ಕೆ.ಆರ್.ನಗರ: ಹೆಣ್ಣು ಮಕ್ಕಳು ಹಿಂದೆ ಬೇರೆಯವರ ಆಶ್ರಯದಲ್ಲಿ ಬದುಕುತ್ತಿದ್ದರು, ಈಗ ಎಲ್ಲರೂ ಹೆಣ್ಣು ಮಕ್ಕಳ ಆಶ್ರಯದಲ್ಲಿ ಜೀವನ ನಿರ್ವಹಣೆ ಮಾಡುವಂತಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ವೀರಶೈವ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಚಾರಿಟ ಬಲ್ ಟ್ರಸ್ಟ್‌ಯಿಂದ ನಿರ್ಮಾಣ ಮಾಡಲಾಗಿ ರುವ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು ಎಂದರು.
ತಾಯಿಯಾದವರು ತನ್ನ ಮಗ ಸಮಾಜ ಘಾತಕನಾಗಿದ್ದರೂ ಸಹ ಮುಂದೊಂದು ದಿನ ಸಮಾಜದ ಸುಧಾರಕನಾಗಲಿದ್ದಾನೆ ಎಂಬ ಆಸೆಯಿಂದ ಅವನನ್ನು ಬೆಳೆಸುತ್ತಾರೆ. ಆದ್ದ ರಿಂದ ಹೆಣ್ಣು ಮಕ್ಕಳು ಶಿಕ್ಷಣವಂತರಾಗಲೇಬೇಕು. ಅದಕ್ಕಾಗಿ ವಿದ್ಯಾರ್ಥಿ ನಿಲಯಗಳ ಅವಶ್ಯಕ ವಿದ್ದು, ಈ ನಿಲಯ ನಿರ್ಮಾಣ ಮಾಡಲು ಶ್ರಮಿಸಿದಂತಹ ಟ್ರಸ್ಟ್ ಪದಾಧಿ ಕಾರಿಗಳಿಗೆ ಅಭಿನಂಲ್ಲಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಮಾತನಾಡಿ, ಅಕ್ಷರ, ಆರೋಗ್ಯ ಮತ್ತು ಅನ್ನಕ್ಕೆ ಕೊರತೆ ಇಲ್ಲದ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಈ ಕೆಲಸವನ್ನು ರಾಜ್ಯದಲ್ಲಿರುವ ಮಠ ಮಾನ್ಯಗಳು ಮಾಡು ತ್ತಿದ್ದು, ಅವರುಗಳಿಗೆ ಸರ್ಕಾರ ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದ ವಿಧಾನ ಪರಿಷತ್ ಸದಸ್ಯರು ನಿಲ ಯದ ಮುಂದುವರೆದ ಕಾಮಗಾರಿಗೆ ಅನು ದಾನ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಸಾ.ರಾ.ಮಹೇಶ್ ಮಾತನಾಡಿ, ನಿಲಯದ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಿರುವುದರ ಜತೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗಿದ್ದು, ಮುಂದು ವರೆದ ಕಾಮಗಾರಿಗೂ ಅನುದಾನ ನೀಡ ಲಾಗುತ್ತದೆ ಎಂದು ಭರವಸೆ ನೀಡಿದರಲ್ಲದೆ ಸಮಾಜದವರು ಬಸವ ಭವನ ನಿರ್ಮಾಣ ಮಾಡಲು ಮುಂದಾಗಬೇಕು. ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಬೆಟ್ಟದಪುರದ ಮಠದ ಚನ್ನಬಸವದೇಶಿ ಕೇಂದ್ರಸ್ವಾಮೀಜಿ, ಮಾದಳ್ಳಿ ಮಠದ ಸಾಂಬ ಸದಾಶಿವಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಅರಕೆರೆ ಮಠದ ಸಿದ್ದೇಶ್ವರಸ್ವಾಮೀಜಿ, ಲಾಲನಹಳ್ಳಿ ಗುರುಮಲ್ಲೇಶ್ವರ ಮಠದ ಶರಣೆ ಜಯದೇತಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಸ್. ತೋಂಟದಾರ್ಯ, ಗುಬ್ಬಿ ತೋಟಪ್ಪನವರ ಧರ್ಮ ಸಂಸ್ಥೆಯ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಡಿಜಿಪಿ ಎಲ್.ರೇವಣ್ಣಸಿದ್ದಯ್ಯ, ಪುರಸಭೆ ಸದಸ್ಯ ಕೆ.ಬಿ.ವೀಣಾವೃಷಬೇಂದ್ರ, ಬಿಸಿಎಂ ಇಲಾಖೆಯ ಅಧಿಕಾರಿಗಳಾದ ಮಹೇಶ್, ಬಿಂದ್ಯಾ, ವೀರಶೈವ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ವೈ.ಎನ್.ಚಂದ್ರಶೇಖರ್, ಉಪಾಧ್ಯಕ್ಷರಾದ ಎ.ಎಸ್.ಚನ್ನಬಸಪ್ಪ, ಕೆ.ಸಿ.ಲೋಕೇಶ್, ಕಾರ್ಯದರ್ಶಿ ಕೆ.ಪಿ.ಪ್ರಭುಶಂಕರ್, ಖಜಾಂಚಿ ವೈ.ಎಸ್.ಸುರೇಶ್, ನಿರ್ದೇಶಕರಾದ ಆರ್.ಬಿ.ನಾಗರಾಜು, ಹೆಚ್.ಸಿ.ಮಹದೇವಪ್ಪ, ಎನ್.ಎಸ್.ಚನ್ನಪ್ಪ, ಚಂದ್ರಶೇಖರ್ ಚೇತನ್ ನಂಜುಂಡಸ್ವಾಮಿ ಇದ್ದರು