ಲಂಡನ್: ಸಮುದ್ರ ತಳವೆನ್ನುವುದು ಬೇರೆಯದ್ದೇ ಪ್ರಪಂಚ. ಅಲ್ಲಿ ಅಗಣ್ಯ ಜಲಚರಗಳು ಜೀವಿಸುತ್ತಿವೆ. ಅದೇ ರೀತಿ ಶತಮಾನಗಳ ಹಿಂದೆಯೇ ಜೀವಿಸಿ, ನಶಿಸಿ ಹೋದ ಜಲಚರವಾದ ಇಕ್ತ್ಯೋಸರ್ ನ ಅತೀ ದೊಡ್ಡ ಅಸ್ಥಿ ಪಂಜರವೊಂದು ಈಗ ಯು.ಕೆ.ಯಲ್ಲಿ ಪತ್ತೆಯಾಗಿದೆ.
ಯು.ಕೆ.ಯ
ರುಟ್ಲ್ಯಾಂಡ್ ಜಲ ಸಂರಕ್ಷಣ ಪ್ರದೇಶದಲ್ಲಿ ಇದು ಪತ್ತೆಯಾಗಿದೆ. ಅಲ್ಲಿನ ಜಲ ಸಂರಕ್ಷಣೆ ತಂಡದ ಮುಖ್ಯಸ್ಥರಾಗಿರುವ ಜೋ ಡೇವಿಸ್ ಅವರಿಗೆ ಸಮುದ್ರದ ತಟದಲ್ಲಿ ಏನೋ ಉಬ್ಬು-ತಂಗು ಕಂಡಿದೆ. ಈ ಹಿಂದೆಯೇ ಈ ರೀತಿ ವೇಲ್ ಮತ್ತು ಡಾಲ್ಫಿನ್‌ಗಳ ಅಸ್ಥಿಪಂಜರ ಪತ್ತೆ ಹಚ್ಚಿದ್ದ ಅವರಿಗೆ ಈ ಉಬ್ಬು-ತಗ್ಗಿನಲ್ಲೂ ಯಾವುದೋ ಪಳೆಯುಳಿಕೆ ಇರುವ ಅನುಮಾನ ಬಂದಿದೆ. ಜಲ ಸಂರಕ್ಷಣ ಅಧಿಕಾರಿಯಾದ ಪಾಲ್ ಜತೆಗೂಡಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇಕ್ತ್ಯೋಸರ್ ನ ಅಸ್ಥಿಗಳು ಕಾಣಿಸಿದ್ದಾಗಿ ಹೇಳಲಾಗಿದೆ.
ಅಂದ ಹಾಗೆ ಈ ಹಿಂದೆಯೂ ಅಮೆರಿಕದ ಕೆಲವೆಡೆ ಇಕ್ತ್ಯೋಸರ್ ನ ಅಸ್ಥಿಪಂಜರಗಳು ಸಿಕ್ಕಿವೆ. ಆದರೆ ಇಷ್ಟು ಪೂರ್ಣ ಪ್ರಮಾಣದಲ್ಲಿ ಹಾಗೂ ಇಷ್ಟು ದೊಡ್ಡ ಇಕ್ತ್ಯೋಸರ್ ನ ಅಸ್ಥಿಪಂಜರ ಇದೇ ಮೊದಲು ಸಿಕ್ಕಿದ್ದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 14,473 ಕೋವಿಡ್ ಪ್ರಕರಣ ಪತ್ತೆ, 5 ಸಾವು: ಪಾಸಿಟಿವಿಟಿ ದರ ಶೇ.10.30
18 ಕೋಟಿ ವರ್ಷ ಹಳೆಯದ್ದು: ಇಕ್ತ್ಯೋಸರ್ ಸುಮಾರು 25 ಕೋಟಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದು 9 ಕೋಟಿ ವರ್ಷಗಳ ಹಿಂದೆಯೇ ನಶಿಸಿಹೋಗಿವೆ. ಇಕ್ತ್ಯೋಸರ್ ಗಳು ಉದ್ದನೆ ಮೂತಿ ಹೊಂದಿದ್ದರಿಂದಾಗಿ ಅವುಗಳನ್ನು ಸೀ ಡ್ರ್ಯಾಗನ್ ಎಂದೂ ಕರೆಯಲಾಗುತ್ತಿತ್ತು. ಈಗ ಪತ್ತೆಯಾಗಿ ರುವ ಈ ಅಸ್ಥಿಪಂಜರ ಸುಮಾರು 18 ಕೋಟಿ ವರ್ಷಗಳಷ್ಟು ಹಳೆಯದು ಎಂದು ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. 10 ಮೀಟರ್‌ಗಳಷ್ಟು ಉದ್ದವಿರುವ ಅಸ್ಥಿಪಂಜರದ ತಲೆ ಭಾಗವೇ ಸುಮಾರು ಒಂದು ಟನ್ ತೂಕವಿದೆ.