Advertisement
3 ಮತ್ತು 4 ನೇ ಸ್ಥಾನದಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮ್ಯಾನ್ ಕ್ವಿಂಟನ್ ಡಿ ಕಾಕ್ (769) ಮತ್ತು ಹೆನ್ರಿಕ್ ಕ್ಲಾಸೆನ್(756) ಅವರಿದ್ದಾರೆ.
ಆಸ್ಟ್ರೇಲಿಯದ ಸೀಮರ್ ಜೋಶ್ ಹೇಜಲ್‌ವುಡ್ ನಂಬರ್ 1 ಏಕದಿನ ಬೌಲರ್ ಆಗಿದ್ದು, ವಿಶ್ವಕಪ್‌ನಲ್ಲಿ ಐದು ಪಂದ್ಯಗಳಿಂದ ಆರು ವಿಕೆಟ್‌ಗಳನ್ನು ಪಡೆದಿರುವ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಎರಡು ಸ್ಥಾನಗಳ ಏರಿಕೆಯೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಇದುವರೆಗಿನ ಪಂದ್ಯಾವಳಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ ನಂತರ ಹೊಸ ವೃತ್ತಿಜೀವನದ ಉನ್ನತ ರೇಟಿಂಗ್ ಅನ್ನು ಗಳಿಸಿದ್ದಾರೆ. ಅಫ್ಘಾನ್ ನ ಸ್ಪಿನ್ನರ್ ರಶೀದ್ ಖಾನ್ 4 ನೇ ಸ್ಥಾನದಲ್ಲಿದ್ದಾರೆ. ಕುಲದೀಪ್ ಯಾದವ್ 9 ನೇ ಸ್ಥಾನದಲ್ಲಿದ್ದಾರೆ. 10 ನೇ ಸ್ಥಾನದಲ್ಲಿ ಪಾಕ್ ನ ವೇಗಿ ಶಾಹೀನ್ ಅಫ್ರಿದಿ ಇದ್ದಾರೆ.
Related Articles
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಆಲ್-ರೌಂಡರ್ ನಂಬರ್ 1 ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಬೀನ್‌ಪೋಲ್ ಮಾರ್ಕೊ ಜಾನ್ಸೆನ್ ಈ ಪಟ್ಟಿಯಲ್ಲಿ 23 ಸ್ಥಾನಗಳನ್ನು ಸ್ಕಾಟ್ಲೆಂಡ್‌ನ ಮೈಕೆಲ್ ಲೀಸ್ಕ್ ಜೊತೆಗೆ 11 ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. 2 ನೇ ಸ್ಥಾನದಲ್ಲಿ ಅಫ್ಘಾನ್ ನ ಮೊಹಮ್ಮದ್ ನಬಿ ಅವರಿದ್ದಾರೆ. ಹಾರ್ದಿಕ್ ಪಾಂಡ್ಯ 9 ಮತ್ತು ರವೀಂದ್ರ ಜಡೇಜಾ 15 ನೇ ಸ್ಥಾನದಲ್ಲಿದ್ದಾರೆ.
Advertisement