Advertisement

ಯುವತಿ  ಸೊಂಟಕ್ಕೆ ಕೈ:ಕಾಮುಕನನ್ನು ಬೆನ್ನಟ್ಟಿ ಹಿಡಿದರು

12:03 PM Nov 20, 2017 | Team Udayavani |

ಬೆಂಗಳೂರು: ನಗರದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ  ಯುವತಿಯೊಬ್ಬಳಸೊಂಟಕ್ಕೆ ಕೈಹಾಕಿದ  ಕಾಮುಕರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನವೆಂಬರ್‌ 17 ರಂದು ರಾತ್ರಿ ನಡೆದಿದ್ದು ತಡವಾಗಿ ಇಂದು ಬೆಳಕಿಗೆ ಬಂದಿದೆ.

Advertisement

ಎಚ್‌ಎಸ್‌ಆರ್‌ ಲೇಔಟ್‌ನ 6 ನೇ ಬ್ಲಾಕ್‌ನಲ್ಲಿ  ಖಾಸಗಿ ಕಂಪೆನಿ ಉದ್ಯೋಗಿ ಯಾಗಿರುವ ಕಲಬುರಗಿ ಮೂಲದ ಯುವತಿ ಕೆಲ ಸ ಮುಗಿಸಿ ಜಿಮ್‌ಗೆ ತೆರಳಿ ವಮನೆಗೆ ವಾಪಾಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕಾಮುಕರಿಬ್ಬರು ಸೊಂಟಕ್ಕೆ ಕೈ ಹಾಕಿ ಪರಾರಿಯಾಗಿದ್ದಾರೆ. 

ಕೂಡಲೇ ಯುವತಿ ಕಿರುಚಿಕೊಂಡಿದ್ದು, ಸ್ಥಳೀಯರು ನೆರೆದಿದ್ದು, ಸ್ನೇಹಿತರ ಬೈಕ್‌ಗಳಲ್ಲಿ ಯುವತಿ ಕಾಮುಕರ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವೀಯಾಗಿದ್ದಾಳೆ. ಸ್ಥಳದಲ್ಲಿದ್ದ ಸಾರ್ವಜನಿಕರು ಕಾಮುಕನಿಗೆ ಧರ್ಮದೇಟು ನೀಡಿದ್ದಾರೆ. 

ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಬೇಗೂರು ನಿವಾಸಿ ನಾರಾಯಣ ಸ್ವಾಮಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನುಪರಿಶೀಲನೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next