ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಕಲಂ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಮಾಜಿ ಮುಖಂಡ ಗುಲಾಂ ನಬಿ ಆಜಾದ್ ಬೆಂಬಲಿಸಿದ್ದರು ಎಂದು ಜಮ್ಮು-ಕಾಶ್ಮೀರದ ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ: ನಿಂತಿದ್ದ ಬಸ್ಸಿಗೆ ಟ್ರಕ್ ಢಿಕ್ಕಿ ಹೊಡೆದು 4ಕಾರ್ಮಿಕರು ಸಾವು, 24 ಮಂದಿಗೆ ಗಾಯ
ರಾಜ್ಯದಲ್ಲಿ ಗುಲಾಂ ನಬಿ ನೂತನ ಪಕ್ಷ ಸ್ಥಾಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಬುಖಾರಿ ಪ್ರತಿಕ್ರಿಯೆ ನೀಡುತ್ತಾ, ಲೋಕಸಭೆಯಲ್ಲಿ ಗುಲಾಂ ನಬಿ ಆಜಾದ್ ಕಲಂ 370 ರದ್ದುಗೊಳಿಸುವ ಬಗ್ಗೆ ಸಮರ್ಥಿಸಿಕೊಂಡು, ಅದರ ಪರ ಮತ ಚಲಾಯಿಸಿದ್ದರು ಎಂದರು.
ಆರ್ಟಿಕಲ್ 370 ರದ್ದುಗೊಳಿಸುವ ನಿರ್ಣಯದ ಪರ ಮತ ಚಲಾಯಿಸಿದ್ದರ ಬಗ್ಗೆ ಆಜಾದ್ ಉತ್ತರ ನೀಡಬೇಕು ಎಂದು ಬುಖಾರಿ ಈ ಸಂದರ್ಭದಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಗುಲಾಂ ನಬಿ ಆಜಾದ್ ನಾಯಕತ್ವದ ವಿಚಾರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ರಿಮೋಟ್ ಕಂಟ್ರೋಲ್ ಮಾದರಿಯ ಆಡಳಿತದಿಂದಾಗಿ ಯುಪಿಎ ಆಡಳಿತ ಸಾಂವಿಧಾನಿಕ ಆಡಳಿತ ನಾಶವಾಗಲು ಕಾರಣವಾಗಿತ್ತು ಎಂದು ಆಜಾದ್ ರಾಜೀನಾಮೆ ಪತ್ರದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಆರೋಪಿಸಿದ್ದರು.