Advertisement

ಹೈದರಾಬಾದ್ ನಗರಪಾಲಿಕೆ ಫಲಿತಾಂಶ: ಆಡಳಿತಾರೂಢ ಟಿಆರ್ ಎಸ್ ಗೆ ಭರ್ಜರಿ ಮುನ್ನಡೆ

01:26 PM Dec 04, 2020 | Nagendra Trasi |

ಹೈದರಾಬಾದ್: ಭಾರೀ ಕುತೂಹಲ ಮೂಡಿಸಿರುವ ಹೈದರಾಬಾದ್ ನಗರ ಪಾಲಿಕೆ ಚುನಾವಣಾ ಫಲಿತಾಂಶದ ಮತಎಣಿಕೆ ಶುಕ್ರವಾರ(ಡಿಸೆಂಬರ್ 04, 2020) ಬೆಳಗ್ಗೆ 8ಗಂಟೆಯಿಂದ ಆರಂಭಗೊಂಡಿದ್ದು ಸಂಜೆಯೊಳಗೆ ಪೂರ್ಣ ಚಿತ್ರಣ ಲಭ್ಯವಾಗಲಿದೆ. ಸದ್ಯದ ಫಲಿತಾಂಶದ ಪ್ರಕಾರ ಆಡಳಿತಾರೂಢ ಟಿಆರ್ ಎಸ್ ಭರ್ಜರಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ.

Advertisement

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ 57ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಭಾರತೀಯ ಜನತಾ ಪಕ್ಷ 22 ಹಾಗೂ ಒವೈಸಿ ಎಐಎಂಐಎಂ ಪಕ್ಷ 33 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿ ತಿಳಿಸಿದೆ.

ಮತ್ತೊಂದೆಡೆ ಎಐಎಂಐಎಂ ಮಾಜಿ ಮೇಯರ್ ಮೊಹಮ್ಮದ್ ಮಜೀದ್ ಹುಸೈನ್ ಮೆಹದಿಪಟ್ಲಂ ವಾರ್ಡ್ ನಲ್ಲಿ ಜಯ ಸಾಧಿಸಿದ್ದು, ಯೂಸುಫ್ ಗುಡಾದಲ್ಲಿ ಟಿಆರ್ ಎಸ್ ಅಭ್ಯರ್ಥಿ ರಾಜ್ ಕುಮಾರ್ ಪಟೇಲ್ ಗೆದ್ದಿರುವುದಾಗಿ ವರದಿ ವಿವರಿಸಿದೆ.

ಬೆಳಗ್ಗೆ 10.30ರ ಮತಎಣಿಕೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ 82 ವಾರ್ಡ್ ಗಳಲ್ಲಿ, ಟಿಆರ್ ಎಸ್ 31 ಹಾಗೂ ಎಐಎಂಐಎಂ 16 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿತ್ತು. ಆದರೆ ನಂತರದ ಸುತ್ತುಗಳ ಮತಎಣಿಕೆಯಲ್ಲಿ ಟಿಆರ್ ಎಸ್ ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಇಂಡೋ-ಆಸೀಸ್ ಟಿ20 ಸಮರ: ಟಾಸ್ ಗೆದ್ದ ಫಿಂಚ್, ನಟರಾಜನ್ ಪದಾರ್ಪಣೆ

Advertisement

ಈ ಚುನಾವಣೆಯಲ್ಲಿ 74 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಿಎಚ್ ಎಂಸಿ 150 ವಾರ್ಡ್ ಗಳನ್ನು ಹೊಂದಿದ್ದು, 1122 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನಡೆಯಲಿದ್ದು, ಡಿಸೆಂಬರ್ 4ರಂದು ಮತ ಎಣಿಕೆ ನಡೆಯುತ್ತಿದ್ದು, ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ.

2016ರ ಫೆಬ್ರುವರಿಯಲ್ಲಿ ನಡೆದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ 99 ಸ್ಥಾನ ಪಡೆದಿದ್ದು, ಅಸಾದುದ್ದೀನ್ ಒವೈಸಿಯ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ 04 ಹಾಗೂ ಕಾಂಗ್ರೆಸ್ 02, ಟಿಡಿಪಿ ಒಂದು ಸ್ಥಾನದಲ್ಲಿ ಮಾತ್ರ ಜಯ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next