ದಿಸ್ಪುರ: ಪರೀಕ್ಷೆ ಬರೆಯ ಬೇಕಿದ್ದ ವಿದ್ಯಾರ್ಥಿನಿ ಶಾರ್ಟ್ಸ್ ಹಾಕಿಕೊಂಡು ಬಂದಿದ್ದಳು ಎಂದು ಪರೀಕ್ಷಾ ಹಾಲ್‌ನೊಳಗೆ ಬಿಡದೆ, ಆಕೆ ಕರ್ಟನ್ ಸುತ್ತಿಕೊಂಡು ಪರೀಕ್ಷೆ ಬರೆದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ಸೆ.15ರಂದು ಸೋತಿನ್‌ಪುರದ ಗಿರಿಜಾನಂದ ಚೌಧರಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ನಡೆಸಲಾಗಿದೆ.
ಆ ಪರೀಕ್ಷೆಗೆ ಜುಬ್ಲೀ ತಮೂಲಿ (19) ತನ್ನ ತಂದೆಯೊಂದಿಗೆ ಬಂದಿದ್ದಾಳೆ. ಶಾರ್ಟ್ಸ್ ಧರಿಸಿ ಬಂದಿದ್ದ ಆಕೆಯನ್ನು ಪರೀಕ್ಷಾ ಹಾಲ್ ಒಳಗೆ ಹೋಗದಂತೆ ತಡೆಯಲಾಗಿದೆ.
ಪ್ಯಾಂಟ್ ತರಿಸಿ ಹಾಕಿಸಿಕೊಂಡು ಪರೀಕ್ಷೆ ಬರೆಯಲು ಮೇಲ್ವಿಚಾರಕರು ಸೂಚಿ ಸಿದ್ದಾರೆ. ಕೊನೆಗೆ ಆಕೆ ಕರ್ಟನ್ ಒಂದನ್ನು ಸುತ್ತಿಕೊಂಡು ಪರೀಕ್ಷೆ ಬರೆದಿದ್ದಾಳೆ.ನನಗೆ ಅತ್ಯಂತ ಮುಜುಗರವುಂಟು ಮಾಡಿದ ಕ್ಷಣವದು ಎಂದು ಆಕೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ:ನವೆಂಬರ್ ತಿಂಗಳ ಒಳಗೆ 10,000 ಜನರಿಗೆ ಉದ್ಯೋಗ : ಗೋವಾ ಮುಖ್ಯಮಂತ್ರಿ ಭರವಸೆ
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಬಕ್ಯೂ ಅಹಮದ್ ಪ್ರತಿಕ್ರಿಯಿಸಿದ್ದು, ಇದರ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗೆ ಯಾವುದೇ ಮಾಹಿತಿಯಿಲ್ಲ. ಪರೀಕ್ಷೆಗಾಗಿ ವಿವಿಗೆ ಕಾಲೇಜನ್ನು ಸಂಪೂರ್ಣವಾಗಿ ಬಿಟ್ಟು ಕೊಡಲಾಗಿತ್ತು ಎಂದು ತಿಳಿಸಿದ್ದಾರೆ.