Advertisement

200 ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ ವಿಧಾನ ಪರಿಷತ್ ಸದಸ್ಯ ಘೋಟ್ನೇಕರ

08:38 PM Aug 23, 2021 | Team Udayavani |

ದಾಂಡೇಲಿ: ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಆಹಾರದ ಕಿಟ್ ವಿತರಿಸಿದ್ದಾರೆ.

Advertisement

ದಾಂಡೇಲಿ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಮಡ್ಡಿ ಗ್ರಾಮದಲ್ಲಿರುವ ಶ್ರೀ ದಾಂಡೇಲಪ್ಪನ ಸನ್ನಿಧಿಯಲ್ಲಿ ಬಡವರಿಗೆ ಮತ್ತು ಕಾಳಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಕಳೆದೆರೆಡು ವರ್ಷಗಳಿಂದ ಕೋವಿಡ್ ಸೊಂಕು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಜನರು ಉದ್ಯೋಗವಿಲ್ಲದೆ ನರಳುವಂತಾಗಿದೆ ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿ ಎನಿಸಿಕೊಂಡ ನಾನು ಜನರ ಕಷ್ಟಕ್ಕೆ ತಕ್ಕಮಟ್ಟಿಗಾದರೂ ಸ್ಪಂದಿಸುವ ನಿಟ್ಟಿನಲ್ಲಿ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸುತ್ತಿದೇನೆ ಎಂದರು.

ಶ್ರೇಯಸ್ ಶ್ರೀನಿಧ ಕಾರ್ಖಾನೆಗಳು ಪುನಾರಂಭಗೊಳ್ಳಲು ಈ ಮೊದಲಿನಂತೆ ಇನ್ನೂಳಿದ ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆಹರಿಸಿಕೊಡುತ್ತೆನೆ. ಕೋವಿಡ್ ಸೊಂಕಿನಿಂದ ಪಾರಾಗಲು ಜನಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಆಡೆಳಿತ ಮಂಡಳಿ ಆದಷ್ಟು ಬೇಗನೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಘೋಟ್ನೇಕರ ಅವರು ಆಗ್ರಹಿಸಿದರು.

ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಾ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿ ತಾಲೂಕಿನ ಬಡಾಕಾನ್ಸಿಡಾ ಗ್ರಾಮದಲ್ಲಿ ಕೊಟ್ಟಿಗೆಗೆ ಬೆಂಕಿಹೊತ್ತಿಕೊಂಡ ಪರಿಣಾಮ ಎರಡು ಎತ್ತುಗಳು ಸಾವನ್ನಪ್ಪಿದ್ದವು. ಆಗ ಸಹಾಯ ಮಾಡುವುದಾಗಿ ಗ್ರಾಮಕ್ಕೆ ಭೇಟಿ ನೀಡಿ ಹೇಳಿದ್ದ ಘೋಟ್ನೇಕರ ಅವರು ಕೊಟ್ಟ ಮಾತಿನಂತೆ ಇಂದಿನ ಕಿಟ್ ವಿತರಣೆಯ ವೇದಿಕೆಯ ಮೇಲೆ ಸಂತ್ರಸ್ಥ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಮಾನವಿಯತೆ ಪ್ರದರ್ಶಿಸಿದ್ದಾರೆಂದರು.

Advertisement

ಕಾರ್ಯಕ್ರಮದಲ್ಲಿ ಒಟ್ಟು 200 ಕುಟುಂಬಗಳಿಗೆ ಹಾಗೂ ದಿನ ಪತ್ರಿಕೆ ವಿತರಕರುಗಳಿಗೆ ಆಹಾರ ಕಿಟ್ ವಿತರಿಸಿದರು. ಪತ್ರಕರ್ತರಿಗೆ ಆಹಾರ ಕಿಟ್ ಹಾಗೂ ಆರ್ಥಿಕ ಸಹಾಯ ಮಾಡಿದರು.

ಮಾಜಿ ಜಿಲ್ಲಾ ಪಂಚಾಯ್ತು ಸದಸ್ಯ ವಾಮನ್ ಮಿರಾಶಿ, ಹಳಿಯಾಳದ ತುಕಾರಾಮ ಗೌಡ, ಮತ್ತು ಎಸ್.ಆರ್.ಗುಂಡುಪಕರ ಅವರುಗಳು ಸಂದರ್ಬೋಚಿತವಾಗಿ ಮಾತನಾಡಿದರು. ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಜಾಧವ ಅತಿಥಿಗಳನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೈತಾನ ಬಾರ್ಬೋಜಾ, ನ್ಯಾಯವಾದಿ ವಿಶ್ವನಾಥ ಜಾಧವ, ಬಡಾಕಾನ್ಸಿಡಾ ಗ್ರಾಮ ಪಂಚಾಯಿತಿ ಸದಸ್ಯ ಗೋಕುಲ್ ಮಿರಾಶಿ, ಮುಖಂಡರುಗಳಾದ ಮಾರುತಿ ಕಾಮ್ರೇಕರ, ಶಂಕರ ಮಿರಾಸಿ, ಚಂದ್ರಹಾಸ ಪೂಜಾರಿ, ಓಮಣ್ಣ ಮೊಗ್ರಿ, ಮಾರುತಿ ಮಿರಾಸಿ, ಗಣಪತಿ ಬೇಕನಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next