲಭ್ಯ ಒದಗಿಸಲು ಅಧಿ ಕಾರಿಗಳು ಗಮನ ಹರಿಸಬೇಕು. ಕುಡಿಯುವ ನೀರು, ವಿದ್ಯುತ್‌ದೀಪ, ಕಸವಿಲೇವಾರಿ ಸಮರ್ಪಕವಾಗಿನಡೆಯಬೇಕು. ನಗರದ ನಾಗರಿಕರಿಂದಯಾವುದೇ ತಕರಾರು ತಂಟೆ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪುರಸಭೆ ಪರಿಸರ ಅಭಿಯಂತರಾದಪ್ರಿಯಂಕಾ ವಿನಾಯಕ ಮಾತನಾಡಿ,ನಗರದಲ್ಲಿ ಕಸವಿಲೇವಾರಿ ಮಾಡಲು 6 ವಾಹನಗಳಿದ್ದು. ಪ್ರತಿ ದಿನ ಬೆಳಿಗ್ಗೆ ನಗರದ ಎಲ್ಲವಾರ್ಡಗಳ ಗಂಟೆ ವಾಹನಕ್ಕೆ ನಾಗರಿಕರು ಕಸಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು.ಮುಖ್ಯಾಧಿಕಾರಿ ಡಾ.ಸುಂದರ ರೋಗಿ ಮಾತನಾಡಿ, ವಾರ್ಡದಲ್ಲಿರುವ ಸಮಸ್ಯೆಗಳ ಕುರಿತು ಸದಸ್ಯರ ಮನವಿಗೆ ಪುರಸಭೆ ಸ್ಪಂದಿಸುತ್ತದೆ. ಹಂತಹಂತವಾಗಿ ಅಭಿವೃದ್ಧಿಕಾರ್ಯ ಮಾಡಿ ಸುಂದರ ನಗರವನ್ನಾಗಿಮಾಡಲಾಗುತ್ತದೆ. ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದರು.

ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲ ಸೌಲಭ್ಯ ನೀಡಲಾಗುತ್ತದೆ. ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಜ್ಯೋತಿ ಹಿರೇಮಠ. ಉಪಾಧ್ಯಕ್ಷರಾಗಿ ತೇಜಸ್ವಿನಿ ಮಲ್ನಾಡೆ ಸಭೆಯಲ್ಲಿ ಇದ್ದರು. ಮಹಿಳಾ ದಿನಾಚರಣೆ ನಿಮಿತ್ಯ ವಿದ್ಯಾರ್ಥಿನಿಯರಿಂದ ಪುರಸಭೆ ಒಂದು ದಿನದ ಆಡಳಿತ ನಿರ್ವಹಣೆ ಮಾಡಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿ ಒಳ್ಳೆಯ ನಾಗರಿಕರಾಗಲು ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು.

Advertisement

ಈ ಸಂದರ್ಭದಲ್ಲಿ ಧುರೀಣ ಜಗದೀಶ ಕವಟಗಿಮಠ. ಪುರಸಭೆ ಅಧ್ಯಕ್ಷ ಪ್ರವೀಣ್‌ ಕಾಂಬಳೆ. ಉಪಾಧ್ಯಕ್ಷ ಸಂಜಯ ಕವಟಗಿಮಠ,ವರ್ಧಮಾನ ಸದಲಗೆ, ನಾಗರಾಜ ಮೇಧಾರ,ವಿಶ್ವನಾಥ ಕಾಮಗೌಡ, ಸಂತೋಷ ಟವಳೆ,ಸಿದ್ದಪ್ಪ ಡಂಗೇರ, ಸಿಎಲ್‌ಇ ಆಡಳಿತಾಕಾರಿ ಸಾಗರ ಬೀಸ್ಕೋಪ, ಡಿ.ಎಸ್‌.ಕೋಳಿ ಮುಂತಾದವರು ಇದ್ದರು.

ಮಹಿಳಾ ದಿನಾಚರಣೆ ಅಂಗವಾಗಿವಿದ್ಯಾರ್ಥಿನಿಯರಿಗೆ ಒಂದುದಿನದ ಆಡಳಿತ ನಿರ್ವಹಣೆ ಮಾಡಲುಅನುವು ಮಾಡಿಕೊಡಲಾಗಿತ್ತು.ವಿದ್ಯಾರ್ಥಿ ಜೀವನದಿಂದಲೇರಾಜಕೀಯ, ಸಾಮಾಜಿಕವಾಗಿ ಹೇಗೆಬೆಳೆಯಬೇಕೆಂದು ಹೊಸದೊಂದುಪರಿಕಲ್ಪನೆ ನೀಡಿ ವಿಶಿಷ್ಠವಾಗಿ ಮಹಿಳಾ ದಿನಾಚರಣೆ ಆಚರಿಸಲಾಗಿದೆ. =ಜಗದೀಶ ಕವಟಗಿಮಠ, ಮಾಜಿ ಅಧ್ಯಕ್ಷರು, ಪುರಸಭೆ ಚಿಕ್ಕೋಡಿ

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next