Advertisement

World Cup ಅಭ್ಯಾಸ ಆರಂಭಿಸಿದ ಗಿಲ್‌; ಪಾಕ್ ವಿರುದ್ಧದ ಪಂದ್ಯಕ್ಕೆ ಮರಳುವ ಭರವಸೆ

11:43 PM Oct 12, 2023 | Team Udayavani |

ಅಹ್ಮದಾಬಾದ್‌: ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡಿರುವ ಶುಭಮನ್‌ ಗಿಲ್‌ ಅವರು ಗುರುವಾರ ನಾಲ್ಕು ತಾಸುಗಳವರಗೆ ನೆಟ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ಮೂಲಕ ಶನಿವಾರ ನಡೆಯುಯವ ಪಾಕಿಸ್ಥಾನ ವಿರುದ್ಧದ ಮಹತ್ವದ ಪಂದ್ಯಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ.

Advertisement

ಗಿಲ್‌ ಅವರು ನೆಟ್‌ನಲ್ಲಿ ಅಭ್ಯಾಸ ಮಾಡಿದರೂ ಅವರನ್ನು ಮಹತ್ವದ ಪಂದ್ಯಕ್ಕೆ ಆಯ್ಕೆ ಮಾಡುವ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಜ್ವರದಿಂದಾಗಿ ಅವರು ಈಗಾಗಲೇ ಆಸ್ಟ್ರೇಲಿಯ ಮತ್ತು ಅಫ್ಘಾನಿಸ್ಥಾನ ವಿರುದ್ದದ ಪಂದ್ಯದಲ್ಲಿ ಆಡಿರಲಿಲ್ಲ. ಇಲ್ಲಿನ ಕ್ರೀಡಾಂಗಣಕ್ಕೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಗಿಲ್‌ ಅವರಿಗೆ ವಿಶೇಷ ನೆಟ್‌ ಅಭ್ಯಾಸದ ವ್ಯವಸ್ಥೆ ಕಲ್ಪಿಸಲಾಗಿತ್ತು. ತಂಡದ ವೈದ್ಯ ರಿಜ್ವಾನ್‌ ಅವರ ಮಾರ್ಗದರ್ಶನ ದಲ್ಲಿ ಗಿಲ್‌ ಬ್ಯಾಟಿಂಗ್‌ ಅಭ್ಯಾಸ ನಡೆಸಿ ದರು. ಕೆಲವೊಂದು ವ್ಯಾಯಾಮದಲ್ಲಿ ಭಾಗವಹಿಸಿದ ಅವರು ನೆಟ್‌ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next