Advertisement

ಜಿಡಿಪಿಗಿಂತ ಜಿಎಚ್‌ಪಿ ಮುಖ್ಯವಾಗಬೇಕು 

12:30 AM Jan 06, 2019 | |

ಭೂತಾನ್‌ 9 ಅಂಶಗಳ ಆಧಾರದಲ್ಲಿ ಆ ದೇಶದ ಒಟ್ಟು ಸಂತೋಷದ ಅನುಪಾತ (Gross Happiness Index)ವನ್ನು ಪರಿಗಣಿಸಲು ನಿರ್ಧರಿಸುತ್ತದೆ. ದೇಶದ ಜನರ ಮಾನಸಿಕ ಯೋಗಕ್ಷೇಮ, ಆರೋಗ್ಯ, ಶಿಕ್ಷಣ, ಸಮಯ ಬಳಕೆ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಹೊಂದಿಕೊಳ್ಳುವ ಸ್ವಭಾವ, ಉತ್ತಮ ಆಡಳಿತ, ಸಮುದಾಯಗಳ ಬೆಂಬಲ, ಪರಿಸರದ ವೈವಿಧ್ಯತೆ ಹಾಗೂ ಜೀವನ ಮಟ್ಟ. ಇವುಗಳ ಮೂಲಕ ದೇಶದ ಜನರು ಸುಖವಾಗಿ ಇದ್ದಾರೆಯೇ ಎಂಬುವುದನ್ನು ಪರಿಗಣಿಸಲು ಅಲ್ಲಿನ ಸರಕಾರ ದೃಢ ಮನಸ್ಸು ಮಾಡಿತು.

Advertisement

ಸರಕಾರ ಬಿಡುಗಡೆ ಮಾಡುವ ಜಿಡಿಪಿ ಅಥವ “ಪರ್‌ ಕ್ಯಾಪಿಟ ಇನ್‌ಕಮ್‌’ ಅಂಕಿ ಅಂಶಗಳು ಭಾರತದಂತಹ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶಕ್ಕೆ ಬಹಳ ದೊಡ್ಡ ಕಾಣಿಕೆಯನ್ನು ನೀಡಲು ಸಾಧ್ಯವಿಲ್ಲ. ದೇಶದ ಒಟ್ಟು ಆದಾಯವನ್ನು ದೇಶ ಜನಸಂಖ್ಯೆಯ ಆದಾಯ ಎಂದು ಪರಿಗಣಿಸುವುದು ಕೇವಲ ಅಂಕಿಅಂಶಗಳಲ್ಲಿ ಮಾತ್ರ ರೇಟಿಂಗ್‌ ತೋರಿಸಲು ಸಾಧ್ಯವೇ ಹೊರತು ನೈಜ ಜೀವನದಲ್ಲಿ ಸಾಧ್ಯವಿಲ್ಲ. ದೇಶಕ್ಕೆ ಜನರ ಸಂತೋಷ ಮುಖ್ಯವಾಗಬೇಕು. ಜನ ಸಂತೋಷವಾಗಿರಬೇಕಾದರೆ ಸರಕಾರಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನು ಮಾಡಬಹುದು ಎಂಬುವುದನ್ನು ಯೋಚಿಸಬೇಕಾಗಿದೆ. ಜನರಿಂದಲೇ ರೂಪಿತವಾದ ಸರಕಾರ ಜನರಿಗಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ. 

ಒಂದು ದೇಶದ ಆದಾಯ 1,000 ಕೋಟಿ ರೂ. ಎಂದಿಟ್ಟುಕೊಳ್ಳೋಣ, ಅದರಲ್ಲಿ 700 ಕೋಟಿ ರೂ. ಒಂದು ಉದ್ಯಮಿಯ ಬಳಿ ಇದ್ದರೆ, ಇನ್ನುಳಿದ 300 ಕೋಟಿ ರೂ. ಅನ್ನು 130 ಕೋಟಿ ಜನರಿಗೆ ಹಂಚಿ ಹೋದರೆ, ಇಲ್ಲಿ ಎಲ್ಲರ ತಲಾ ಆದಾಯ ಒಂದೇ ಶ್ರೇಣಿಯಲ್ಲಿರಲು ಸಾಧ್ಯವೇ? ಒಟ್ಟು ಉತ್ಪಾದಕತೆಯ ಅರ್ಧ ಪಾಲು ಒಬ್ಬ ಉದ್ಯಮಿಯ ಬಳಿಯೇ ಇದ್ದು, ಈ 1,000 ಕೋಟಿ ಈ ದೇಶದ ಜನರ ಆದಾಯ ಎಂದು ಪರಿಗಣಿಸುವುದು ಸರಿಯಾದ ಕ್ರಮವಲ್ಲ. ಇಂಥ ಸಂದರ್ಭದಲ್ಲಿ ನಾವು “ಪರ್‌ ಕ್ಯಾಪಿಟಾ ಇನ್‌ಕಂ’ ಹೆಚ್ಚಿಸುವ ಕುರಿತು ಯೋಚಿಸುವ ಬದಲು ಜನರ ಕೈಗೆ ಉದ್ಯೋಗ ನೀಡುವ ಕುರಿತು ಯೋಚಿಸಬೇಕಿದೆ. 

ಅವೈಜ್ಞಾನಿಕ ಕ್ರಮ 
ಒಂದು ಗ್ರಾಮದಲ್ಲಿ 500 ಮನೆಗಳು ಇವೆ ಎಂದಿಟ್ಟುಕೊಳ್ಳೋಣ. ಅದರಲ್ಲಿ 300 ಮನೆಗಳಲ್ಲಿ ದುಡಿಯುವ ಕೈಗಳಿವೆ, ಉತ್ಪಾದಕತೆ ಇದೆ. ಉಳಿದ 200 ಮನೆಗಳು ಉತ್ಪಾದಕತೆಯಲ್ಲಿ ಹಿಂದೆ ಬಿದ್ದಿವೆ. ಇಲ್ಲಿ ಗ್ರಾಮದ ತಿಂಗಳ ಆದಾಯ 50 ಲಕ್ಷ ರೂ. ಎಂದಾದರೆ, ಅದು ಗ್ರಾಮದ ಒಟ್ಟು ಆದಾಯ ಮಾತ್ರ. ಕೆಲವು ಕುಟುಂಬ ಮಾತ್ರ ದುಡಿದು ಗಳಿಸಿದ ಆದಾಯವೇ ಹೊರತು, ಗ್ರಾಮದ ಅಷ್ಟೂ ಮನೆಗಳ ಆದಾಯ ಅಲ್ಲ. ಅಲ್ಲಿ ಕೆಲವರು ಕಾರಲ್ಲಿ ಓಡಾಡುವವರು ಇದ್ದರೆ, ಹಲವರು ಸೈಕಲ್‌ ಅಥವಾ ನಡೆದುಕೊಂಡೇ ಹೋಗುವವರು ಇರಬಹುದು. ಸಂಪನ್ಮೂಲವನ್ನು ಅಂದಾಜು ಮಾಡಿ ಲೆಕ್ಕ ಹಾಕುವ ಜಿಡಿಪಿ ಆರ್ಥಿಕ ಶಿಸ್ತಿಗೆ ಒಳ್ಳೆಯ ಕ್ರಮವಾದರೂ, ಆ ಸಂಪನ್ಮೂಲವನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ವಿನಿಯೋಗಿಸಬಹುದು ಎಂಬುದಕ್ಕೆ ಒಳ್ಳೆಯ ಯೋಜನೆ ಹಾಕಿಕೊಳ್ಳದೇ ಹೋದರೆ ಜಿಡಿಪಿ ಶೇ. 15ರ ಮೇಲೆ ಇದ್ದರೂ, ಕುಟುಂಬದ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯವಿಲ್ಲ. 

ಪ್ರಜಾಪ್ರಭುತ್ವದಲ್ಲಿ ಜನರಿಗೆ ನೆಮ್ಮದಿ ಸಂತೋಷ ಮುಖ್ಯ ಹೊರತು, ಯಾರದೋ ಆದಾಯವನ್ನು ದೇಶದ ತಲಾ ಆದಾಯ ಎಂದು ತೋರ್ಪಡಿಸಿದರೆ ಸಾಲದು. ಸೂಚ್ಯಂಕದ ರೇಟಿಂಗ್‌ ಜನರಿಗೆ ಬೇಕಿಲ್ಲ, ಜಿಡಿಪಿ ಎಂದರೇನು? ಪರ್‌ ಕ್ಯಾಪಿಟಾ ಎಂದರೇನು? ಎಂಬುದರ ಅರಿವೂ ಗ್ರಾಮೀಣ ಭಾಗದ ಜನರಿಗೆ ಇರುವುದಿಲ್ಲ. ಗ್ರಾಮೀಣರಲ್ಲಿ ಅಂದಿಗೆ ಅಂದು ದುಡಿದು ತಿನ್ನುವ ಪರಿಸ್ಥಿತಿಯಲ್ಲಿ ತಮ್ಮದೇ ಆರ್ಥಿಕ ಶಿಸ್ತು ರೂಢಿಸಿ ಕೊಂಡಿರುತ್ತಾರೆ. ಕುಟುಂಬದ ಬಜೆಟ್‌ಗೆ ಪೂರಕವಾಗಿ ಆರ್ಥಿಕ ಸಂಪನ್ಮೂಲವನ್ನು ಬಡತನದಿಂದಲೇ ಸಂಯೋಜಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವರ ಬದುಕು ಬಡತನ ದಾಟಿ ಮುಂದಕ್ಕೆ ಹೋಗುವುದಿಲ್ಲ. ಜನರಿಗೆ ಉದ್ಯೋಗ ನೀಡಿ, ಮೂಲ ಸೌಕರ್ಯಗಳನ್ನು ನೀಡಿ ದೇಶದ ತಲಾ ಆದಾಯವನ್ನು ಲೆಕ್ಕ ಹಾಕಬೇಕೆ ವಿನಃ ದೇಶದ ಆದಾಯವನ್ನು ಜನರ ಆದಾಯ ಎಂದರೆ ಪ್ರಯೋಜನ ಇಲ್ಲ.

Advertisement

ಭೂತಾನಿನಲ್ಲಿ ಗ್ರಾಸ್‌ ಹ್ಯಾಪಿನೆಸ್‌ ಇಂಡೆಕ್ಸ್‌ 
ಹಲವು ರಾಷ್ಟ್ರಗಳು ಜಿಡಿಪಿಯ ಹಿಂದೆ ಬಿದ್ದಿವೆ. ಅಂದು ಭೂತಾನ್‌ ಮಾತ್ರ ಸಂತೋಷ, ನೆಮ್ಮದಿಯ ಅಳತೆಯಲ್ಲಿ ನಿರತವಾಯಿತು. 1972ರಲ್ಲಿ ಭೂತಾನಿನ ದೊರೆ ಜಿಗೆ ಸಿಂಗೈ ವಾಗcಕ್‌ “ದೇಶದ ಜಿಡಿಪಿಗಿಂತ ರಾಷ್ಟ್ರದ ಸಂತೋಷ ಮುಖ್ಯ’ ಎಂದು ಘೋಷಿಸಿದರು. ಅಲ್ಲಿನ ಜನರ ನೆಮ್ಮದಿಯನ್ನು ಹೆಚ್ಚಿಸುವ ಸಲುವಾಗಿ ಗ್ರಾಸ್‌ ಹ್ಯಾಪಿನೆಸ್‌ ಇಂಡೆಕ್ಸ್‌ ಅನ್ನು ಅಳವಡಿಸಲಾಯಿತು. 

ಭೂತಾನ್‌ 9 ಅಂಶಗಳ ಆಧಾರದಲ್ಲಿ ಆ ದೇಶದ ಒಟ್ಟು ಸಂತೋಷದ ಅನುಪಾತ (Gross Happiness Index)ವನ್ನು ಪರಿಗಣಿಸಲು ನಿರ್ಧರಿಸುತ್ತದೆ. ದೇಶದ ಜನರ ಮಾನಸಿಕ ಯೋಗಕ್ಷೇಮ, ಆರೋಗ್ಯ, ಶಿಕ್ಷಣ, ಸಮಯ ಬಳಕೆ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಹೊಂದಿಕೊಳ್ಳುವ ಸ್ವಭಾವ, ಉತ್ತಮ ಆಡಳಿತ, ಸಮುದಾಯಗಳ ಬೆಂಬಲ, ಪರಿಸರದ ವೈವಿಧ್ಯತೆ ಹಾಗೂ ಜೀವನ ಮಟ್ಟ. ಇವುಗಳ ಮೂಲಕ ದೇಶದ ಜನರು ಸುಖವಾಗಿದ್ದಾರೆಯೇ ಎಂಬುವುದನ್ನು ಪರಿಗಣಿಸಲು ಅಲ್ಲಿನ ಸರಕಾರ ದೃಢ ಮನಸ್ಸು ಮಾಡಿತು. ಇದರ ಬಳಿಕ 2011ರಲ್ಲಿ ವಿಶ್ವ ಸಂಸ್ಥೆ ಭೂತಾನ್‌ ಪರಿಚಯಿಸಿದ ಈ ಮಾದರಿಯನ್ನು ಅಂಗೀಕರಿಸಿ ಜಾಗತಿಕ ಮಟ್ಟದ ಸಂತೋಷದ ಅನುಪಾತ ಬಿಡುಗಡೆ ಮಾಡಲು ನಿರ್ಧರಿಸಿತು.

ಭಾರತಕ್ಕೆ 133ನೇ ಸ್ಥಾನ
2018ರಲ್ಲಿ ವಿಶ್ವ ಸಂಸ್ಥೆ ಬಿಡುಗಡೆ ಮಾಡಿದ‌ “ವರ್ಲ್ಡ್ ಹ್ಯಾಪಿನೆಸ್‌ ರಿಪೋರ್ಟ್‌’ (WHR)ನಲ್ಲಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳನ್ನು ಅವಲೋಕಿಸಿ ಸಂತೋಷದ ಜೀವನ ನಡೆಸುವ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ವಿಶ್ವದ ಟಾಪ್‌ 10 ಆನಂದದಾಯಕ ರಾಷ್ಟ್ರಗಳಲ್ಲಿ ಫಿನ್‌ಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಅನಂತರದ ಸ್ಥಾನದಲ್ಲಿ ನಾರ್ವೇ, ಡೆನ್ಮಾರ್ಕ್‌, ಐಲ್ಯಾಂಡ್‌, ಸ್ವಿÌಜರ್‌ಲ್ಯಾಂಡ್‌, ನೆದರ್‌ಲ್ಯಾಂಡ್‌, ಕೆನಡ, ನ್ಯೂಜಿಲ್ಯಾಂಡ್‌, ಸ್ವೀಡನ್‌ ಮತ್ತು ಆಸ್ಟ್ರೇಲಿಯಾ ಇದೆ. ಬೇಸರದ ಸಂಗತಿ ಎಂದರೆ 156 ದೇಶಗಳಲ್ಲಿ ಭಾರತ 133ನೇ ಸ್ಥಾನದಲ್ಲಿದೆ. ಪ್ರಬಲ ರಾಷ್ಟ್ರಗಳಾದ ಅಮೆರಿಕಾ 18ನೇ ಹಾಗೂ ಇಂಗ್ಲೆಂಡ್‌ 19ನೇ ಸ್ಥಾನದಲ್ಲಿವೆ.

ಕಡಿಮೆ ಅಭಿವೃದ್ಧಿ ಹೊಂದಿದ ನೆರೆ ರಾಷ್ಟ್ರಗಳಾದ ಪಾಕಿಸ್ಥಾನ, ಭೂತಾನ್‌, ನೇಪಾಲ, ಶ್ರೀಲಂಕಾ, ಬಾಂಗ್ಲಾ ದೇಶಗಳ ಬಳಿಕದ ಸ್ಥಾನದಲ್ಲಿ ಭಾರತ ಇದೆ. ಯುದ್ಧದ ಹಾನಿಗೆ ಒಳಗಾದ ಅಫ‌ಘಾನಿಸ್ಥಾನ 145ನೇ ಸ್ಥಾನದಲ್ಲಿದೆ. ವಿಶ್ವ ಸಂಸ್ಥೆ “ಹ್ಯಾಪಿನೆಸ್‌ ರಿಪೋರ್ಟ್‌’ ತಯಾರಿಸುವ ಸಂದರ್ಭ ತಲಾ ಆದಾಯ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸಾಮಾಜಿಕ ಸ್ವಾತಂತ್ರ್ಯ, ಔದಾರ್ಯ ಹಾಗೂ ಭ್ರಷ್ಟಾಚಾರದ ಮಟ್ಟವನ್ನು ಗಣನೆಗೆ ತೆದುಕೊಳ್ಳುತ್ತದೆ. 2018ರ ಡಬ್ಲ್ಯುಎಚ್‌ಆರ್‌ ವರದಿ ಪ್ರಕಾರ ಭಾರತೀಯರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರು ವುದು ಹೆಚ್ಚಾಗುತ್ತಿದೆ. ಭಾರತ ಉಪಖಂಡದಿಂದ ಗಲ್ಫ್ ರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ವಲಸೆ ಹೋಗುತ್ತಿದ್ದಾರೆ ಎಂದು ವರದಿ ಹೇಳಿದೆ. 

ವರ್ಲ್ಡ್ ಹ್ಯಾಪಿನೆಸ್‌ ರಿಪೋರ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಇರುವ ರಾಷ್ಟ್ರಗಳು ಯಾವುದೂ ಆರ್ಥಿಕವಾಗಿ ಬಲಿಷ್ಠವಾಗಿಲ್ಲ. ಆ ದೇಶಗಳ ತಲಾ ಆದಾಯ ಭಾರಿ ಚೇತರಿಕೆಯನ್ನು ಕಂಡಿಲ್ಲ.

ಕಾರ್ತಿಕ್‌ ಅಮೈ 

Advertisement

Udayavani is now on Telegram. Click here to join our channel and stay updated with the latest news.

Next