Advertisement

ಬಳ್ಳಾರಿ; ಪ್ರಿಯತಮೆ ಶವ ಬೆನ್ನಿಗೆ ಕಟ್ಕೊಂಡು ಠಾಣೆಗೆ ಬಂದ ಪ್ರಿಯಕರ!

01:31 PM Jul 10, 2017 | Sharanya Alva |

ಬಳ್ಳಾರಿ: ಆತ್ಮಹತ್ಯೆಗೆ ಶರಣಾಗಿದ್ದ ಪ್ರೇಯಸಿಯ ಶವವನ್ನು ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೆರೆಯ ಹುಚ್ಚೇಶ್ವರ ನಗರದಲ್ಲಿ ನಡೆದಿದೆ.

Advertisement

ಸಿರಿಗೆರೆಯ ಹನುಮಂತಮ್ಮ(19) ಹಾಗೂ ದಾವಲ್ ಸಾಬ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಏತನ್ಮಧ್ಯೆ      ದಾವಲ್ ಸಾಬ್ ನಿಗೆ ಬೇರೊಂದು ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು.  ಈ ವಿಚಾರವಾಗಿ ದಾವಲ್ ಮತ್ತು ಹನುಮಂತಮ್ಮ ನಡುವೆ ಜಗಳ ನಡೆದಿತ್ತು.

ಹನುಮಂತಮ್ಮಳನ್ನು ಸಮಾಧಾನಪಡಿಸಲು ದಾವಲ್ ಸಾಬ್ ಯತ್ನಿಸಿದ್ದ. ಆದರೆ ಹನುಮಂತಮ್ಮ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ವರದಿ ವಿವರಿಸಿದೆ.

ತನ್ನ ಕಣ್ಣೆದುರೇ ನೇಣಿಗೆ ಶರಣಾಗಿದ್ದ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಟಿಕೊಂಡು ದಾವಲ್ ಸಾಬ್ ಬೈಕ್ ನಲ್ಲಿ ಪೊಲೀಸ್ ಠಾಣೆಗೆ ಆಗಮಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next