Advertisement

ಶಿವಣ್ಣ ಬರ್ತ್‌ಡೇಗೆ ‘ಘೋಸ್ಟ್‌’ ಬಿಗ್‌ ಡ್ಯಾಡಿ ವಿಡಿಯೋ

01:17 PM Jul 01, 2023 | |

ನಟ ಶಿವರಾಜಕುಮಾರ್‌ ಅಭಿನಯದ “ಘೋಸ್ಟ್‌’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ನಿಧಾನವಾಗಿ “ಘೋಸ್ಟ್‌’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ಕೊಡುವ ತಯಾರಿಯಲ್ಲಿದೆ.

Advertisement

ಹೌದು, ಇದೇ ಜುಲೈ 12ರಂದು ನಟ ಶಿವರಾಜಕುಮಾರ್‌ ಅವರ ಹುಟ್ಟುಹಬ್ಬವಿದ್ದು, ಈ ಸಂದರ್ಭದಲ್ಲಿ “ಘೋಸ್ಟ್‌’ ಚಿತ್ರದ “ಬಿಗ್‌ ಡ್ಯಾಡಿ…’ ವಿಡಿಯೋ ಬಿಡುಗಡೆಯಾಗಲಿದೆ. ಈಗಾಗಲೇ ಈ ಕುರಿತು ಜುಲೈ 12 “ಬಿ. ಡಿ’ (ಬಿಗ್‌ ಡ್ಯಾಡಿ) ಎಂಬ ಪೋಸ್ಟರ್‌ ಸಹ ಸೋಶಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆಯಾಗಿದೆ. ಈ “ಬಿಗ್‌ ಡ್ಯಾಡಿ…’ ವಿಡಿಯೋದಲ್ಲಿ ಏನಿರಬಹುದು ಎಂಬ ಕುತೂಹಲದಲ್ಲಿದ್ದಾರೆ ಶಿವಣ್ಣ ಫ್ಯಾನ್ಸ್‌.

ಅಂದಹಾಗೆ, “ಘೋಸ್ಟ್‌’ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. “ಸಂದೇಶ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸಂದೇಶ್‌ ಎನ್‌. ನಿರ್ಮಿಸುತ್ತಿರುವ “ಘೋಸ್ಟ್‌’ ಸಿನಿಮಾಕ್ಕೆ ಹಾಗೂ ಶ್ರೀನಿ ನಿರ್ದೇಶನವಿದೆ.

“ಘೋಸ್ಟ್‌’ ಸಿನಿಮಾದಲ್ಲಿ ಶಿವರಾಜಕುಮಾರ್‌ ಅವರೊಂದಿಗೆ ಅನುಪಮ್‌ ಖೇರ್‌, ಜಯರಾಂ, ಸತ್ಯಪ್ರಕಾಶ್‌, ಪ್ರಶಾಂತ್‌ ನಾರಾಯಣನ್‌, ದತ್ತಣ್ಣ, ಅಭಿಜಿತ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next