Advertisement

ಹುಲಿ ಕಥೆ ಹೇಳ್ತಾರೆ ಗಿರಿರಾಜ್‌

04:41 AM Jun 28, 2020 | Lakshmi GovindaRaj |

ನಿರ್ದೇಶಕ “ಜಟ್ಟ’ ಗಿರಿರಾಜ್‌ ಯಾವುದೇ ಚಿತ್ರ ಮಾಡಿದರೂ ಅದರಲ್ಲಿ ಹೊಸ ವಿಷಯ ಇದ್ದೇ ಇರುತ್ತೆ. ಅಷ್ಟೇ ಅಲ್ಲ, ಅವರ ಚಿತ್ರಗಳಲ್ಲಿ ಸಾಕಷ್ಟು ಸೂಕ್ಷ್ಮತೆ ಇರುತ್ತದೆ. ಅವರ ಹಿಂದಿನ ಸಿನಿಮಾಗಳನ್ನು ಗಮನಿಸಿದರೆ, ಅದರೊಳಗಿರುವ ಗಂಭೀರತೆ ಅರ್ಥವಾಗುತ್ತೆ. ಈಗ ಅವರು ಮತ್ತೂಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ಅವನಿ ರಿಟರ್ನ್ಸ್’ ಎಂದು ಹೆಸರಿಡಲಾಗಿದೆ.

Advertisement

ಮಹಾರಾಷ್ಟ್ರದಲ್ಲಿ ಅವನಿ ಹೆಸರಿನ ಹುಲಿ ಎರಡು ವರ್ಷಗಳಿದಲೂ ಸುಮಾರು 13ಕ್ಕೂ ಹೆಚ್ಚು ಹಳ್ಳಿ ಜನರ ಪ್ರಾಣ ತೆಗೆದಿತ್ತು. ಅದರಿಂದಾಗಿ ಆ ಹುಲಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಶೂಟ್‌ ಮಾಡಲಾಯಿತು. ಆ ಬಳಿಕ ಹುಲಿಯನ್ನು ಸಾಯಿಸಬಾರದು ಎಂದು ಪ್ರಾಣಿ ಪ್ರಿಯರು ಕೂಡ ದೊಡ್ಡದ್ದಾಗಿಯೇ ಧ್ವನಿ ಎತ್ತಿದ್ದರು. ಆ ಪ್ರಕರಣದ ಕುರಿತಂತೆ ಗಿರಿರಾಜ್‌ ಅವರು ಒಂದು ಸ್ಕ್ರಿಪ್ಟ್ ಮಾಡಿಕೊಂಡು ಇದೀಗ “ಅವನಿ ರಿಟರ್ನ್ಸ್’ ಸಿನಿಮಾ ಮಾಡುತ್ತಿದ್ದಾರೆ.

ಈ ಸಿನಿಮಾವನ್ನು ಉಯದ್‌ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಯಲ್ಲಿ ತಯಾರು ಮಾಡಲಾಗುತ್ತಿದೆ. ಗಿರಿರಾಜ್‌ ಅವರು ಈ ಕಥೆ ಪೂರ್ಣಗೊಳಿಸುವ ಮುನ್ನ, ಕನ್ನಡಕ್ಕೆ ಮಾತ್ರ ಅಂದುಕೊಂಡಿದ್ದರು. ಆದರೆ, ಸ್ಕ್ರಿಪ್ಟ್ ಮಾಡಿದ ಬಳಿಕ ಈ ಕಥೆ ಎಲ್ಲಾ ಕಡೆ ಸಲ್ಲುವಂಥದ್ದು ಎಂಬುದನ್ನು ಅರಿತು ದಕ್ಷಿಣ ಭಾರತ ಭಾಷೆಯಲ್ಲಿ ಮಾಡುವ ಯೋಚನೆ ಮಾಡಲಾಗಿದೆಯಂತೆ.

ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಚಿತ್ರದಲ್ಲಿ ಗ್ರಾಫಿಕ್ಸ್‌ಗೆ ಹೆಚ್ಚು ಕೆಲಸವಿದೆ. ಆದ್ದರಿಂದ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ ಎಂದು ಹೇಳುವ ನಿರ್ಮಾಪಕ ಉದಯ್‌ ಮೆಹ್ತಾ, ಇದೇ ಮೊದಲ ಸಲ ಈ ರೀತಿಯ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿರುವುದು ನಮ್ಮ ಖುಷಿಯನ್ನು ಹೆಚ್ಚಿಸಿದೆ. ಸಿನಿಮಾದಲ್ಲಿ ಹುಲಿಯೇ ಹೀರೋ. ಉಳಿದಂತೆ ಒಂದಷ್ಟು ಪ್ರಮುಖ ಪಾತ್ರಗಳಿವೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next