ಮುಂಬಯಿ: ಸೆಂಟ್ರಲ್ ಬೋರ್ಡ್ ಎಜುಕೇಶನ್ ವತಿಯಿಂದ ಕೇರಳದ ವಿದ್ಯಾನಿಕೇತನ ಶಾಲೆ ಕ್ರೀಡಾಂಗಣದಲ್ಲಿ ನಡೆದ 17ರ ವಯೋಮಿತಿಯ ಬಾಲಕಿಯರ ಕ್ಲಸ್ಟರ್ ಫುಟ್ಬಾಲ್ ಪಂದ್ಯಾಟದಲ್ಲಿ ಸಾನ್ಪಾಡಾದ ರಾಯನ್ ಇಂಟರ್ ನ್ಯಾಶನಲ್ ಶಾಲೆ ಪ್ರಶಸ್ತಿ ಜಯಿಸಿದೆ.
ಅ. 1ರಿಂದ ಅ. 3ರವರೆಗೆ ನಡೆದ ಪಂದ್ಯಾಟದಲ್ಲಿ ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಶಾಲೆಗಳ ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್ ಸಾನಾ³ಡ ಬಾಲಕಿಯರ ತಂಡವು ಪ್ರಶಸ್ತಿಯೊಂದಿಗೆ, ನ. 11ರಂದು ಮಧ್ಯ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದೆ. ಪ್ರಿಕ್ವಾಟರ್ ಫೈನಲ್‌ನಲ್ಲಿ ಜೈನ್‌ಪಬ್ಲಿಕ್ ಶಾಲೆ ತುಮಕೂರು ಕರ್ನಾಟಕ ವಿರುದ್ಧ 7-0 ಅಂತರದಿಂದ, ಕ್ವಾಟರ್ ಫೈನಲ್‌ನಲ್ಲಿ ಮಿಲೇನಿಯರ್ ನ್ಯಾಷನಲ್ ಸ್ಕೂಲ್ ಪುಣೆ ವಿರುದ್ಧ ರಾಯನ್ ಸಾನಾ³ಡ ಶಾಲೆಯು 5-0 ಅಂತರದಿಂದ ಜಯ ಗಳಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಭವನ್ಸ್ ಮುನುಷಿ ತಿರುವಂಕುಲಂ ವಿರುದ್ಧ ರಾಯನ್ ಶಾಲೆ 3-0 ಗೋಲುಗಳಿಂದ ಜಯಿಸಿತು. ಫೈನಲ್ ಪಂದ್ಯದಲ್ಲಿ ಜವಾಹರ್ ಹೈಯರ್ ಸೆಕೆಂಡರಿ ಸ್ಕೂಲ್ ಕುಡಲ್ಲೂರು ತಮಿಳುನಾಡು ವಿರುದ್ಧ ರಾಯನ್ ತಂಡವು ಟೈಬ್ರೇಕರ್‌ನಲ್ಲಿ 4-3 ಅಂತರದ ಪೆನಲ್ಟಿ ಗೋಲುಗಳ ಮುಖಾಂತರ ಜಯ ಸಾಧಿಸಿತು. ಎಲ್ಲಾ ಪಂದ್ಯಗಳಲ್ಲಿ ಎಂಟು ಗೋಲು ಬಾರಿಸಿದ ಭಾಗ್ಯಶ್ರೀ ಅವರು ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು. ರಾಯನ್ ಬಾಲಕಿಯರ ತಂಡವು ಕಳೆದ ನಾಲ್ಕು ವರ್ಷಗಳಿಂದ ಸತತ ಕ್ಲಸ್ಟರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುತ್ತಿದೆ. ತಂಡದ ತರಬೇತುದಾರರಾಗಿ ಅಮ್ಜದ್ ಖಾನ್, ಸರಸ್ವತಿ ಮತ್ತು ರಾಜೇಂದ್ರ ರಜಪೂತ್ ಅವರು ಶ್ರಮಿಸುತ್ತಿದ್ದಾರೆ.
ರಾಯನ್ ವಿದ್ಯಾಸಂಸ್ಥೆಯ ನಿರ್ದೇಶಕಿ ಗ್ರೇಸ್ ಪಿಂಟೋ ಹಾಗೂ ರಾಯನ್ ಸಾನಾ³ಡಾ ಇದರ ಪ್ರಾಂಶುಪಾಲೆ ಮ್ಯೂರಿಯಲ್ ಫೆರ್ನಾಂಡಿಸ್ ಇವರ ಶಿಸ್ತು ಮತ್ತು ಮಕ್ಕಳಿಗೆ ನೀಡುವ ಪ್ರೋತ್ಸಾಹದಿಂದ ಶಾಲೆಯು ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಜಾಹ್ನವಿ ಶೆಟ್ಟಿ ಅವರ ನಾಯಕತ್ವದ ತಂಡದಲ್ಲಿ ಅತಿರಾ ರಾಜಿ, ಸಮೃದ್ಧಿ ಬೋರು, ಅನುಜಾ ಅತ್ಕಾರಿ, ಭೂಮಿತಾ ಚರ್ಕವರ್ತಿ, ನೇಹಾ ಸಾಮ್ರೆ, ಸಾಯಿಲಿ ರಾಜ್‌ಪುರೆ, ದೇವಿಕಾ ಕೊಟ್ಟೆಕೊಲ್ಲಿ, ಜೋಷ್ನಾ ಪಾಟೀಲ್, ಶೃದ್ಧಾ ಪವಾರ್, ಕೃತಿ ಮಾಧವಿ, ಭಾಗ್ಯಶ್ರೀ ದಳ್ವಿ, ಶ್ರೇಯಾ ಪ್ರಭು, ಸರಯೂ ಪೈ, ದರ್ಶನ, ಅತ್ಕಾರಿ, ರಿಯಾ ಜೈನ್ ಅವರು ಸಹಕರಿಸುತ್ತಿದ್ದಾರೆ.