Advertisement

ಹೈದರಾಬಾದ್ ಫಲಿತಾಂಶ: ಟಿಆರ್ ಎಸ್ ಬಹುಮತಕ್ಕೆ ಬಿಜೆಪಿ ಬ್ರೇಕ್, AIMIM, TRS ಮೈತ್ರಿ

11:08 AM Dec 05, 2020 | Nagendra Trasi |

ಹೈದರಾಬಾದ್:ತೀವ್ರ ಕುತೂಹಲ ಕೆರಳಿಸಿದ್ದ ಹೈದರಾಬಾದ್ ನಗರ ಪಾಲಿಕೆ(ಜಿಎಚ್ ಎಂಸಿ) ಚುನಾವಣೆಯಲ್ಲಿ ಆಡಳಿತಾರೂಢ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಗೆ ತೀವ್ರ ಹಿನ್ನಡೆಯಾಗಿದ್ದು, ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

Advertisement

150 ಸದಸ್ಯ ಬಲದ ಗ್ರೇಟರ್ ಹೈದರಾಬಾದ್ ನಗರ ಪಾಲಿಕೆಯಲ್ಲಿ ಟಿಆರ್ ಎಸ್ 55 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಬಹುಮತಕ್ಕೆ ಬೇಕಾದ 21 ಸ್ಥಾನಗಳ ಕೊರತೆ ಎದುರಿಸಿದೆ. 2015ರಲ್ಲಿ ನಡೆದ ಜಿಎಚ್ ಎಂಸಿ ಚುನಾವಣೆಯಲ್ಲಿ ಟಿಆರ್ ಎಸ್ 99 ಸ್ಥಾನಗಳಲ್ಲಿ ಜಯಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿತ್ತು.

ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪ್ರತಿಷ್ಠೆಯಾಗಿಸಿಕೊಂಡು ಕಣಕ್ಕಿಳಿದಿತ್ತು. ಇದರ ಪರಿಣಾಮ ಟಿಆರ್ ಎಸ್ ಬಹುಮತ ಪಡೆಯುವ ಕನಸಿಗೆ ತಣ್ಣೀರೆರಚಿದೆ. ನಮಗೆ ಈ ಬಾರಿ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿದಿದೆ. ನಾವು ಇದನ್ನು ಊಹಿಸಿರಲಿಲ್ಲ. ನಮಗೆ ಇನ್ನೂ 25ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಮತಗಟ್ಟೆ ಸಮೀಕ್ಷೆ ಕೂಡಾ ಟಿಆರ್ ಎಸ್ ಗೆಲುವು ಸಾಧಿಸಲಿದೆ ಎಂದು ತಿಳಿಸಿತ್ತು ಎಂಬುದಾಗಿ ಟಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ನ್ಯೂಜಿಲ್ಯಾಂಡ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಕೋರಿ ಆ್ಯಂಡರ್ಸನ್: ಹೊಸ ತಂಡದ ಜತೆ ಒಪ್ಪಂದ

2015ರ ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಕೇವಲ 4 ಸ್ಥಾನಗಳಲ್ಲಿ ಮಾತ್ರ ಜಯಸಾಧಿಸಿತ್ತು. 2020ರ ಚುನಾವಣೆಯಲ್ಲಿ ಬಿಜೆಪಿಯ ಅಮಿತ್ ಶಾ, ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬಿರುಸಿನ ಪ್ರಚಾರ ನಡೆಸುವ ಮೂಲಕ 48 ಸ್ಥಾನಗಳಲ್ಲಿ ಭರ್ಜರಿ ಗೆಲುವು ಪಡೆಯುವಂತಾಗಿದೆ.

Advertisement

ಹೈದರಾಬಾದ್ ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಎಐಎಂಐಎಂ ತೀವ್ರ ಪೈಪೋಟಿ ನೀಡುವ ಮೂಲಕ 44 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಕಳೆದ ಚುನಾವಣೆಯಲ್ಲಿನ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.(2015ರ ಹೈದರಾಬಾದ್ ಚುನಾವಣೆಯಲ್ಲಿ ಎಐಎಂಐಎಂ 44 ಸ್ಥಾನಗಳಲ್ಲಿ ಜಯಗಳಿಸಿತ್ತು).

ಜಿಎಚ್ ಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಎರಡು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಹೀನಾಯ ಸೋಲು ಕಂಡಿದೆ. ಟಿಡಿಪಿ ಹಾಗೂ ಪಕ್ಷೇತರರು ಒಂದೂ ಸ್ಥಾನಗಳಲ್ಲಿ ಗೆಲುವು ಸಾಧಿಸಲಿಲ್ಲ.

ಎಐಎಂಐಎಂ ಜತೆ ಟಿಆರ್ ಎಸ್ ಮೈತ್ರಿ:

ಗ್ರೇಟರ್ ಹೈದರಾಬಾದ್ ನಗರ ಪಾಲಿಕೆ ಚುನಾವಣೆಯಲ್ಲಿ ಟಿಆರ್ ಎಸ್ ಬಹುಮತ ಕಳೆದುಕೊಂಡರೂ ಕೂಡಾ ಮೇಯರ್ ಹುದ್ದೆಯನ್ನು ತನ್ನ ಪಾಲಿಗೆ ಉಳಿಸಿಕೊಂಡಿದೆ. ನಗರ ಪಾಲಿಕೆಯಲ್ಲಿ ಬಹುಮತಕ್ಕೆ 76 ಸ್ಥಾನಗಳ ಅಗತ್ಯವಿದ್ದು, 55 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಟಿಆರ್ ಎಸ್ ಒವೈಸಿಯ ಎಐಎಂಐಎಂ ಪಕ್ಷದ (44) ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next