ಪಾಟ್ನಾ: ಮದುವೆ ವೇದಿಕೆಯ ಮೇಲೆ ನಿಂತಿದ್ದ 6 ವರ್ಷದ ಬಾಲಕಿ ವಿದ್ಯುತ್ ಶಾಕ್ ನಿಂದ ಮೃತಪಟ್ಟಿರುವ ದಾರುಣ ಘಟನೆ ಬಿಹಾರದ ಅರಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ನೈನಾ ಕುಮಾರಿ (6) ಮೃತ ಬಾಲಕಿ.
ಮದುವೆ ಸಮಾರಂಭದಲ್ಲಿ ವಧು ವರರು ಹಾರವನ್ನು ಬದಲಾಯಿಸುವ ಸಲುವಾಗಿ ವೇದಿಕೆಯಿಂದ ಇಳಿದಿದ್ದಾರೆ. ಈ ವೇಳೆ ನೈನಾ ಕುಮಾರಿ ವೇದಿಕೆಯ ಮೇಲೆ ಹತ್ತಿದ್ದಾಳೆ. ಇದೇ ವೇಳೆ ಆಟವಾಡುತ್ತಿದ್ದ ಬಾಲಕಿಗೆ ವೇದಿಕೆಯ ಮೇಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿದೆ ಎಂದು ಬಾಲಕಿಯ ಅಜ್ಜ ಮಹೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರೈಲ್ವೆ ಸಿಬ್ಬಂದಿ ಅಚಾತುರ್ಯ; ಪ್ರಯಾಣಿಕರನ್ನು ಬಿಟ್ಟು ಹೋದ ಸಿಕಂದರಾಬಾದ್ ಎಕ್ಸ್‌ಪ್ರೆಸ್!
ಘಟನೆ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಟೆಂಟ್ ಡೆಕೋರೇಟರ್ ಎಸ್ ಕುಮಾರ್ ಕೇಸರಿ ಮತ್ತು ರಂಜಿತ್ ಕುಮಾರ್ ವಿರುದ್ಧ ಮಹೇಂದ್ರ ಸಿಂಗ್ ಅವರು ನಿರ್ಲಕ್ಷ್ಯ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.