Advertisement

ಬಾಲಕಿಯ ಹೃದಯ,ಕಿಡ್ನಿ,ಲೀವರ್ ದಾನ ಮಾಡಿ ಸಾರ್ಥಕತೆ : ಡಾ.ಹೆಗ್ಗಡೆ ಅಭಿನಂದನೆ

07:54 PM Jul 11, 2022 | Team Udayavani |

ಧಾರವಾಡ : ಬ್ರೇನ್ ಡೆಡ್ ಗೆ ಒಳಗಾಗಿದ್ದ 16 ವರ್ಷದ ಬಾಲಕಿಯ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಮಾದರಿಯಾದ ಪ್ರಸಂಗ ಸೋಮವಾರ ಧಾರವಾಡದಲ್ಲಿ ನಡೆದಿದೆ.

Advertisement

ಇಲ್ಲಿಯ ಸತ್ತೂರಿನ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಜು.3 ರಂದು ಬಾಲಕಿ ದಾಖಲಾಗಿದ್ದು, ಆ ಬಳಿಕ ಉನ್ನತ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ವೈದ್ಯರ ನಿರಂತರ ಪ್ರಯತ್ನದ ನಂತರವೂ ಚಿಕಿತ್ಸೆ ಫಲಕಾರಿಯಾದೇ ಜು.11 ರಂದು ಮೆದುಳು ನಿಷ್ಕ್ರೀಯಗೊಂಡಿದೆ (ಬ್ರೇನ್ ಡೆತ್) ಎಂದು ವೈದ್ಯರು ಧೃಢಿಕರಿಸಿದರು. ಈ ದು:ಖದ ಸಮಯದಲ್ಲಿಯೂ ಕುಟುಂಬದವರು, ಬಾಲಕಿಯ ಅಂಗಾಂಗಗಳು ಇತರರ ಜೀವನಕ್ಕೆ ಅನುಕೂಲವಾಗಲು ದಾನ ಮಾಡಲು ನಿರ್ಧರಿಸಿದರು. ಈ ಹಿನ್ನಲೆಯಲ್ಲಿ ಸೋಮವಾರ ಎಸ್‌ಡಿಎಮ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಂಗಾಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯಲಾಯಿತು.

ಕರ್ನಾಟಕ ಕಸಿ ಪ್ರಾಧಿಕಾರದ ನಿಯಮದಂತೆ ಹು-ಧಾ ವಲಯದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಕಿಡ್ನಿ ನೀಡಲಾಯಿತು. ಲೀವರ್‌ನ್ನು ( ಯಕೃತ್) ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ನೀಡಲು ಎಸ್‌ಡಿಎಮ್ ಆಸ್ಪತ್ರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತು
ಹೃದಯವನ್ನು ಬೆಳಗಾವಿಯ ಕೆಎಲ್‌ಇಗೆ ತ್ವರಿತವಾಗಿ ಅಂಗಾಂಗಗಳನ್ನು ತಲುಪಿಸಲು ಗ್ರೀನ್ ಕಾರಿಡಾರ್ (ಸಂಪೂರ್ಣ ಟ್ರಾಫಿಕ್ ನಿಷೇಽತ ಮಾರ್ಗ) ವ್ಯವಸ್ಥೆ ಕಲ್ಪಿಸಲಾಯಿತು. ಹು-ಧಾ ಪೋಲಿಸ್ ಆಯುಕ್ತ ಲಾಭುರಾಮ್ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕರು ಮತ್ತು ಅಽಕಾರಿಗಳ ಸಮಯ ಹಾಗೂ ಈ ಸಂಯೋಜನೆಗೆ ಎಸ್‌ಡಿಎಮ್ ವೈದ್ಯಕೀಯ ಮಹಾವಿದ್ಯಾಲಯದ ಉಪಕುಲಪತಿ ಡಾ|ನಿರಂಜನ ಕುಮಾರ ಕೃತಘ್ನತೆಯನ್ನು ತಿಳಿಸಿದ್ದಾರೆ.

ಈ ಅಂಗಾಂಗಗಳನ್ನು ದಾನ ಮಾಡುವ ಪ್ರಕ್ರಿಯೆ ( ಕರ್ನಾಟಕ ಕಸಿ ಪ್ರಾಧಿಕಾರ ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಮತ್ತು ಎಸ್.ಡಿ.ಎಮ್ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾಯಿತು. ಎಸ್.ಡಿ.ಎಮ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉಪಕುಲಪತಿ ಡಾ|ನಿರಂಜನ ಕುಮಾರ, ಆಡಳಿತ ನಿರ್ದೇಶಕ ಸಾಕೆತ್ ಶೆಟ್ಟಿ, ವೈದ್ಯಕೀಯ ಅಧಿಕ್ಷಕರಾದ ಡಾ|ಕಿರಣ ಹೆಗ್ಡೆ ಸೇರಿದಂತೆ ಎಸ್‌ಡಿಎಮ್ ವೈದ್ಯಕೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಮಸ್ತ ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ. ಈ ಸಂಕಟ ಕಾಲದಲ್ಲಿ ಶ್ರೀಮಂಜುನಾಥ ಸ್ವಾಮಿಯು ದುಃಖತಪ್ತ ಕುಟುಂಬಕ್ಕೆ ಶಕ್ತಿ ಮತ್ತು ಧೈರ್ಯವನ್ನು ನೀಡುವಂತೆ ಪ್ರಾರ್ಥಿಸಿದ್ದು, ಅಲ್ಲದೇ ಕುಟುಂಬ ವರ್ಗದವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ನೆಫ್ರೋ, ಪ್ಲಾಸ್ಟಿಕ್ ಸರ್ಜರಿ, ಯೂರಾಲಾಜಿ, ಕ್ರಿಟಿಕಲ್ ಕೇರ್ ಮತ್ತು ನರ್ಸಿಂಗ್ ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು.

ನಿಜಕ್ಕೂ ಮಾದರಿ

Advertisement

ದು:ಖದ ಸಮಯದಲ್ಲಿಯೂ ಸಹ ಕುಟುಂಬದವರು ಉದಾತ್ತ ಮನೋಭಾವ ತೋರಿ, ಬಾಲಕಿಯ ಅಂಗಾಂಗಗಳನ್ನು ಇತರರ ಜೀವನಕ್ಕೆ ಅನೂಕೂಲವಾಗಲೆಂದು ದಾನ ಮಾಡುವ ಧೈರ್ಯ ಮತ್ತು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ನಿಜಕ್ಕೂ ಮಾದರಿಯಾಗಿದೆ. ಬಾಲಕಿಯ ಅಂಗಾಂಗಗಳನ್ನು ಮಣ್ಣು ಮಾಡುವ ಬದಲು ದಾನ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದಾರೆ. ದುಃಖತಪ್ತ ಕುಟುಂಬಕ್ಕೆ ಶ್ರೀ ಮಂಜುನಾಥ ಸ್ವಾಮಿಯು ಶಕ್ತಿ ಮತ್ತು ಧೈರ್ಯವನ್ನು ನೀಡಲೆಂದು ಪ್ರಾರ್ಥಿಸುವುದಾಗಿ ಎಸ್‌ಡಿಎಂ ವಿವಿಯ ಕುಲಪತಿ ಡಾ|ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next