Advertisement

ಕೇಂದ್ರೀಯ ವಿಶ್ವವಿದ್ಯಾಲಯದಲ್ಲೇ ಹಿಜಾಬ್ ಧರಿಸಿ ನಮಾಜ್ : ಮಧ್ಯಪ್ರದೇಶದಲ್ಲಿ ವಿವಾದ

03:54 PM Mar 26, 2022 | Team Udayavani |

ಭೋಪಾಲ್ : ಮಧ್ಯಪ್ರದೇಶದ ಸಗರ್ ನಲ್ಲಿರುವ ಡಾ.ಹರಿ ಸಿಂಗ್ ಗೌರ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತರಗತಿ ಕೊಣೆಯಲ್ಲೇ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ನಮಾಜ್ ಮಾಡಿರುವ ಕುರಿತು ವಿವಾದ ಭುಗಿಲೆದ್ದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Advertisement

ಕೆಲ ಸಂಘಟನೆಗಳು ನಮಾಜ್ ಮಾಡುತ್ತಿರುವ ವಿಡಿಯೋ ಸಮೇತ ದೂರು ನೀಡಿದ್ದು, ಹಿಂದೂ ಜಾಗರಣ ಮೋರ್ಚಾ ಘಟನೆಯನ್ನು ಖಂಡಿಸಿ ಆಕ್ರೋಶ ಹೊರ ಹಾಕಿದೆ.

ವಿವಿಯ ರಿಜಿಸ್ಟ್ರಾರ್ ಸಾಹ್ಗೌರ ಅವರು ನಾವು ವಿಡಿಯೋ ಸಮೇತ ದೂರು ಸ್ವೀಕರಿಸಿದ್ದು, ಐವರು ಸದಸ್ಯರ ಸಮಿತಿಯನ್ನು ರಚಿಸಿ ವಿಚಾರದ ಬಗ್ಗೆ ವಿವರಗಳನ್ನು ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಹಿಂದೂ ಜಾಗರಣ ಮೋರ್ಚಾ ನಾಯಕ ಉಮೇಶ ಸರಾಫ್ ಮಾತನಾಡಿ, ಈ ವಿದ್ಯಾರ್ಥಿನಿ ಹಿಜಾಬ್ ಧರಿಸಿಯೇ ತರಗತಿಗಳಿಗೆ ನಿರಂತರವಾಗಿ ಹಾಜರಾಗುತ್ತಿದ್ದು, ಈಗ ವಿವಿಯ ಆವರಣದಲ್ಲೇ ಹಿಜಾಬ್ ಧರಿಸಿ ನಮಾಜ್ ಮಾಡಿರುತ್ತಾಳೆ , ಇಂತಹದ್ದಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next