ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಕಣಿವೆ ಪ್ರದೇಶವಾದ ಕಾಶ್ಮೀರದಲ್ಲಿ ರಾಲಿ ನಡೆಸಲು ಉದ್ದೇಶಿಸಿರುವ ನಡುವೆಯೇ ಗುಲಾಂ ನಬಿ ಆಜಾದ್ ಗೆ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರೇಕ್ಷಕರನ್ನು ಹೆದರಿಸಲು ರೆಡಿ: ಹಾರರ್- ಥ್ರಿಲ್ಲರ್ ‘ಕಪಾಲ’ ಈ ವಾರ ತೆರೆಗೆ
ಬೆದರಿಕೆ ಬರಹವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಸ್ಟ್ ಮಾಡಲಾಗಿದೆ. “ದ್ರೋಹಿಗಳ ಹೃದಯದಲ್ಲಿ ನಿಷ್ಠೆಗೆ ಜಾಗವಿಲ್ಲ, ನಂಬಿಗಸ್ಥರಂತೆ ಕಾಣಿಸಿಕೊಳ್ಳುವ ಸುಳ್ಳು ಮುಖವಾಡ ಮಾತ್ರವಿರುತ್ತದೆ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಿದ್ದು, ಆಜಾದ್..ರಾಜಕೀಯದ ಊಸರವಳ್ಳಿ” ಎಂದು ಆರೋಪಿಸಲಾಗಿದೆ.
ಕಾಶ್ಮೀರದ ಕುರಿತ ಆಜಾದ್ ಅವರ ರಾಜಕೀಯ ಆಸಕ್ತಿ ಪೂರ್ವ ನಿಯೋಜಿತ ಸಿದ್ಧತೆಯಾಗಿದೆ. ತಮ್ಮ ನಿಷ್ಠೆ ಬದಲಿಸುವ ಮೊದಲು ಕಾಂಗ್ರೆಸ್ ಮಾಜಿ ಮುಖಂಡ ಆಜಾದ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಮಾತುಕತೆ ನಡೆಸಿರುವುದಾಗಿ ದೂರಿದೆ.
ಭಯೋತ್ಪಾದಕ ಸಂಘಟನೆಯ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಗುಲಾಂ ನಬಿ ಆಜಾದ್, ನನ್ನ ಜೀವಮಾನದಲ್ಲಿ ನಾನು ಅಜಿತ್ ದೋವಲ್ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.