ರಾಜಸ್ಥಾನ: ಮೊನ್ನೆ ಮೊನ್ನೆಯಷ್ಟೇ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದು ಸುಮಾರು 55 ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಬಾಲಕ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಮನೆಯ ಬಳಿಯ ಜಮೀನಿನಲ್ಲಿ ಆಟವಾಡುವ ವೇಳೆ ತೆರೆದ ಕೊಳವೆ ಬವಿದೆ ಬಿದ್ದ ಘಟನೆ ಸೋಮವಾರ(ಡಿ.23) ನಡೆದಿದ್ದು ಇದೀಗ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕೊಳವೆ ಬಾವಿಗೆ ಬಿದ್ದ ಬಾಲಕಿಯನ್ನು ಚೇತನಾ(3) ಎನ್ನಲಾಗಿದ್ದು ಆಕೆ ತನ್ನ ತಂದೆಯ ಜೊತೆ ತೋಟಕ್ಕೆ ಹೋಗಿದ್ದ ವೇಳೆ ಆಟವಾಡುತ್ತಿದ್ದ ಸಂದರ್ಭ ಆಯತಪ್ಪಿ 700 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದು 150 ಅಡಿ ಆಳದಲ್ಲಿ ಸಿಲುಕಿದ್ದಳು.
ಬಾಲಕಿ ಕೊಳವೆ ಬಾವಿಗೆ ಬಿದ್ದ ವಿಚಾರ ತಿಳಿಯುಯುತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಿ ಬಾಲಕಿಯ ರಕ್ಷಣೆಗೆ ಮುಂದಾಗಿದೆ, ಬಾಲಕಿಯ ಚಲನವಲನಗಳನ್ನು ಕ್ಯಾಮೆರಾ ಮೂಲಕ ಸೆರೆಹಿಡಿಯಲಾಗಿದ್ದು, ಆಮ್ಲಜನಕವನ್ನು ಪೂರೈಸಲು ಆಕ್ಸಿಜನ್ ಪೈಪ್ ಅನ್ನು ಬೋರ್‌ವೆಲ್‌ಗೆ ಇಳಿಸಲಾಗಿದೆ.
ಘಟನಾ ಸ್ಥಳದಲ್ಲಿ NDRF ಮತ್ತು SDRF ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು ಇದುವರೆಗೆ ಸುಮಾರು 19 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದ್ದು ಆದರೂ ಬಾಲಕಿಯ ರಕ್ಷಣೆ ಕಠಿಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ರಕ್ಷಣಾ ತಂಡ ಬಾಲಕಿಯನ್ನು ಹೊರತೆಗೆಯಲು ‘ಹುಕ್ ತಂತ್ರ’ವನ್ನು ಬಳಸಲು ಯೋಜಿಸುತ್ತಿದೆ.
ಚೇತನಾ ಸುಮಾರು 150 ಅಡಿ ಆಳದಲ್ಲಿ ಸಿಲುಕಿದ್ದು ಅಧಿಕಾರಿಗಳ ಪ್ರಕಾರ, 150 ಅಡಿ ಅಗೆಯುವುದು ಕಷ್ಟಸಾಧ್ಯ ಅಲ್ಲದೆ ಕಾರ್ಯಾಚರಣೆಗೆ ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ, ಹಾಗಾಗಿ ಕೊಕ್ಕೆ ಬಳಸಿ ಬಾಲಕಿಯನ್ನು ಹೊರತೆಗೆಯಲು ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಬಾಲಕಿಯ ಪೋಷಕರ ಬಳಿ ಲಿಖಿತ ಒಪ್ಪಿಗೆಯನ್ನು ಪಡೆದು ಬಳಿಕ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಕುರಿತು ಮಾತನಾಡಿದ ಎನ್‌ಡಿಆರ್‌ಎಫ್ ಅಧಿಕಾರಿ ಯೋಗೇಶ್ ಮೀನಾ ನಾವು ಬಾಲಕಿಯ ರಕ್ಷಣೆಗೆ ಹೆಚ್ಚಿನ ಪ್ರಯತ್ನ ಮಾಡಿದ್ದೇವೆ ಆದರೆ ಬಾಲಕಿ 150 ಅಡಿ ಆಳದಲ್ಲಿರುವ ಕಾರಣ ಕಾರ್ಯಾಚರಣೆ ಕಷ್ಟಸಾಧ್ಯ ಹಾಗಾಗಿ ಕೊನೆಯ ಪ್ರಯತ್ನ ಕೊಕ್ಕೆ ಬಳಸಿ ಕಾರ್ಯಾಚರಣೆ ನಡೆಸುವುದು ಇದಕ್ಕೆ ಬಾಲಕಿಯ ಪೋಷಕರ ಒಪ್ಪಿಗೆ ಬೇಕು ಒಂದು ವೇಳೆ ಒಪ್ಪಿಗೆ ಸಿಕ್ಕರೆ ಅದರ ಮೂಲಕ ಬಾಲಕಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ