Advertisement
ಪ್ರದರ್ಶನ:ನೀರಿನ ಬಾಟಲಿಯ ಮೂರು ಕ್ಯಾಪ್ ಗಳ ಕೆಳಗೆ ಒಂದು ಕಾಯಿನ್ ಅನ್ನು ಪ್ರೇಕ್ಷಕರಿಗೆ ಬಚ್ಚಿಡಲು ಹೇಳಿ, ಜಾದೂಗಾರ ಕಣ್ಣು ಮುಚ್ಚಿಕೊಳ್ಳುತ್ತಾನೆ. ನಂತರ ಕಾಯಿನ್‌ಇಟ್ಟ ಕ್ಯಾಪಿನ ಜಾಗವನ್ನು ಅದಲು ಬದಲು ಮಾಡಲು ಹೇಳುತ್ತಾನೆ. ಅವರು ರೆಡಿ ಎಂದು ಹೇಳಿದ ಮೇಲೆ ಕಣ್ಣು ಬಿಟ್ಟ ಜಾದೂಗಾರ ಯಾವ ಕ್ಯಾಪಿನ ಅಡಿಯಲ್ಲಿ ಕಾಯಿನ್ ಇದೆಎಂದು ಥಟ್ ಅಂತ ಒಂದೇ ಬಾರಿಗೆ ತೋರಿಸಿ ಬಿಡುತ್ತಾನೆ.ಇದು ಹೇಗೆ ಸಾಧ್ಯ?
ಒಂದು ನಾಣ್ಯ, ಮೂರು ಕ್ಯಾಪ್‌ಗ್ಳು, ಒಂದು ಎರಡಿಂಚಿನಷ್ಟು ಉದ್ದದ ಕೂದಲು, ಅಂಟಿಸಲು ಸೆಲ್ಲೋ ಟೇಪ್ ಅಥವಾ ಫೆವಿ ಕ್ವಿಕ್ ಮಾಡುವ ವಿಧಾನ:
ಪ್ರದರ್ಶನಕ್ಕೂ ಮೊದಲೇ ನಾಣ್ಯದ ಹಿಂಬಾಗಕ್ಕೆ ಪ್ರೇಕ್ಷಕರಿಗೆ ಗೊತ್ತಾಗದ ಹಾಗೆ ಕೂದಲನ್ನು ಒಂದು ಸೆಲ್ಲೋ ಟೇಪ್ ಅಥವಾ ಫೆವಿಕ್ವಿಕ್ ಸಹಾಯದಿಂದ ಅಂಟಿಸಿಡಿ. ಕಾಯಿನ್ ನ ಇಟ್ಟು ಅವರು ರೆಡಿ ಅಂದ ಮೇಲೆ ಕಣ್ಣು ಬಿಟ್ಟು ಯಾವ ಕ್ಯಾಪಿನ ಅಡಿಯಿಂದ ಕೂದಲು ಈಚೆಗೆ ಕಾಣಿಸುತ್ತಿದೆ ಎಂದು ಗಮನಿಸಿ,ಆ ಕ್ಯಾಪನ್ನು ಥಟ್ ಅಂತ ತೋರಿಸಿ ಬಿಡಿ. ಕೂದಲು ಅಂಟಿಸಿರುವುದು ಗಮನಕ್ಕೆ ಬಾರದೇಯಿರುವುದರಿಂದ ಪ್ರೇಕ್ಷಕ ಚಕಿತಗೊಳ್ಳುವುದರಲ್ಲಿ ಅನುಮಾನವೇಯಿಲ್ಲ. ಚೆನ್ನಾಗಿದೆಯಲ್ಲಾ? ಸರಿ ಉದಯ್ ಜಾದೂಗಾರರ ಜಾದು ನೀವೂ ಮಾಡಿ ನಿಮ್ಮ ಸ್ನೇಹಿತರಿಂದ ಚಪ್ಪಾಳೆ ಗಿಟ್ಟಿಸಿ.
Related Articles
Advertisement
ಉದಯ್ ಜಾದೂಗಾರ್ನಿರೂಪಣೆ- ಗಾಯತ್ರಿ ಯತಿರಾಜ್