Advertisement

ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ! ಪ್ರಿಯಕರನೊಂದಿಗೆ ಪರಾರಿ ಶಂಕೆ

03:00 PM Sep 03, 2020 | keerthan |

ಕಾರ್ಕಳ: ತಾಲೂಕಿನ‌ ಮಾಳದ 20 ಹರೆಯದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

Advertisement

ಮಾಳ ಗ್ರಾಮದ ಯುವತಿ ಸ್ಥಳೀಯ ಸಿಹಿ ತಿಂಡಿ ಕಾರ್ಖಾನೆಯೊಂದರಲ್ಲಿ‌ ಕೆಲಸ ಮಾಡುತ್ತಿದಳು. ಇತ್ತೀಚೆಗೆ ಆಕೆಗೆ ಯುವಕನೋರ್ವನ ಜತೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ. ಆದರೆ ಆಕೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು ಆತನ ಜೊತೆಯೇ ತೆರಳಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಯುವತಿಯ ಮನೆಯವರು ಕೂಡ ಅದೇ ಸಂಶಯ ವ್ಯಕ್ತಪಡಿಸಿದ್ದಾರೆ. ಗೊತ್ತು ಪಡಿಸಿದ ಯುವಕನ ಜೊತೆ ವಿವಾಹಕ್ಕೆ ಇಷ್ಟವಿಲ್ಲದೆ ಮನೆ ಬಿಟ್ಟು ಹೋಗಿರುವುದಾಗಿ ಅನುಮಾನ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಅಂತಾರಾಜ್ಯ ಪ್ರವೇಶ ನಿರ್ಬಂಧ ತೆರವು: ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ನಾಪತ್ತೆಯಾಗಿರುವ ಯುವತಿಯ ಮನೆಯವರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣಾಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಡ್ರಗ್ ದಂಧೆಯ ಬಗ್ಗೆ 2009ರಲ್ಲೇ ಹೇಳಿದ್ದೆ, ಆದರೆ ನನ್ನನ್ನೇ ಜೈಲಿಗೆ ಹಾಕಿದ್ದರು: ಮುತಾಲಿಕ್

Advertisement

Udayavani is now on Telegram. Click here to join our channel and stay updated with the latest news.

Next