Advertisement

ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ವಾರ್ಷಿಕೋತ್ಸವ

10:11 AM Feb 16, 2018 | Team Udayavani |

ಥಾಣೆ: ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ ಇದರ ವಾರ್ಷಿಕೋತ್ಸವ, ಸಮ್ಮಾನ ಹಾಗೂ ನೃತ್ಯ ಸ್ಪರ್ಧೆಯು ಫೆ. 10 ರಂದು ಥಾಣೆ ಪಶ್ಚಿಮದ ಹೀರಾನಂದಾನಿ ಮಿಡೋಸ್‌ನಲ್ಲಿರುವ ಡಾ| ಕಾಶೀನಾಥ್‌ ಗಾಣೇಕರ್‌ ಸಭಾಂಗಣದಲ್ಲಿ ಜರಗಿತು.

Advertisement

ಸಮಾರಂಭದಲ್ಲಿ ಹಿರಿಯ ಸದಸ್ಯರಾದ ಉಪಾಧ್ಯಕ್ಷ ಗೋಪಾಲ್‌ ಶೆಟ್ಟಿ ಮತ್ತು ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ನ ಭಜನ ಮಂಡಳಿಯ ಸದಸ್ಯರನ್ನು ಸಮ್ಮಾನಿಸಿ ಶುಭಹಾರೈಸಿದರು.

14 ತಂಡಗಳು ಭಾಗವಹಿಸಿದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿ ಡೊಂಬಿವಲಿ ಪ್ರಥಮ ಸ್ಥಾನ ಪಡೆಯಿತು. ವರ್ತಕ್‌ ನಗರದ ಕನ್ನಡ ಸಂಘ ದ್ವಿತೀಯ ಹಾಗೂ ನವೋದಯ ಕನ್ನಡ ಸಂಘ ತೃತೀಯ ಬಹುಮಾನವನ್ನು ಮುಡಿಗೇರಿಸಿಕೊಂಡಿತು. ವಿಜೇತ ತಂಡಗಳಿಗೆ ಗಣ್ಯರು ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನಿತ್ತು ಗೌರವಿಸಿದರು.

ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ತಂಡವು ವಿಶೇಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ತೀರ್ಪುಗಾರರಾಗಿ ಮೀರಾರೋಡ್‌ ಅಮಿತಾ ಕಲಾ ಮಂದಿರದ ನೃತ್ಯಗುರು ಅಮಿತಾ ಜತೀನ್‌, ಅರುಣೋದಯ ನೃತ್ಯ ವಿದ್ಯಾಲಯದ ವಿದುಷಿ ಮೀನಾಕ್ಷೀ ಸುವರ್ಣ, ಲೇಖಕ ಅರುಣ್‌ ಕುಮಾರ್‌ ಶೆಟ್ಟಿ ಎರ್ಮಾಳ್‌ ಸಹಕರಿಸಿದರು.

ಕೋಶಾಧಿಕಾರಿ ಜಯ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಶೆಟ್ಟಿ ವರದಿ ವಂದಿಸಿದರು. ಸಭಾ ಕಾರ್ಯಕ್ರಮವನ್ನು ಜತೆ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಬೆಳುವಾಯಿ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಶೆಟ್ಟಿ ವಂದಿಸಿದರು.

Advertisement

ವೇದಿಕೆಯಲ್ಲಿ ಥಾಣೆ  ಮಹಾನಗರ ಪಾಲಿಕೆಯ ಮೇಯರ್‌ ಮೀನಾಕ್ಷೀ ಶಿಂಧೆ, ಥಾಣೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ, ಮುಂಬಯಿ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಥಾಣೆ ಬಂಟ್ಸ್‌ನ ಕೋಶಾಧಿಕಾರಿ ಭಾಸ್ಕರ ಎನ್‌. ಶೆಟ್ಟಿ, ಕಾರ್ಯಕ್ರಮದ ಉದ್ಘಾಟಕ, ಕಲಾಪೋಷಕ ಲಕ್ಷ¾ಣ್‌ ಮಣಿಯಾಣಿ, ಕನ್ನಡ ಅಸೋಸಿಯೇಶನ್‌ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ, ಉಪಾಧ್ಯಕ್ಷರುಗಳಾದ ಗೋಪಾಲ್‌ ಶೆಟ್ಟಿ ಮತ್ತು ಪ್ರಶಾಂತ್‌ ನಾಯಕ್‌, ಗೌರವ ಕಾರ್ಯದರ್ಶಿ ಹರೀಶ್‌ ಡಿ. ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಯುವ ವಿಭಾಗದವರು ಸಹಕರಿಸಿದರು.

ನಾಟಕ ಪ್ರದರ್ಶನ 
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸದಸ್ಯೆಯರಿಂದ ನೃತ್ಯ ವೈಭವ, ಸಪ್ತಸ್ವರ ಕಲಾವಿದರಿಂದ ಯಮುನ ದಾನೆ ನಮೂನೆ ತುಳು ನಾಟಕ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next