Advertisement

ವಿಷಾಹಾರ: ಮದ್ರಸ ವಿದ್ಯಾರ್ಥಿನಿ ಸಾವು; 13 ಮಂದಿ ಆಸ್ಪತ್ರೆಗೆ ದಾಖಲು

04:55 PM Apr 06, 2018 | Team Udayavani |

ನಿಜಾಮಾಮಾದ್‌ : ಶಂಕಿತ ವಿಷಾಹಾರ ಸೇವನೆಯಿಂದಾಗಿ ಇಲ್ಲಿನ ಮದ್ರಸದ 15 ವರ್ಷದ ಬಾಲಕಿ ಮೃತಪಟ್ಟಿದ್ದು ಇತರ 13 ಮಂದಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ವೈದ್ಯಕೀಯ ಮತು ಆರೋಗ್ಯಾಧಿಕಾರಿ ಡಾ. ವೆಂಕಟ್‌ ತಿಳಿಸಿದ್ದಾರೆ.

ಮದ್ರಸದಲ್ಲಿ ವಿದ್ಯಾರ್ಥಿನಿಯರಿಗೆ ನೀಡಲಾಗಿದ್ದ ಆಹಾರದ ಮಾದರಿಯನ್ನು ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಮದ್ರಸವು ರಾಜ್ಯ ಸರಕಾರದಿಂದ ಮಾನ್ಯತೆಯನ್ನು ಪಡೆದಿಲ್ಲ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next