Advertisement

ಫೇಸ್‌ಬುಕ್‌ನಲ್ಲಿ 16ರ ಬಾಲಕಿಯ ಹರಾಜು!

06:00 AM Nov 22, 2018 | |

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿನ ಅವಾಂತರಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದು, ಒಮ್ಮೊಮ್ಮೆ ದಿಗ್ಭ್ರಮೆ ಹುಟ್ಟಿಸುವಂತಿರುತ್ತದೆ. ಇಂಥದ್ದೊಂದು ಪ್ರಕರಣ ದಕ್ಷಿಣ ಸುಡಾನ್‌ನಲ್ಲಿ ನಡೆದಿದೆ. 16 ವರ್ಷ ವಯಸ್ಸಿನ ಬಾಲಕಿಯನ್ನು ಫೇಸ್‌ಬುಕ್‌ನಲ್ಲೇ ಹರಾಜಿಗೆ ಹಾಕಿ, ಆಕೆಯ ಮದುವೆಯೂ ನಡೆದಾದ ಬಳಿಕ ವಿಷಯ ಬಹಿರಂಗಗೊಂಡಿದೆ.

Advertisement

ಈ ಆತಂಕಕಾರಿ ವಿಚಾರವು ಫೇಸ್‌ಬುಕ್‌ ಸಂಸ್ಥೆಯ ಗಮನಕ್ಕೆ ಹೆಚ್ಚು ಕಡಿಮೆ 15 ದಿನಗಳ ನಂತರ ಬಂದಿದ್ದು, ಆನಂತರ ಕ್ರಮ ಕೈಗೊಳ್ಳಲಾಯಿತಾದರೂ ಅಷ್ಟರಲ್ಲಾಗಲೇ ಬಾಲಕಿ ಮದುವೆಯೇ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್‌ ವಕ್ತಾರ, ಯಾವುದೇ ರೀತಿಯ ಮಾನವ ಕಳ್ಳಸಾಗಣೆಗೆ ನಾವು ಅವಕಾಶ ನೀಡುವುದಿಲ್ಲ. ಬಾಲಕಿಯನ್ನು ಬಿಡ್ಡಿಂಗ್‌ ಮಾಡಿದ ಪೋಸ್ಟ್‌ ಅನ್ನು ಕಿತ್ತೆಸೆಯಲಾಗಿದೆ. ಅಷ್ಟೇ ಅಲ್ಲ, ಆ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡಿದ್ದೇವೆ. ಹೀಗೆ ಜಾಲ ತಾಣವನ್ನು ದುರುಪಯೋಗ ಮಾಡುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next