Advertisement

ಜಾರಕಿಹೊಳಿ ಸೋದರರಿಗೆ ಗಿಮಿಕ್‌ ಬಿಸಿ?

06:00 AM Apr 25, 2018 | |

ಬೆಳಗಾವಿ: ಸುದ್ದಿಯಾಗುತ್ತಲೇ ಬಂದಿದ್ದ ಜಿಲ್ಲೆಯ ಮಹತ್ವದ ಕ್ಷೇತ್ರಗಳಲ್ಲಿ ಯಮಕನ ಮರಡಿ ಸಹ ಪ್ರಮುಖವಾದುದು. ಇಲ್ಲಿ ಕಳೆದ 2 ಚುನಾವಣೆಗಳಲ್ಲಿ ಸತೀಶ ಜಾರಕಿಹೊಳಿಯೇ ಗೆದ್ದು ಬಂದು ತಮ್ಮ ಪ್ರಭುತ್ವ ಸಾಧಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ತಾವು ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಲಖನ್‌ ಜಾರಕಿಹೊಳಿ ತಮ್ಮ ಸಹೋದರನ ವಿರುದ್ಧವೇ ತೀವ್ರ ವಾಗ್ಧಾಳಿ ನಡೆಸಿ ದ್ದರಿಂದ ಯಮಕನಮರಡಿ ಕ್ಷೇತ್ರ ಎಲ್ಲರ ಗಮನಸೆಳೆದಿದೆ.

Advertisement

ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನ  ಜಾರಕಿಹೊಳಿ ಸಹೋದರರ ರಾಜಕೀಯ ಗಿಮಿಕ್‌ ಸುದ್ದಿ ಮಾಡಿತ್ತು. ಆ ತನಕ ದಿನಕ್ಕೊಂದು ಸುದ್ದಿ ಮಾಡು ತ್ತಿದ್ದ ಲಖನ್‌, ರಮೇಶ್‌ ಹಾಗೂ ಸತೀಶ್‌ ಜಾರಕಿಹೊಳಿ ಸಹೋದರರು ಆನಂತರ ಒಮ್ಮೆಲೇ ಏನೂ ನಡೆದೇ ಇಲ್ಲ ಎನ್ನುವಂತೆ ಮೌನವಾದರು. ಯಮಕನಮರಡಿ ಈ ಬಾರಿ ಸಹೋ ದರರ ಸವಾಲಿಗೆ ಸಾಕ್ಷಿ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮುಖ್ಯಮಂತ್ರಿ ಸಮ್ಮುಖ ದಲ್ಲಿ ನಡೆದ ಮಾತುಕತೆ ಎಲ್ಲದಕ್ಕೂ ತೆರೆ ಎಳೆಯಿತು.

ಲಖನ್‌ ಜಾರಕಿಹೊಳಿ ಆಗಾಗ ತಮ್ಮ ಸಹೋದರ ಸತೀಶ್‌ ವಿರುದ್ಧ ಹೇಳಿಕೆ ನೀಡಿದ್ದರೂ ಅದಕ್ಕೆ ತಮ್ಮದೇ ಧಾಟಿಯಲ್ಲಿ ಸತೀಶ ಉತ್ತರ ನೀಡಿದರು. ಆದರೆ ಸಹೋ ದರರ ಈ ಹೇಳಿಕೆಗಳು ಪ್ರತಿಯೊಬ್ಬರೂ ಯಮಕನಮರಡಿ ಕಡೆ ನೋಡುವಂತೆ ಮಾಡಿದವು.

ತಾವು ಈಗ ರಾಷ್ಟ್ರಮಟ್ಟದ ರಾಜಕಾರಣಿ. ಮುಂದೊಂದು ದಿನ ಮುಖ್ಯಮಂತ್ರಿ ಆಭ್ಯರ್ಥಿ ಎಂದು ಈಗಾಗಲೇ ಹೇಳಿರುವ ಸತೀಶ್‌ ಅದಕ್ಕೆ ಪೂರಕವಾಗಿ ದೆಹಲಿ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಎಐಸಿಸಿ ಕಾರ್ಯದರ್ಶಿ ಆದರು. ಆಂಧ್ರಪ್ರದೇಶದ ಉಸ್ತುವಾರಿಯಾಗಿ ನೇಮಕ ವಾದರು. ಈ ಎಲ್ಲ ಅಂಶಗಳು ಯಮಕನಮರಡಿ ಕ್ಷೇತ್ರ ಸ್ಟಾರ್‌ ಕೇಂದ್ರವಾಗಲು ಕಾರಣವಾಯಿತು.

2008ರಲ್ಲಿ ಉದಯವಾದ ಯುಮಕನ ಮರಡಿ ಕ್ಷೇತ್ರಕ್ಕೆ ಸತೀಶ ಜಾರಕಿಹೊಳಿ ಪ್ರವೇಶ ಮಾಡಿದ ನಂತರ ಇಲ್ಲಿ ರಾಜಕೀಯ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿಲ್ಲ. 2  ಬಾರಿ ಅವರು ಭಾರಿ ಅಂತರದಿಂದ ಜಯಗಳಿಸಿದ್ದಾರೆ.

Advertisement

ಟರ್ನಿಂಗ್‌ ಪಾಯಿಂಟ್‌
ತಾವೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿ ಪ್ರಚಾರ ಪಡೆದಿದ್ದ ಲಖನ್‌ ನಂತರ ಕಾಂಗ್ರೆಸ್‌ಬಿಡುವ ಪ್ರಶ್ನೆ ಇಲ್ಲ ಎಂದರು. ಲಖನ್‌ರ ಈ ಹೇಳಿಕೆ ಯಿಂದ ಆಕ್ರೋಶ ಗೊಂಡು ಅವರ ವಿರುದ್ಧ ಹರಿಹಾಯ್ದಿದ್ದ ಬಿಜೆಪಿಗೆ ಈಗ ಜಾರಕಿಹೊಳಿ ಸಹೋದರರು ಜನರ ದಾರಿ ತಪ್ಪಿಸು ತ್ತಾರೆ ಎಂಬ ಅಸ್ತ್ರ ಸಿಕ್ಕಿದೆ. ಇದು ಟರ್ನಿಂಗ್‌ ಪಾಯಿಂಟ್‌ ಆಗಬಹುದು. 

ಸ್ಪರ್ಧಿಗಳು
ಸತೀಶ ಜಾರಕಿಹೊಳಿ
ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ತಮ್ಮ ವಿಶಿಷ್ಟ ಕಾರ್ಯ ಶೈಲಿಯ ಮೂಲಕ ಸುದ್ದಿಯಾ ಗುವ ಸತೀಶ ಜಾರಕಿಹೊಳಿ ಯಾವತ್ತೂ ವಿವಾದಾತ್ಮಕ ಹೇಳಿಕೆ ಗಳಿಗೆ ಕೈಹಾಕಿಲ್ಲ. ಆದರೆ ತಮ್ಮ ರಾಜಕೀಯ ಚಾಣಾಕ್ಷ ನಡೆಯ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ.

ಮಾರುತಿ ಅಷ್ಟಗಿ
ಬಿಜೆಪಿಯಿಂದ ಮತ್ತೂಮ್ಮೆ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಸತೀಶ ವಿರುದ್ಧ 25 ಸಾವಿರ ಮತಗಳ ಅಂತರದಿಂದ ಸೋಲು ಕಂಡಿರುವ ಮಾರುತಿ ಅಷ್ಟಗಿ ಈಗ ಕ್ಷೇತ್ರದ ತುಂಬ ಸಂಚರಿಸಿ ಪಕ್ಷ ಕಟ್ಟಿದ್ದಾರೆ. ಜಾರಕಿ ಹೊಳಿ ಸಹೋ ದರರ ದ್ವಂದ್ವ ನಿಲುವು ಇವರಿಗೆ ಚುನಾವಣೆಗೆ ಪ್ರಮುಖ ಅಸ್ತ್ರ.

ಶಂಕರ ಭರಮಗಸ್ತಿ
ಜೆಡಿಎಸ್‌ದಿಂದ ಟಿಕೆಟ್‌ ಪಡೆದಿರುವ ಶಂಕರ ಭರಮಗಸ್ತಿ ಮೊದಲ ಬಾರಿಗೆ  ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.

ನಿರ್ಣಾಯಕರು
ಪರಿಶಿಷ್ಟ ವರ್ಗಕ್ಕೆ ಮೀಸಲು ಕ್ಷೇತ್ರವಾದ ಯಮಕನಮರಡಿ ಯಲ್ಲಿ ಪರಿಶಿಷ್ಟ ವರ್ಗ, ಲಿಂಗಾಯತರು, ಮರಾಠಾ ಸಮಾಜ ಹಾಗೂ ಪರಿಶಿಷ್ಟ ಜಾತಿ ಮತದಾರರೇ ನಿರ್ಣಾ ಯಕರು. ಈ ಕ್ಷೇತ್ರದಲ್ಲಿ ಲಿಂಗಾಯತರು ಸುಮಾರು 18,000, ಮರಾಠಾ-15,000, ಪರಿಶಿಷ್ಟ ಜಾತಿ-15,000 ಹಾಗೂ ಪರಿಶಿಷ್ಟ ವರ್ಗದ 8,700 ಮತದಾರರಿದ್ದಾರೆ.

ಮತದಾರರ ಸಂಖ್ಯೆ
ಒಟ್ಟು  1,82,478
ಪುರುಷರು 91032
ಮಹಿಳೆಯರು 91436

ಜಾತಿವಾರು
ಎಸ್‌ ಟಿ 61546
ಮರಾಠಾ 18250
ಲಿಂಗಾಯತ 18200
ಎಸ್‌ ಸಿ 15000
ಮುಸ್ಲಿಮ್‌ 11485 
ಜೈನ 9700

ಕ್ಷೇತ್ರದಲ್ಲಿ ಯಾವುದೇ  ಗೊಂದಲ ಇಲ್ಲ. ನಾನು ಮೊದಲಿಂದಲೂ ಇದನ್ನೇ ಹೇಳಿದ್ದೆ, ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿದ್ದಾರೆ. ಬಾಕಿ ಉಳಿದಿರುವ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾ ಗುವುದು. ನನ್ನ ಗೆಲುವಿಗೆ ಸಮಸ್ಯೆ ಇಲ್ಲ. 
ಸತೀಶ ಜಾರಕಿಹೊಳಿ

5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಯನ್ನು ಶ್ರಮಪಟ್ಟು ಬೆಳೆಸಿದ್ದೇನೆ. ಕಾಂಗ್ರೆಸ್‌ ಸರಕಾರದ ವೈಫಲ್ಯ ವನ್ನು ಜನರ ಮನೆ ಮನೆಗೆ ತಲುಪಿಸಿದ್ದೇನೆ. ಜನರಿಗೂ ಬದಲಾವಣೆ ಬೇಕಾಗಿದೆ. ಮೂಲ ಸೌಕರ್ಯಗಳ ಜೊತೆಗೆ ಯುವಕರಿಗೆ  ಉದ್ಯೋಗ ಸೃಷ್ಟಿಸುವ ಉದ್ದೇಶ ಇದೆ.
ಮಾರುತಿ ಅಷ್ಟಗಿ

10 ವರ್ಷಗಳಿಂದ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದೆ. ಹುಸಿ ಭರವಸೆಗಳಿಂದ ಜನರು ಬೇಸತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಪ್ರಗತಿ ಸಾಧ್ಯವಿಲ್ಲ. ಈ ಬಾರಿ ಜೆಡಿಎಸ್‌ ಗೆಲುವಿಗೆ ಪೂರಕ ವಾತಾವರಣವಿದೆ. ಭರವಸೆಗಿಂತ ಕೆಲಸ ಮಾಡುವವರಿಗೆ ಆದ್ಯತೆ ಸಿಗಲಿದೆ.
ಶಂಕರ ಭರಮಗಸ್ತಿ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next