ಮಹಾನಗರ: ನಗು ನಗುತ್ತಾ ಬಾಲ್ಯ ಕಳೆಯಬೇಕಿದ್ದ ಬಾಲಕಿಯೋರ್ವಳು, ಮೆದುಳು, ಕೈ ಕಾಲಿನಲ್ಲಿ ಸ್ವಾಧೀನ ಕಳೆದುಕೊಂಡು ಕಳೆದ 15 ವರ್ಷಗಳಿಂದ ಹಾಸಿಗೆ ಹಿಡಿದಿರುವ ಕರುಣಾಜನಕ ಕಥೆಯಿದು. ಬಾಲಕಿಗೆ ಜೀವನಪರ್ಯಂತ ಔಷಧೋಪಚಾರ್ಯ ಮಾಡಬೇಕಿದ್ದು, ಆಕೆಯ ಹೆತ್ತವರು ದಾನಿಗಳಿಂದ ಸಹಾಯ ಯಾಚಿಸಿದ್ದಾರೆ.
ಸುರತ್ಕಲ್ ಸಮೀಪದ ಚೊಕ್ಕಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ಹರೀಶ್ ಪೂಜಾರಿ ಹಾಗೂ ತುಳಸಿನಿ ದಂಪತಿಯ ಪುತ್ರಿ, 15 ವರ್ಷದ ದಿವ್ಯಾ ಈ ನತದೃಷ್ಟ ಬಾಲಕಿ. ಹುಟ್ಟಿನ ಸಂದರ್ಭ ಜಾಂಡಿಸ್ ಮತ್ತು ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಆಕೆಗೆ ಬಳಿಕ ದೇಹದ ಎಡ ಭಾಗದ ಬಲ ಸಂಪೂರ್ಣ ಕುಂದಿ ಹೋಗಿದ್ದು, ಹುಟ್ಟಿದಂದಿನಿಂದಲೇ ಆಕೆ ಹಾಸಿಗೆ ಹಿಡಿದಿದ್ದಾರೆ.
‘ಅಪ್ಪ-ಅಮ್ಮ, ಅಕ್ಕ ಎಂದಷ್ಟೇ ಹೇಳಬಲ್ಲ ದಿವ್ಯಾಗೆ ಬೇರೆ ಮಾತು ಬಾರದು. ಆದರೆ ತುಳು, ಕನ್ನಡವನ್ನು ಅರ್ಥೈಸಿಕೊಳ್ಳಬಲ್ಲರು. ಕೈಸನ್ನೆ ಮೂಲಕವೇ ತಾನು ಹೇಳಬೇಕಾಗಿರುವುದನ್ನು ಇತರರಿಗೆ ತಿಳಿಸುತ್ತಾರೆ’ ಎನ್ನುತ್ತಾರೆ ದಿವ್ಯಾ ಸಹೋದರಿ ದೀಕ್ಷಾ. ದಿವ್ಯಾಳಿಗೆ ಆಗಾಗ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತದೆ. ಕಡು ಬಡತನದ
ಹಿನ್ನೆಲೆ ಹೊಂದಿರುವ ಕುಟುಂಬಕ್ಕೆ ಮಗಳ ಚಿಕಿತ್ಸೆಗೆ ಹಣ ಹೊಂದಿಸುವುದು ಸಮಸ್ಯೆಯಾಗಿದೆ.
ಈಗಾಗಲೇ ಲಕ್ಷಾಂತರ ರೂ. ಸಾಲ ಮಾಡಿದ್ದು, ಸಹಾಯಕ್ಕಾಗಿ ದಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಹಾಯ ಮಾಡಲಿಚ್ಛಿಸುವವರು ದಿವ್ಯಾ ಮತ್ತು ಆಕೆಯ ತಾಯಿಯ ಜಂಟಿ ಖಾತೆಗೆ ಹಣ ಜಮೆ ಮಾಡಬಹುದು.
ದಿವ್ಯಾ ಎಂ/ಒ ತುಳಿಸಿನಿ ಇವರ ಜಂಟಿ ಖಾತೆ ಸಂಖ್ಯೆ 520101000001755, ಐಎಫ್ಎಸ್‌ಸಿ ಕೋಡ್- corp0003140 ಕಾರ್ಪೊರೇಶನ್ ಬ್ಯಾಂಕ್ ಕೂಳೂರು ಶಾಖೆ- 3140, ಮೊದಲನೇ ಮಹಡಿ, ಫಾರ್ಚೂನ್ ಫ್ಲಾಜಾ ಕಾವೂರು ರೋಡ್ ಕೂಳೂರು ಬಸ್ ನಿಲ್ದಾಣ ಎದುರು, ಮಂಗಳೂರು.